ಆರೋಗ್ಯ

ಅನಿಮಿಯಾ, ಅಂಗವೈಫಲ್ಯ ಅಗಲು ಕಬ್ಬಿಣಾಂಶದ ಕೊರತೆ ಕಾರಣವೇ..?

Pinterest LinkedIn Tumblr

iron_food_helth

ನಮ್ಮ ಶರೀರದ ಎಲ್ಲ ಭಾಗಗಳಿಗೆ ಆಮ್ಲಜನಕವನ್ನು ಸರಬರಾಜು ಮಾಡುವ ಪೋಷಕಾಂಶ ಅಂದರೆ ಅದು ಕಬ್ಬಿಣಾಂಶ. ನಮ್ಮ ಶರೀರದಲ್ಲಿ ಕಬ್ಬಿಣದ ಅಂಶದ ಸ್ವಲ್ಪ ಕೊರತೆ ಉಂಟಾದರೂ ಸಹ ರಕ್ತಹೀನತೆ ಅಥವಾ ಅನಿಮಿಯಾ ಉಂಟಾಗುತ್ತದೆ. ಕಬ್ಬಿಣಾಂಶದ ಕೊರತೆ ಎನ್ನುವುದು ಬಹಳ ದೊಡ್ಡ ಪೋಷಕಾಂಶ ಕೊರತೆ ಮತ್ತು ಈ ಕೊರತೆಗೆ ಚಿಕಿತ್ಸೆ ನೀಡದೆ ಅದು ಹಾಗೆಯೇ ಮುಂದುವರಿದರೆ ಅಂಗವೈಫಲ್ಯದಂತಹ ಸಮಸ್ಯೆ ಕಾಣಿಸಿಕೊಳ್ಳ ಬಹುದು. 25-49 ವಯಸ್ಸಿನ ನಡುವಿನ ಮಹಿಳೆಯರಲ್ಲಿ ರಕ್ತಹೀನತೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ, ಈ ಗುಂಪಿನ ವ್ಯಕ್ತಿಗಳಿಗೆ ಕಬ್ಬಿಣದ ಅಂಶ ಹೆಚ್ಚು ಇರುವ ಆಹಾರವನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತದೆ.

ಕಬ್ಬಿಣದ ಅಂಶದ ಕೊರತೆ ಬಾಧಿಸುವ ಅಧಿಕ ಅಪಾಯದಲ್ಲಿ ಇರುವವರು :
*ಋತು ಸ್ರಾವ ಆಗುತ್ತಿರುವ ಮಹಿಳೆಯರು: ಋತುಸ್ರಾವ ಆಗುತ್ತಿರುವ ಮಹಿಳೆಯರಿಗೆ ಮಾಸಿಕಸ್ರಾವ ಆಗುವ ಸಂದರ್ಭದಲ್ಲಿ ಬಹಳಷ್ಟು ರಕ್ತಸ್ರಾವವಾಗುವ ಕಾರಣ ರಕ್ತಹೀನತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ರಕ್ತಸ್ರಾವ ಹೆಚ್ಚಾದ ಹಾಗೆಲ್ಲಾ ರಕ್ತ ಹೀನತೆಯ ಅಪಾಯವೂ ಹೆಚ್ಚು.
*ಮೂತ್ರಪಿಂಡದ ವೈಫಲ್ಯ ಆಗಿರುವ ವ್ಯಕ್ತಿಗಳು: ಮೂತ್ರಪಿಂಡ ವೈಫಲ್ಯ ಆಗಿರುವ ವ್ಯಕ್ತಿಗಳು ಅದರಲ್ಲೂ ವಿಶೇಷವಾಗಿ ಡಯಾಲಿಸಿಸ್ನಲ್ಲಿ ಇರುವವರಿಗೆ ಕಬ್ಬಿಣಾಂಶದ ಕೊರತೆಯ ರಕ್ತಹೀನತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
*ಗರ್ಭಿಣಿ ಮಹಿಳೆಯರು ಮತ್ತು ಹಾಲೂಡಿಸುವ ಮಹಿಳೆಯರು: ಬೆಳೆಯುತ್ತಿರುವ ಭ್ರೂಣಕ್ಕೆ ಕಬ್ಬಿಣದ ಅಂಶದ ಆವಶ್ಯಕತೆ ಹೆಚ್ಚಾಗಿರುತ್ತದೆ; ಅದೇ ರೀತಿಯಲ್ಲಿ ಹಾಲೂಡಿಸುವ ತಾಯಂದಿರ ಶರೀರದ ಬಹುಪಾಲು ಕಬ್ಬಿಣದ ಅಂಶವು ಎದೆ ಹಾಲಿನ ಮೂಲಕ ಶಿಶುವಿನ ಶರೀರವನ್ನು ಸೇರುವುದರಿಂದ ಹಾಲೂಡಿಸುವ ತಾಯಂದಿರಲ್ಲೂ ಸಹ ಕಬ್ಬಿಣದ ಅಂಶದ ಕೊರತೆ ಕಾಣಿಕೊಳ್ಳುವ ಸಾಧ್ಯತೆ ಇದೆ.

