ಕರಾವಳಿ

ಭಾರೀ ಭದ್ರತೆಯಲ್ಲಿ ನಡೆದ ‘ಕನಕ ನಡೆ’; ಸ್ವಚ್ಚತಾ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ

Pinterest LinkedIn Tumblr

ಉಡುಪಿ: ಭಾರೀ ಕುತೂಹಲ, ಚರ್ಚೆ ಹಾಗೂ ಕೆಲವು ವಿರೋಧಕ್ಕೆ ಕಾರಣವಾಗಿದ್ದ ಯುವ ಬ್ರಿಗೇಡ್ ಸಂಘಟನೆಯ ಕನಕ ನಡೆ ಕಾರ್ಯಕ್ರಮ ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಯಿತು. ಕನಕನ ಮೂರ್ತಿಗೆ ಹೂ ಹಾರ ಹಾಕುವ ಮೂಲಕ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಕನಕ ನಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

udupi_kanakanade_pejawara-shree-7 udupi_kanakanade_pejawara-shree-2 udupi_kanakanade_pejawara-shree-6 udupi_kanakanade_pejawara-shree-3 udupi_kanakanade_pejawara-shree-4 udupi_kanakanade_pejawara-shree-9 udupi_kanakanade_pejawara-shree-5 udupi_kanakanade_pejawara-shree-1 udupi_kanakanade_pejawara-shree-8

ದಲಿತ ಸಂಘಟನೆಗಳ ಭಾರೀ ವಿರೋಧದಿಂದ ಚರ್ಚೆಗೆ ಕಾರಣವಾಗಿದ್ದ ಯುವ ಬ್ರಿಗೇಡ್ ನ ಕನಕ ನಡೆ ಕಾರ್ಯಕ್ರಮ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಯಿತು. ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಚಲೋ ಉಡುಪಿಯ ಹಿನ್ನಲೆಯಲ್ಲಿ ಈ ಕನಕ ಕಾರ್ಯಕ್ರಮ ನಡೆಯುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದ ದಲಿತ ಸಂಘಟನೆಗಳು ಒಂದುವೇಳೆ ಕನಕ ನಡೆ ಕಾರ್ಯಕ್ರಮದ ಮೂಲಕ ಸ್ವಚ್ಚತಾ ಕಾರ್ಯ ಕೈಗೊಂಡರೆ ನಾವು ಕೂಡಾ ಸ್ವಾಭಿಮಾನಿ ನಡಿಗೆ ಮಾಡುವುದಾಗಿ ಎಚ್ಚರಿಸಿತ್ತು. ಇದರ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ. ಆದ್ರೆ ಮಠದ ಒಳಗೆ ಸ್ವಚ್ಚ ಮಾಡಿಯೇ ಸಿದ್ದ ಎಂದು ಹೊರಟಿದ್ದ ಯುವ ಬಿಗ್ರೇಡ್ ನ ಕಾರ್ಯಕ್ರಮಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಠದ ಸುತ್ತಲೂ ಬ್ಯಾರಿಕೇಡ್ ಹಾಕಿ ಸರ್ಪಗಾವಲು ಹಾಕಲಾಗಿತ್ತು. ಕನಕನ ಮೂರ್ತಿಗೆ ಹೂ ಹಾರ ಹಾಕುವ ಮೂಲಕ ಪೇಜಾವರ ಶ್ರೀಗಳು ಕನಕ ನಡೆಗೆ ಚಾಲನೆ ನೀಡಿದರು. ಇದೆ ಸಂದರ್ಬದಲ್ಲಿ ಮಠದಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತಿದ್ದ ಐದು ಮಂದಿ ಪೌರಕಾರ್ಮಿಕರನ್ನು ಪೇಜಾವರ ಶ್ರೀಗಳು ಸನ್ಮಾನಿಸಿದರು. ಇದೊಂದು ಸಾಂಕೇತಿಕ ಸ್ವಚ್ಚತೆ. ಬಹಿರಂಗದ ಶುದ್ದಿ ಮಾತ್ರ ಅಲ್ಲ. ಅಂತರಂಗದ ಶುದ್ದಿ ಕೂಡಾ ಆಗಬೇಕು. ರಸ್ತೆ ಉದ್ಯಾನವನ ಸ್ವಚ್ಚವಾಗಬೇಕು. ಸ್ವಚ್ಚತಾ ಕಾರ್ಯಕ್ರಮ ದೇಶದಾದ್ಯಂತ ನಡೆಯಬೇಕು ಇದೊಂದು ಮಾದರೀ ಕಾರ್ಯ ಎಂದು ಪೇಜಾವರ ಶ್ರೀಗಳು ಬಣ್ಣಿಸಿದರು.

ಯುವ ಬ್ರಿಗೇಡ್ ನ ೫೦೦ಕ್ಕೂ ಅಧಿಕ ಕಾರ್ಯಕರ್ತರು ಈ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು. ಮಠವನ್ನು ಜೋಡಿಸುವ ರಸ್ತೆ ಸ್ವಚ್ಚತೆಗೆ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಯುವ ಬ್ರಿಗೇಡ್ ನ ಕಾರ್ಯಕರ್ತರು ರಥಬಿದಿ ಬಿಟ್ಟು ಮಠದ ಒಳಗೆ ಹಾಗೂ ಹೊರ ಭಾಗದಲ್ಲಿ ಸ್ವಚ್ಚತೆಯನ್ನು ಮಾಡಿದರು. ಈ ಸಂದರ್ಬದಲ್ಲಿ ಮಾತನಾಡಿದ ಕನಕ ನಡೆ ಮುಖಂಡ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರಮರ್ತಿ ಸೂಲಿಬೆಲೆ ಯುವ ಬ್ರಿಗೆಡ್ ಗೆ ಇಂದು ಡೂಮ್ಸ್ ಡೇ ಈ ದಿನಕ್ಕಾಗಿ ಕಾಯುತ್ತಿದ್ದೆವು. ಕನಕ ನಡೆ ಕೃಷ್ಣ ಮಠಕ್ಕೆ ಸೀಮಿತ ರಸ್ತೆಗೆ ಇಳಿಯುವುದಿಲ್ಲ. ಸರಕಾರದ ಆದೇಶವನ್ನು ದಿಕ್ಕರಿಸಲ್ಲ. ಇದು ದಲಿತ ವಿರೋದಿಯೂ ಅಲ್ಲ. ಕನಕ ನಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಭಾಗವಹಿಸಿದ್ದಾರೆ ಎಂದು ಹೇಳಿದರು.

ಒಟ್ಟಿನಲ್ಲಿ ಭಾರೀ ಚರ್ಚೆಗೆ, ವಿರೋಧಕ್ಕೆ ಕಾರಣವಾಗಿರುವ ಕನಕ ನಡೆ ಪೊಲೀಸ್ ಬಂದೂಬಸ್ತ್ ನಲ್ಲಿ ಸುಸೂತ್ರವಾಗಿ ನಡೆಯಿತು. ಕನಕ ನಡೆಯ ಹಿನ್ನಲೆಯಲ್ಲಿ ಮುಂದೆ ದಲಿತ ಸ್ವಾಭಿಮಾನಿಗಳ ನಡೆ ಏನೆಂಬುದನ್ನ ಕಾದು ನೋಡಬೆಕಾಗಿದೆ.

Comments are closed.