ಕರಾವಳಿ

ಉದ್ಯಮಿ ಅಪಹರಣಕ್ಕೆ ಸಂಚು : ಕೇರಳ ಪೊಲೀಸರ ಬಲೆಗೆ ಬಿದ್ದ ಉಡುಪಿಯ ಸುಪಾರಿ ತಂಡ

Pinterest LinkedIn Tumblr

arrest_crime_news

ಕಾಸರಗೋಡು, ಅ.23: ಕೇರಳ ಮೂಲದ ಉಡುಪಿಯಿಂದ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರನ್ನು ಅಪಹರಿಸಲು ಉಡುಪಿಯಿಂದ ತಲಶ್ಶೇರಿ ಬಂದಿದ್ದ ಉಡುಪಿಯ ಬಾಡಿಗೆ ಗೂಂಡಾಗಳನ್ನು ಬಂಧಿಸುವಲ್ಲಿ ತಲಶ್ಶೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಲ್ಫ್ ನಲ್ಲಿರುವ ವ್ಯಕ್ತಿಯಿಂದ ಸುಪಾರಿ ಪಡೆದು ಉಡುಪಿಯಿಂದ ಕೇರಳಕ್ಕೆ ಬಂದಿದ್ದ ಉಡುಪಿ ಪಡುಬಿದ್ರೆಯ ರಾಶಿನ್ (29), ಮುಹಮ್ಮದ್ ಅಫ್ಸಾನ್ ( 29) ಶಿರ್ವದ ಇಕ್ಬಾಲ್ (27), ಅಬ್ದುಲ್ ಸಮದ್ (24), ಉಪ್ಪಳ ನಯಾಬಜಾರ್ ನ ಬಿಲಾಲ್ (18), ಕಣ್ಣೂರಿನ ರಾಯಿಸ್ (25) ಎಂಬವರೇ ಕೇರಳ ಪೊಲೀಸರ ಬಲೆಗೆ ಬಿದ್ದ ಸುಪಾರಿ ತಂಡದ ಆರೋಪಿಗಳು.

ನಂಬರ್ ಪ್ಲೇಟ್ ಇಲ್ಲದ ಕಾರು ನಗರದಲ್ಲಿ ತಿರುಗಾಡುತ್ತಿದ್ದ ಎಂಬ ಮಾಹಿತಿಯಂತೆ ಪೊಲೀಸರು ತಪಾಸಣೆ ನಡೆಸಿದಾಗ ತಂಡ ಬಲೆಗೆ ಬಿದ್ದಿದೆ. ಕಾರಿನಲ್ಲಿದ್ದವರನ್ನು ವಿಚಾರಣೆಗೊಳಪಡಿಸಿದಾಗ ತಲಶ್ಯೆರಿಯ ಉದ್ಯಮಿಯೋರ್ವರನ್ನು ಅಪಹರಿಸಲು ಬಂದಿರುವುದಾಗಿ ಕಾರಿನಲ್ಲಿದ್ದವರು ಹೇಳಿಕೆ ನೀಡಿದ್ದಾರೆ.ಉದ್ಯಮಿಯನ್ನು ಅಪಹರಿಸಲು ಗಲ್ಫ್ ನಲ್ಲಿರುವ ಓರ್ವ ವ್ಯಕ್ತಿ ನೀಡಿದ 15 ಲಕ್ಷ ರೂ.ಸುಪಾರಿಯಂತೆ ತಂಡವು ತಲಶ್ಶೇರಿಗೆ ತಲಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯಮಿಯನ್ನು ಬೆಂಗಳೂರಿಗೆ ಅಪಹರಿಸಿ ಕೆಲ ದಾಖಲೆಗಳಿಗೆ ಸಹಿ ಹಾಕುವ ಉದ್ದೇಶ ಇವರದ್ದಾಗಿತ್ತು. ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂಜಯ್ ಕುಮಾರ್, ಡಿವೈಎಸ್ಪಿ ಪ್ರಿನ್ಸ್ ಅಬ್ರಾಹಂ ಅವರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.