ಬೆಳೆದ ಮಕ್ಕಳು ಮತ್ತು ಅಂಬೆಗಾಲಿಡುವ ಮಕ್ಕಳು
ವಿಟಾಮಿನ್ – ಅ ಕಡಿಮೆ ಇರುವ ವ್ಯಕ್ತಿಗಳು – ಅ ಯು ಶರೀರದಲ್ಲಿ ಸಂಗ್ರಹವಾಗಿರುವ ಕಬ್ಬಿಣದ ಅಂಶವನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ.

ನಮ್ಮ ಶರೀರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಾಮಿನ್ ಅ ಇಲ್ಲದಿದ್ದರೆ ಶರೀರದಲ್ಲಿ ಕಬ್ಬಿಣಾಂಶದ ಅಸಂತುಲನೆ ಉಂಟಾಗುತ್ತದೆ ಮತ್ತು ಈ ಕಾರಣದಿಂದ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ.
ಜಠರ ಕರುಳಿನ ಅಸ್ವಸ್ಥತೆ ಇರುವ ಜನರು: ಭೇದಿ, ಕರುಳು ಹುಣ್ಣು ಮತ್ತು ಇತರ ರೀತಿಯ ಜಠರ ಕರುಳಿನ ಅಸ್ವಸ್ಥತೆಗಳು ಮತ್ತು ಕಾಯಿಲೆಗಳ ಕಾರಣದಿಂದಾಗಿ ಕಬ್ಬಿಣಾಂಶದ ಕೊರತೆ ಕಾಣಿಸಿಕೊಳ್ಳಬಹುದು.

iron_food_helth1

ರಕ್ತಹೀನತೆಯ ಲಕ್ಷಣಗಳು ಯಾವುವು?
ಸುಸ್ತಾಗುವುದು
ಉಸಿರಾಡಲು ಕಷ್ಟವಾಗುವುದು
ತಲೆ ತಿರುಗುವುದು
ತಲೆನೋವು
ಚಳಿಯಾಗುವುದು
ದೇಹದ ತೂಕ ಕಡಿಮೆಯಾಗುವುದು
ನಿಮ್ಮ ನಿತ್ಯದ ಆಹಾರದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸುವ ಕ್ರಮಗಳು
ಕಬ್ಬಿಣಾಂಶ ಸಮೃದ್ಧವಾಗಿರುವ ಕೆಲವು ಆಹಾರಗಳ ಪಟ್ಟಿಯು ಇಲ್ಲಿದೆ, ಅವು ನಿಮ್ಮ ಶರೀರಕ್ಕೆ ಆವಶ್ಯವಿರುವಷ್ಟು ಪ್ರಮಾಣದ ಕಬ್ಬಿಣಾಂಶವನ್ನು ಒದಗಿಸುತ್ತವೆ.

