ಮನೋರಂಜನೆ

ಬಿಗ್‌ಬಾಸ್‌ ಮನೆಯಿಂದ ಔಟಾದ ಕ್ರಿಕೆಟಿಗ ದೊಡ್ಡ ಗಣೇಶ್‌ ಹೋಗುವಾಗ ‘ಪ್ರಥಮ್’ಗೆ ನೀಡಿದ ಶಿಕ್ಷೆ ಏನು ಗೊತ್ತಾ..?

Pinterest LinkedIn Tumblr

ganesh

ಬಿಗ್‌ಬಾಸ್‌ ಮನೆಯಿಂದ ನಿನ್ನೆ ರಾತ್ರಿ ಕ್ರಿಕೆಟಿಗ ದೊಡ್ಡ ಗಣೇಶ್‌ ಹೊರಬಿದ್ದಿದ್ದಾರೆ. ಅವರು ಬಿಗ್‌ಬಾಸ್‌ ಮನೆಯಲ್ಲಿ ಕ್ರಿಯಾಶೀಲರಾಗಿ ಆಡದಿದ್ದದ್ದೇ ಅವರು ಔಟ್‌ ಆಗಲು ಕಾರಣ.

ಪ್ರಥಮ್‌ ವಿರುದ್ಧ ಮನೆ ಮಂದಿಯೆಲ್ಲರೂ ಸೇರಿ ಕಿಚ್ಚ ಸುದೀಪ್ ಗೆ ಬಗೆ ಬಗೆಯಾಗಿ ದೂರು ನೀಡಿದರು. ಈ ವೇಳೆ ಎಲ್ಲವನ್ನು ಕೇಳುತ್ತಲೇ ಪ್ರಥಮ್‌ ಕೂಡ ತನಗೆ ಆಗುತ್ತಿರುವ ಕಿರಿಕಿರಿಯನ್ನು ಸುದೀಪ್ ಮುಂದಿಟ್ಟರು.

ಮನೆಯಿಂದ ಹೊರ ಹೋಗುವ ಮೊದಲು ಬಿಗ್‌ಬಾಸ್‌ ಗಣೇಶ್ ಅವರಿಗೆ ವಿಶೇಷ ಅಧಿಕಾರವನ್ನು ನೀಡಿದ್ದರು. ಇದರಂತೆ ಬಿಗ್‌ಬಾಸ್‌ ಮುಂದಿನ ಆದೇಶದವರೆಗೆ ಗಣೇಶ್‌ ಹೇಳುವ ವ್ಯಕ್ತಿ ಸ್ಟ್ರೆಚರ್‌ನಲ್ಲೇ ಆಚೀಚೆ ಓಡಾಡಬೇಕು. ಇದಕ್ಕೆ ಗಣೇಶ್‌ ಅವರು ಪ್ರಥಮ್‌ ಹೆಸರು ಹೇಳಿದರು.

ಇನ್ನು ಬಿಗ್‌ಬಾಸ್‌ ಎಲಿಮಿನೇಷನ್‌ ಲಿಸ್ಟ್‌‌ನಲ್ಲಿ ಈ ಬಾರಿ ಶೀತಲ್, ದೊಡ್ಡಗಣೇಶ್‌, ಪ್ರಥಮ್, ಕಾವ್ಯ ಹಾಗೂ ಸಂಜನಾ ಇದ್ದರು. ಮೊದಲು ಕಾವ್ಯ ಸೇಫ್ ಆದ್ರೆ ನಂತರ ಪ್ರಥಮ್ ಅವರನ್ನು ಸುದೀಪ್‌ ಮನೆಯಲ್ಲಿ ಉಳಿಯುತ್ತೀರಾ ಎಂದು ಅನಿಸುತ್ತಾ ಎಂದು ಕೇಳಿದ್ರು. ಅದಕ್ಕೆ ಪ್ರಥಮ್‌ ಖಂಡಿತ ಇಲ್ಲ ಎಂದರೂ ಕೂಡ ಬಳಿಕ ಅವರು, ನಂತರ ಸಂಜನಾ, ಶೀತಲ್‌ ಕೂಡ ಸೇಫ್‌ ಆದರು. ಆದರೆ ಕೊನೆಗೆ ಉಳಿದ ದೊಡ್ಡ ಗಣೇಶ್ ಹೊರಬಂದರು.

Comments are closed.