ಆರೋಗ್ಯ

ದಪ್ಪಗಿದ್ದೀರಾ ಚಿಂತಿಸಬೇಡಿ…..ಈ ವಿಷಯದ ಕಡೆ ಗಮನ ಕೊಡಿ…

Pinterest LinkedIn Tumblr

overweight

ತಾವು ಹೆಚ್ಚು ತಿಂದರೆ ಕೆಲವು ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಿದರೆ ತಾವು ಇನ್ನಷ್ಟು ದಪ್ಪಗಾಗುತ್ತೇವೆ ಎನ್ನುವ ಆತಂಕವಿದೆ.

ಹೆಚ್ಚು ದಪ್ಪಗಿರುವವರು, ಬೊಜ್ಜಿರುವವರಿಗೆ ಆಹಾರದ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ತಾವು ಹೆಚ್ಚು ತಿಂದರೆ ಕೆಲವು ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಿದರೆ ತಾವು ಇನ್ನಷ್ಟು ದಪ್ಪಗಾಗುತ್ತೇವೆ ಎನ್ನುವ ಆತಂಕವಿದೆ. ಆದರೆ ಕೆಳಗಿನ ತಪ್ಪು ಕಲ್ಪನೆಗಳ ಬಗ್ಗೆ ದಪ್ಪಗಿರುವವರು ಚಿಂತಿಸುವ ಅಗತ್ಯವಿಲ್ಲ.

ರಾತ್ರಿ 8 ಗಂಟೆಯ ನಂತರ ತಿನ್ನಬಾರದು : ನಾವು ಸೇವಿಸುವ ಆಹಾರ ಹಗಲು ಮತ್ತು ರಾತ್ರಿ ಹೊತ್ತಿನಲ್ಲಿ ಒಂದೇ ರೀತಿಯಲ್ಲಿ ಜೀರ್ಣವಾಗಿ ಕ್ಯಾಲೊರಿಗಳನ್ನು ಬಳಸುತ್ತದೆ.

ಆಗಾಗ ಸ್ವಲ್ಪ ಆಹಾರ ಸೇವನೆ : ಜೀರ್ಣವಾಗುತ್ತದೆ ಎಂದು ಕಡಿಮೆ ಆಹಾರ ಸೇವಿಸುವುದು ನೆರವಾಗದು. ಕೆಲವು ಪದಾರ್ಥಗಳು ಬೇಗ ಜೀರ್ಣವಾಗುತ್ತವೆ. ಇನ್ನು ಕೆಲ ವೇಳೆ ತೆಗೆದುಕೊಳ್ಳುತ್ತೇವೆ.

ಕಾಫಿ ಕುಡಿದರೆ ತೂಕ ಕಡಿಮೆ : ಕಾಫಿಯಲ್ಲಿರುವ ಕೆಫಿನ್ ಹಸಿವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಎಂಬುದು ಸುಳ್ಳು. ತೂಕ ಇಳಿಯುವ ಬದಲು ವಿವಿಧ ಒತ್ತಡಗಳು ಹೆಚ್ಚುತ್ತವೆ.

ಹೆಚ್ಚು ಕ್ಯಾಲೋರಿ ಅಪಾಯ: ಕೊಬ್ಬಿನ ಪ್ರತಿ ಗ್ರಾಂ’ನಲ್ಲಿ 9 ಕ್ಯಾಲೋರಿಗಳು ಸಿಗುತ್ತವೆ. ಇದು ಅಪಾಯಕಾರಿಯಲ್ಲ ದೇಹಕ್ಕೆ ಶೇ.20-30ರಷ್ಟು ಕ್ಯಾಲೋರಿ ಕೊಬ್ಬಿನಿಂದಲೇ ಬರಬೇಕು. ಇಲ್ಲವಾದರೆ ಅಪಾಯ.

ಫಾಸ್ಟ್ ಫುಡ್’ನಲ್ಲಿ ಕೊಬ್ಬು ಕಡಿಮೆ: ಚೀಸ್ ಇರುವ ಬರ್ಗರ್, ಸ್ಯಾಂಡ್’ವಿಜ್ 1800ಕ್ಕೂ ಹೆಚ್ಚು ಕ್ಯಾಲೋರಿ ಹೊಂದಿರುತ್ತದೆ. ಇವು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

Comments are closed.