iron_food_helth2

1. ಹಣ್ಣುಗಳು ಮತ್ತು ಒಣಹಣ್ಣುಗಳು: ಕಲ್ಲಂಗಡಿ ಹಣ್ಣು, ಕಸ್ಟರ್ಡ್ ಆಪಲ್ಗಳು ಕಬ್ಬಿಣಾಂಶದ ಉತ್ತಮ ಮೂಲಗಳು. ಒಣ ಪ್ಲಮ್ ಹಣ್ಣು, ಆಪ್ರಿಕೋಟ್, ಖರ್ಜೂರ, ಅಂಜೂರ ಮತ್ತು ಒಣದ್ರಾಕ್ಷಿಗಳೂ ಸಹ ಉತ್ತಮ ಕಬ್ಬಿಣಾಂಶದ ಮೂಲಗಳಾಗಿದ್ದು, ಈ ಅಂಶಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಬೇಕು.
2. ಬೀಜಗಳು: ಬೀಜಗಳು ಕಬ್ಬಿಣಾಂಶದ ಇನ್ನೊಂದು ಸಮೃದ್ಧ ಮೂಲ. ಗೋಡಂಬಿ ಬೀಜಗಳು, ನೆಲಗಡಲೆ ಬೀಜಗಳು, ಆಕ್ರೋಟು, ಪಿಸ್ತಾ ಮತ್ತು ಬಾದಾಮಿಗಳು ಕಬ್ಬಿಣಾಂಶದ ಸಮೃದ್ಧ ಮೂಲಗಳು. ನಿಮ್ಮ ದಿನನಿತ್ಯದ ಕಬ್ಬಿಣಾಂಶದ ಆವಶ್ಯಕತೆಯನ್ನು ಪೂರೈಸಲು ಒಂದು ಕಪ್ ಬೀಜ ಸಾಕಾಗುತ್ತದೆ.
3. ತರಕಾರಿಗಳು: ಹಸಿರು ಸೊಪ್ಪು ತರಕಾರಿಗಳಾದ ಬಸಳೆ, ಪುದಿನಾ, ಕೊತ್ತಂಬರಿ ಸೊಪ್ಪು ಮತ್ತು ಮೆಂತ್ಯ ಸೊಪ್ಪುಗಳು ಕಬ್ಬಿಣಾಂಶದ ಅತ್ಯುತ್ತಮ ಮೂಲಗಳು. ಹಾಗಾಗಿ ಇವನ್ನು ನಿತ್ಯವೂ ಸೇವಿಸಬೇಕು. ನೀವು ಇದನ್ನು ಸಲಾಡ್ಗಳು, ಸೂಪ್ಗ್ಳು ಅಥವಾ ಕರಿದ ತಿಂಡಿಯ ರೂಪದಲ್ಲಿ ಸೇವಿಸಬಹುದು. ಈ ಸೊಪ್ಪುಗಳು ಕಬ್ಬಿಣಾಂಶ ಅಷ್ಟೇ ಅಲ್ಲದೆ, ವಿಟಾಮಿನ್ ಸಿ ಯಿಂದಲೂ ಸಮೃದ್ಧವಾಗಿರುತ್ತವೆ, ಕಬ್ಬಿಣಂಶದ ಹೀರುವಿಕೆಗೆ ವಿಟಾಮಿನ್-ಅ ಆವಶ್ಯಕ. ಟರ್ನಿಪ್, ಬೀಟ್ರೂಟ್, ಕ್ಯಾರೆಟ್, ಕಾಲಿಫ್ಲವರ್ ಮತ್ತು ಮೂಲಂಗಿಗಳಲ್ಲಿಯೂ ಸಹ ಕಬ್ಬಿಣಂಶವು ಸಮೃದ್ಧವಾಗಿರುತ್ತದೆ.
4. ಕಾಳುಗಳು: ಬಾರ್ಲಿ, ಓಟ್ ಮೀಲ್, ಅವಲಕ್ಕಿ, ಗೋಧಿ ಮತ್ತು ರಾಗಿ ಇವೆಲ್ಲವೂ ಕಬ್ಬಿಣಾಂಶದ ಅತ್ಯುತ್ತಮ ಮೂಲಗಳು. ಆದರೆ ನಮ್ಮ ಶರೀರದ ಪ್ರತಿ ದಿನದ ಆವಶ್ಯಕತೆಗೆ ತಕ್ಕ ಹಾಗೆ, ಸುಮಾರು ಒಂದು ಕಪ್ ನಷ್ಟು ಕಬ್ಬಿಣದ ಅಂಶಗಳನ್ನು ಸೇವಿಸಬೇಕು. ಕಬ್ಬಿಣಾಂಶದ ಪೂರಣಗಳನ್ನು ತೆಗೆದುಕೊಳ್ಳುವವರು ಧಾನ್ಯಗಳನ್ನು ಸೇವಿಸುವಾಗ ಜಾಗರೂಕರಾಗಿರಬೇಕು. ತಮ್ಮ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸುವುದಕ್ಕಾಗಿ, ಕಬ್ಬಿಣಾಂಶದ ಪೂರಣಗಳನ್ನು ತೆಗೆದುಕೊಳ್ಳುವವರು, ಆ ಪೂರಣಗಳನ್ನು ಇಡಿಯ ಧಾನ್ಯಗಳ ಜತೆಗೆ ಸೇವಿಸಬಾರದು.
5 . ಬೀನ್ಸ್ ಮತ್ತು ಬೇಳೆಗಳು: ಕಡಲೆ,ಹೆಸರು ಬೇಳೆ, ನೆಲಗಡಲೆ, ಸೋಯಾ ಬೀನ್ಸ್ ಗಳು ಕಬ್ಬಿಣಾಂಶದ ಅತ್ಯುತ್ತಮ ಮೂಲಗಳು. ಇವುಗಳನ್ನು ಸಾರು, ಮೊಳಕೆಕಟ್ಟು, ಸಲಾಡ್ ರೂಪದಲ್ಲಿ ಅಥವಾ ಹೆಸರುಬೇಳೆ ಹಲ್ವಾದ ರೂಪದಲ್ಲಿ ಸೇವಿಸಬಹುದು. ಬೇಳೆ ಸಾರಿಗೆ ಮೆಂತ್ಯೆ ಸೊಪ್ಪು$, ಪಾಲಕ್ ಸೊಪ್ಪುಗಳನ್ನು ಸೇರಿಸಿ ಅದರ ರುಚಿ ಮತ್ತು ಕಬ್ಬಿಣಾಂಶವನ್ನು ಹೆಚ್ಚಿಸಿಕೊಳ್ಳಬಹುದು.
6 ಮಾಂಸಾಹಾರದ ಮೂಲಗಳು: ಮಾಂಸಾಹರವು ಕಬ್ಬಿಣಾಂಶದ ಪ್ರಮುಖ ಮೂಲ. ಮೊಟ್ಟೆಯ ಹಳದಿ ಭಾಗ, ಪೋರ್ಕ್, ಲಿವರ್, ಸಮುದ್ರಾಹಾರ, ಏಡಿ, ಟ್ಯೂನಾ ಮತ್ತು ಸಾಲ್ಮೊನಾದಂತಹ ಮೀನುಗಳಲ್ಲಿ ಕಬ್ಬಿಣದ ಅಂಶವು ವಿಶೇಷವಾಗಿರುತ್ತದೆ. ಲಿವರ್, ಏಡಿ ಮತ್ತು ಸಿಗಡಿಗಳು ಕೊಲೆಸ್ಟ್ರಾಲ್ ಸಮೃದ್ಧವಾಗಿರುವ ಆಹಾರಗಳು ಹಾಗಾಗಿ ಈ ಆಹಾರಗಳನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸಬೇಕು. ಹೃದಯಾಘಾತ ಅಥವಾ ಲಕ್ವಾದ ಅಪಾಯ ಇರುವವರು ಈ ಆಹಾರಗಳನ್ನು ಸೇವಿಸಬಾರದು.
7 ಮಸಾಲೆಗಳು ಮತ್ತು ಗಿಡ ಮೂಲಿಕೆಗಳು: ಜೀರಿಗೆ, ಕರಿಬೇವು ಸೊಪ್ಪು$, ಒಣಕೊಬ್ಬರಿ ಚೂರುಗಳು ಮತ್ತು ಅರಿಶಿನಗಳು ನಿಮ್ಮ ಶರೀರದ ಕಬ್ಬಿಣಾಂಶವನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ಆಹಾರ ಪದಾರ್ಥದ ಸುವಾಸನೆಯನ್ನು ಹೆಚ್ಚಿಸಲು ಇವನ್ನು ಬಳಸಬಹುದು.

