ಕರಾವಳಿ

ಕುಂಭಾಸಿ ಮಕ್ಕಳ ಮನೆಯ ಇಬ್ಬರು ವಿದ್ಯಾರ್ಥಿನಿಯರು ಫರ್ಸ್ಟ್ ಕ್ಲಾಸ್ ಪಾಸ್!

Pinterest LinkedIn Tumblr

ಕುಂದಾಪುರ: ಇವರಲ್ಲಿ ಒಬ್ಬಾಕೆ ಕಳೆದ ಬಾರಿ ಎಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವಳು. ಇನ್ನೊಬ್ಬಳು ಒಂದೆರಡು ವರ್ಷ ಶಾಲೆ ಬಿಟ್ಟು ಹೊರಗಿದ್ದು ಮತ್ತು ಶಿಕ್ಷಣದತ್ತ ಮುಖ ಮಾಡಿದವಳು. ಇಬ್ಬರು ಕೂಡ ಕುಂಭಾಸಿ ಕೊರಗ ಕಾಲನಿ ನಿವಾಸಿಗಳು. ಆದ್ರೆ ಇರೋದು ಮಾತ್ರ ಮಕ್ಕಳ ಮನೆಯಲ್ಲಿ.

ಈ ಮಕ್ಕಳ ಮನೆಯಲ್ಲಿ ಸಾವಿತ್ರಿ (438) ಹಾಗೂ ಸುಪರ್ಣಾ (373) ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಹೌದು ಕುಂಭಾಸಿಯಲ್ಲಿರುವ ಈ ಮಕ್ಕಳ ಮನೆ ಇವರ ವಿದ್ಯಾರ್ಜನೆಯ ಕೇಂದ್ರ. ಆಟ, ಪಾಠ, ಊಟ ಎಲ್ಲವೂ ಈ ಮಕ್ಕಳಿಗೆ ‘ಮಕ್ಕಳ ಮನೆ’ಯಲ್ಲಿ ಆಗುತ್ತೆ. ಹತ್ತಾರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ರೂಪಿಸುತ್ತಿರುವ ಕೊರಗ ಶ್ರೇಯೋಭಿವ್ರದ್ಧಿ ಸಂಘದ ಗಣೇಶ್ ಕೊರಗ ಪರಿಕಲ್ಪನೆಯಲ್ಲಿ ಐಟಿಡಿಪಿ ಹಾಗೂ ಇತರಾ ಇಲಾಖೆಗಳ ನೆರವಿನಲ್ಲಿ ಈ ಮಕ್ಕಳ ಮನೆ ಕಾರ್ಯಚರಿಸುತ್ತಿದೆ.

 

Comments are closed.