ಆರೋಗ್ಯ

ದೈತ್ಯ ದೇಹವನ್ನು ಹೊಂದಿದವರನ್ನು ಟೀಕೆ-ತಮಾಷೆ ಮಾಡುವ ಮುಂಚೆ ಈ ವರದಿ ಒಮ್ಮೆ ಓದಿ…

Pinterest LinkedIn Tumblr

fat-guy

ದೈತ್ಯ ದೇಹವನ್ನು ಹೊಂದಿ, ಈ ಬಗ್ಗೆ ನಿರಂತರವಾಗಿ ಟೀಕೆಗೊಳಗಾಗುವವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನವೊಂದು ಹೇಳಿದೆ. ಭಾರತ ಮೂಲದ ಮಾಯಾ ವಡಿವೆಲೂ ಸೇರಿ ತಜ್ಞರ ತಂಡವೊಂದು ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ದಪ್ಪವಿದ್ದರೆ ನಿರಂತರವಾಗಿ ಟೀಕೆ ಗೊಳಗಾಗುತ್ತಾರೆ.

ಹಲವು ಬಾರಿ ಅವರ ಹೆಸರು ಕರೆಯುವ ಬದಲು ಅವರ ದೇಹದ ಗಾತ್ರದ ಮೇಲೆ ಹೊಸ ಹೆಸರನ್ನು ನಾಮಕರಣ ಮಾಡಲಾಗುತ್ತದೆ. ಹೀಗೆ ನಿರಂತರ ವಾಗಿ ದೇಹದ ತೂಕದ ಬಗ್ಗೆ ಟೀಕೆಗೊಳಗಾಗುವವರಿಗೆ ಹೃದಯದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಎರಡರಷ್ಟು ಹೆಚ್ಚು ಎಂದು ಅಧ್ಯಯನ ತಂಡ ಎಚ್ಚರಿಸಿದೆ. ದೈತ್ಯ ದೇಹ ಹೊಂದಿರುವವರನ್ನು ಟೀಕಿಸಿದರೆ ಅದು ಅವರ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅವರು ವೈದ್ಯರನ್ನು ಸಂರ್ಪಸುವುದನ್ನೇ ನಿಲ್ಲಿಸಿ ಬಿಡುತ್ತಾರೆ. ಅವರ ನಡುವೆ ತಾರತಮ್ಯ ಮಾಡುವುದನ್ನು ನಿಲ್ಲಿಸಬೇಕು ಎಂದು ತಂಡ ಸೂಚಿಸಿದೆ.

Comments are closed.