ಆರೋಗ್ಯ

ಮಗುವಿಗೆ ಬಾಟಲಿಯ ಹಾಲನ್ನು ಉಪಯೋಗಿಸದ೦ತೆ ವೈದ್ಯರು ಏಕೆ ಉಪದೇಶಿಸುತ್ತಾರೆ ಗೋತ್ತೇ?

Pinterest LinkedIn Tumblr

baby_niple_bottel2

ಬಾಣಂತಿಯರಿಗೆ ಸರಿಯಾಗಿ ಹಾಲು ಉತ್ಪತ್ತಿಯಾಗದೇ ಇದ್ದ ಸಂಧರ್ಭ ಅಥವಾ ಕೆಲಸಕ್ಕೆ ಹೋಗಬೇಕಾಗಿರುವ ಮಹಿಳೆಯರಲ್ಲಿ ಮಗುವಿಗೆ ಬಾಟಲ್‌ ಹಾಲನ್ನು ಕೊಡಬಹುದೇ ಅಥವಾ ಕೊಡಬಾರದೆ ಎಂಬುದರ ಕುರಿತಂತೆ ಸಂಶಯವಿರುವುದು ಖಂಡಿತಾ. ಅ೦ಥಹ ಸ೦ದೇಹಗಳನ್ನು ನಿವಾರಿಸುವ ಸಣ್ಣ ಪ್ರಯತ್ನ ಇಲ್ಲಿದೆ.

* ಬಾಟಲಿಯ ಹಾಲನ್ನು ಉಪಯೋಗಿಸದ೦ತೆ ವೈದ್ಯರು ಏಕೆ ಉಪದೇಶಿಸುತ್ತಾರೆ ಗೋತ್ತೇ?
ಬಾಟಲಿಯನ್ನು ಎಷ್ಟೇ ಸ್ಟೆರಿಲೈಸ್ ಮಾಡಿದರೂ ಮಗುವಿಗೆ ಇನ್ಫೆಕ್ಷನ್ ಆಗುವ ಸ೦ಭವವಿದೆ. ಇದರಿಂದ ಭೇದಿ ಅಥವಾ ಉಸಿರಾಟದ ಇನ್ಫೆಕ್ಷನ್ ಆಗಬಹುದು.

* ಅಪರೂಪಕ್ಕೆ ನಿಮ್ಮ ಮಗುವಿಗೆ ಬಾಟಲಿಯ ಹಾಲನ್ನು ನೀಡಬಹುದೇ?
ಬಾಟಲಿಯ ಹಾಲನ್ನು ಅಪರೂಪಕ್ಕೆ ನೀಡಿದರೆ ನಿಮ್ಮ ಮಗುವಿಗೆ ನಿಪ್ಪಲ್ ಬಗ್ಗೆ ಕನ್ ಫ್ಯೂಶನ್ ಉ೦ಟಾಗುತ್ತದೆ. ಮೊಲೆಹಾಲಿಗೆ ಹೋಲಿಸಿದರೆ ಬಾಟಲಿಯ ಹಾಲು ನಿಷ್ಕ್ರಿಯ. ಹಾಗಾಗಿ ಮಗು ಒಮ್ಮೆ ಬಾಟಲಿಯ ಹಾಲಿಗೆ ಹೊ೦ದಿಕೊ೦ಡರೆ ಮೊಲೆಯ ಹಾಲನ್ನು ಹೀರಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಹಾಗೆಯೇ ಮೊಲೆಹಾಲನ್ನು ಕುಡಿಯುವುದನ್ನು ನಿಲ್ಲಿಸಲೂ ಬಹುದು.

baby_niple_bottel1

* ಯಾವ ರೀತಿಯ ಬಾಟಲಿಯನ್ನು ಆಯ್ಕೆ ಮಾಡಿ ಕೊಳ್ಳಬೇಕು?
ನೀವು ಮೂರು ವಿಧದ ಬಾಟಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು
ಬಿ ಪಿ ಎ ನಿ೦ದ ಮುಕ್ತವಾಗಿರುವ ಬಾಟಲಿಗಳು, ಇವು ಪ್ಲಾಸ್ಟಿಕ್ ನಲ್ಲಿ ಕ೦ಡು ಬರುವ ವಿಷ ಕಾರಕ ಬಿಸ್ಫಿನಾಲ್ ಎ ವಸ್ತುಗಳಿದ ಮುಕ್ತವಾಗಿದೆ.
ಬಾಟಲಿಯಲ್ಲಿ ಗಾಳಿ ಹೋಗಲು ಜಾಗವಿದ್ದರೆ, ಹಾಲನ್ನು ಕುಡಿಯುವಾಗ ಗಾಳಿಯ ಸೇವನೆ ಯನ್ನು ಕಡಿಮೆ ಮಾಡಬಹುದು. ಇದರಿ೦ದ ಮಗು ಕೋಲಿಕ್ ಅ೦ಶವನ್ನು ಹೀರಿ ಕೊಳ್ಳುವುದು ಕಡಿಮೆಯಾಗುತ್ತದೆ.
ಗ್ಲಾಸ್ ಬಾಟಲಿಗಳು ತು೦ಬಾ ದುಬಾರಿಯಾಗಿದ್ದು ಅತಿ ಸುಲಭವಾಗಿ ಒಡೆದು ಹೋಗುತ್ತದೆ.

* ನಾನು ಮಗುವಿಗೆ ಬಾಟಲಿಯ ಹಾಲನ್ನು ಹೇಗೆ ಅಭ್ಯಾಸ ಮಾಡಿಸಲಿ?
ಸಣ್ಣದಾಗಿ ಹಾಲು ಹೋಗುವ ನಿಪ್ಪಲ್ ನ್ನು ಬಳಸಿ
ಮಗು ಮಲಗಿರುವಾಗ ಹಾಲುಣಿಸಬೇಡಿ. 45-ಡಿಗ್ರಿ ಕೋನದಲ್ಲಿ ಉಣಿಸಿದರೆ ಉಸಿರುಗಟ್ಟುವುದರಿ೦ದ ತಪ್ಪಿಸಬಹುದು.
ಹಾಲುಣಿಸುವ ಸ೦ದರ್ಭ ಮಧ್ಯ ಮಧ್ಯದಲ್ಲಿ ಮಗುವಿನ ಬೆನ್ನನ್ನು ನೇವರಿಸುತ್ತಿರಿ

Comments are closed.