ಕಬ್ಬಿಣದ ಅಂಶದ ಹೀರುವಿಕೆಯನ್ನು ಹೆಚ್ಚಿಸುವ ಆಹಾರಗಳು:
ಸಿಟ್ರಸ್ ಜ್ಯೂಸ್ಗಳನ್ನು ಕುಡಿಯುವ ಮೂಲಕ ಅಥವಾ ವಿಟಾಮಿನ್ ಸಮೃದ್ಧ ಇರುವ ಇತರ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಶರೀರದ ಕಬ್ಬಿಣಾಂಶ ಹೀರುವಿಕೆಯನ್ನು ಹೆಚ್ಚಿಸಿಕೊಳ್ಳಬಹುದು. ನೀವು ಸಸ್ಯಾಹಾರಿ ಆಗಿದ್ದರೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ ಯಾಕೆಂದರೆ, ಮಾಂಸಾಹಾರಗಳಲ್ಲಿ ಆಗುವಂತೆ, ಸಸ್ಯಾಹಾರಗಳಿಂದ ದೊರೆಯುವ ಕಬ್ಬಿಣಾಂಶವನ್ನು ಶರೀರವು ಸುಲಭವಾಗಿ ಹೀರಿಕೊಳ್ಳುವುದಿಲ್ಲ. ಸಿಟ್ರಸ್ ಹಣ್ಣುಗಳಾದ, ನೆಲ್ಲಿಕಾಯಿ, ಗುವಾ, ಕ್ಯಾಬೇಜ್, ಮಾವಿನಹಣ್ಣು, ಕಲ್ಲಂಗಡಿ ಹಣ್ಣು, ಕಿತ್ತಲೆ ರಸ, ನಿಂಬೆ ರಸ, ಟೊಮ್ಯಾಟೋ,ಕ್ಯಾಪ್ಸಿಕಂ, ನುಗ್ಗೆ ಸೊಪ್ಪು$ ಮತ್ತು ಮೊಳಕೆ ಬರಿಸಿದ ಕಾಳುಗಳಲ್ಲಿ ವಿಟಾಮಿನ್-ಸಿ ಸಮೃದ್ಧವಾಗಿರುತ್ತದೆ. ಹುದುಗು ಬರಿಸುವಿಕೆ (ಇಡ್ಲಿ, ಡೋಕ್ಲಾ), ಮೊಳಕೆ ಬರಿಸುವಿಕೆ (ಕಾಳುಗಳನ್ನು) ಗಳಿಂದಾಗಿ ಈ ಆಹಾರಾಂಶಗಳಲ್ಲಿನ ವಿಟಾಮಿನ್ -ಅ ಅಂಶವು ಹೆಚ್ಚಾಗುತ್ತದೆ. ಸ್ವತ: ಇದು ಆಹಾರಗಳಿಂದ ಹೀರಿಕೆಯಾಗುವ ಕಬ್ಬಿಣಾಂಶದ ಪ್ರಮಾಣವನ್ನೂ ಸಹ ಹೆಚ್ಚಿಸುತ್ತದೆ.

