ಕ್ರೀಡೆ

ಐತಿಹಾಸಿಕ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Pinterest LinkedIn Tumblr

Indian team players celebrate after India's bowler Hardik Pandya dismissed New Zealand's batsman Luke Ronchi during the first one day international match between India and New Zealand at The Himachal Pradesh Cricket Association Stadium (HPCA) in Dharamsala on October 16, 2016.   / AFP PHOTO / SAJJAD HUSSAIN / ----IMAGE RESTRICTED TO EDITORIAL USE - STRICTLY NO COMMERCIAL USE----- / GETTYOUT

ಧರ್ಮಶಾಲಾ: ತನ್ನ ಐತಿಹಾಸಿಕ 900ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್ ಭರ್ಜರಿ ಜಯ ಸಾಧಿಸಿದೆ.

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವಿಲಿಯಮ್ಸನ್ ಪಡೆ ನೀಡಿದ 191 ರನ್ ಗಳ ಅಲ್ಪ ಮೊತ್ತವನ್ನು ಬೆನ್ನು ಹತ್ತಿದ ಧೋನಿ ಪಡೆ ಕೇವಲ 33.1 ಓವರ್ ಗಳಲ್ಲಿ 194 ರನ್ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ.

ನ್ಯೂಜಿಲೆಂಡ್ ನೀಡಿದ 191 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ 49 ರನ್ ಗಳನ್ನು ಕಲೆಹಾಕಿದ ಈ ಜೋಡಿಯನ್ನು ಬ್ರೇಸ್ ವೆಲ್ ಬೇರ್ಪಡಿಸಿದರು. 14 ರನ್ ಗಳಿಸಿದ ರೋಹಿತ್ ಶರ್ಮಾ ಅವರನ್ನು ಬ್ರೇಸ್ ವೆಲ್ ಎಲ್ ಬಿ ಬಲೆಗೆ ಕೆಡವಿದರು.

ಬಳಿಕ ರಹಾನೆ ಕೂಡ 33 ರನ್ ಗಳಿಸಿ ನೀಶಂಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಮನೀಷ್ ಪಾಂಡೆ ಹಾಗೂ ವಿರಾಟ್ ಕೊಹ್ಲಿ ಜೋಡಿ 40 ರನ್ ಗಳ ಜೊತೆಯಾಟ ನೀಡಿತು. ಈ ಹಂತದಲ್ಲಿ ಇಲ್ಲದ ಹೊಡೆತಕ್ಕೆ ಕೈಹಾಕಿದ ಮನೀಶ್ ಪಾಂಡೆ ಸೋಧಿಗೆ ವಿಕೆಟ್ ಒಪ್ಪಿಸಿದರು. ಈ ವೇಳೆಗಾಗಲೇ ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು.ಬಳಿಕ ಧೋನಿ ಜೊತೆಗೂಡಿದ ಕೊಹ್ಲಿ ರನ್ ವೇಗ ಹೆಚ್ಚಿಸಿದರಾದರೂ ಇಲ್ಲದ ರನ್ ಕದಿಯಲು ಹೋಗಿ 21 ರನ್ ಗಳಿಸಿದ್ದ ಧೋನಿ ಕೂಡ ರನ್ ಔಟ್ ಗೆ ಬಲಿಯಾದರು.

ಬಳಿಕ ಬಂದ ಜಾಧವ್ ಅವರು ಕೊಹ್ಲಿ ಜೊತೆಗೂಡಿ ಗೆಲುವಿನ ಔಪಚಾರಿಕತೆ ಮುಗಿಸಿದರು. ಭರ್ಜರಿ 85ರನ್ ಗಳಿಸಿದ ವಿರಾಟ್ ಕೊಹ್ಲಿ ಹಾಗೂ 10 ರನ್ ಗಳಿಸಿದ್ದ ಜಾಧವ್ ಅಜೇಯರಾಗಿ ಉಳಿದರು.

ಇನ್ನು ಪದಾರ್ಪಣೆ ಪಂದ್ಯದಲ್ಲಿಯೇ ತಮ್ಮ ಭರ್ಜರಿ ಬೌಲಿಂಗ್ ಮೂಲಕ ಗಮನ ಸೆಳೆದ ಭಾರತದ ಹಾರ್ದಿಕ್ ಪಾಂಡ್ಯ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Comments are closed.