ಕಬ್ಬಿಣಾಂಶದ ಹೀರುವಿಕೆಯನ್ನು ತಗ್ಗಿಸುವ ಆಹಾರಗಳು:
ಚಹಾ, ಕಾಫಿ ಮತ್ತು ಕೋಲಾಗಳು ನಮ್ಮ ಆಹಾರದಲ್ಲಿನ ಕಬ್ಬಿಣಾಂಶವನ್ನು ತಗ್ಗಿಸುತ್ತವೆ. ಊಟ ಮಾಡಿದ ಕನಿಷ್ಠ ಒಂದು ಗಂಟೆಯ ಅನಂತರ ಈ ಪಾನೀಯಗಳನ್ನು ಸೇವಿಸುವ ಮೂಲಕ, ಹೀಗಾಗುವುದನ್ನು ತಪ್ಪಿಸಿಕೊಳ್ಳಬಹುದು.  ಕ್ಯಾಲ್ಸಿಯಂ ಕಬ್ಬಿಣಾಂಶದ ಹೀರಿಕೆಯನ್ನು ತಗ್ಗಿಸುತ್ತದೆ. ಹಾಗಾಗಿ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದ ಪೂರಣಗಳನ್ನು ಒಟ್ಟೊಟ್ಟಿಗೆ ಸೇವಿಸಬಾರದು. ಇದೇ ಕಾರಣಕ್ಕಾಗಿ ನಿಮ್ಮ ಊಟದ ಜತೆ ಜತೆಗೆ ಹಾಲನ್ನು ಸೇವಿಸಬಾರದು. ನೀವು ಕ್ಯಾಲ್ಸಿಯಂ ಮತ್ತು ಕಬ್ಬಿಣದ ಪೂರಣಗಳನ್ನು ತೆಗೆದುಕೊಳ್ಳುವಾಗ ಕನಿಷ್ಠ ಮೂರು ಗಂಟೆಗಳಷ್ಟು ಅಂತರ ಇರಲಿ.

ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಇರಲು ಬಯಸುತ್ತಾರೆ ಮತ್ತು ಅದಕ್ಕಾಗಿ ಒಳ್ಳೆಯ ಆಹಾರವನ್ನು ಸೇವಿಸುತ್ತಾರೆ. ನಿಮ್ಮ ಉದ್ದೇಶವು ಸಫಲವಾಗಬೇಕಾದರೆ, ನೀವು ಸೇವಿಸುವ ಆಹಾರದಲ್ಲಿ ಇರುವ ಖನಿಜಾಂಶಗಳು, ನಾರಿನ ಅಂಶ, ಪ್ರೊಟೀನ್ಸ್, ಕೊಬ್ಬು ಮತ್ತು ಕಾಬೋಹೈಡ್ರೇಟ್ ಗಳ ಪ್ರಮಾಣದ ಬಗ್ಗೆ ನಿಗಾ ವಹಿಸಬೇಕಾದುದು ಆವಶ್ಯಕ. ಸಂತುಲಿತ ಆಹಾರ ಸೇವನೆ, ಅದರಲ್ಲೂ ವಿಶೇಷವಾಗಿ ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ಆಹಾರ ಸೇವಿಸುವ ಮೂಲಕ ಕಬ್ಬಿಣಾಂಶದ ಕೊರತೆಯನ್ನು ತಡೆಗಟ್ಟಬಹುದು.

Comments are closed.