ಕರಾವಳಿ

ಮತದಾನ ಮಾಡಲು ಮುಕ್ಕಾಲು ಗಂಟೆ ಸರತಿ ಸಾಲಿನಲ್ಲಿ ಕಾದ ವಿಪಕ್ಷ ನಾಯಕ ಕೋಟ! (Video)

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನೆಲ್ಲೆಡೇ ಮತದಾನ ಪ್ರಕ್ರಿಯೆ ಅಲ್ಲಲ್ಲಿ ಬಿರುಸಿನಿಂದ ಸಾಗಿದರೆ ಬಹುತೇಕ ಕಡೆ ಮಂದಗತಿಯಲ್ಲಿ ಸಾಗುತ್ತಿರುವುದು ಕಂಡುಬರುತ್ತಿದೆ. ಕೋಟತಟ್ಟು ಗ್ರಾಮಪಂಚಾಯತ್ ೧೬೫ ಭಾಗದ ಸಂಖ್ಯೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತದಾನ ಮಾಡಲು ಸುಮಾರು 45 ನಿಮಿಷಗಳ (ಮುಕ್ಕಾಲು ಗಂಟೆ) ಕಾಲ ಕಾಯಬೇಕಾಯ್ತು.

ಆ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಕೊಂಚ ಮಂದಗತಿಯಲ್ಲಿ ಸಾಗಿದ ಕಾರಣದಿಂದಾಗಿ ಮತದಾರರು ಬಹಳಷ್ಟು ಹೊತ್ತು ಕಾಯಬೇಕಾಗಿ ಬಂತು. ಒಬ್ಬೊಬ್ಬರ ಮತದಾನಕ್ಕೂ ಕೆಲ ನಿಮಿಷಗಳೇ ವ್ಯಯವಾಗುತ್ತಿತ್ತು. ಇದೇ ಸಮಯ ಸುಮಾರು 7.20ಕ್ಕೆ ಆಗಮಿಸಿದ ಕೋಟ ಶ್ರೀನಿವಾಸ ಪೂಜಾರಿ ಸರತಿ ಸಾಲಿನಲ್ಲಿ ನಿಂತಿದ್ದು ಸುಮಾರು ಮುಕ್ಕಾಲು ಗಂಟೆ ಕಾಯಬೇಕಾಗಿ ಬಂದಿತ್ತು. ಮತದಾನದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಮತದಾನಕ್ಕೆ ಬಂದ ನೂರಾರು ಜನರು ಕಾತುರದಲ್ಲಿದ್ದು ರಾಷ್ಟ್ರದಲ್ಲಿ ವಿವೇಚನಾಶೀಲ ಮತದಾರರ ಸಂಖ್ಯೆ ಜಾಸ್ಥಿಯಿದೆ. ಪ್ರಜಾಪ್ರಭುತ್ವದ ಈ ಸೊಬಗಿನ ನೋಟವಿದು. ರಾಷ್ಟ್ರಕ್ಕೋಸಕರ ಮತ ಚಲಾಯಿಸುವವರು ಅಧಿಕವಾಗಿದ್ದು ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮತಯಂತ್ರದಲ್ಲಿ ಲೋಪ..!
ಇನ್ನು ಅದೇ ಮತಗಟ್ಟೆ ಬಳಿಯ 164 ಭಾಗ ಸಂಖ್ಯೆಯಲ್ಲಿ ಮತಯಂತ್ರದಲ್ಲಿ ಆರಂಭದಲ್ಲೇ ಲೋಪ ಕಾಣಿಸಿಕೊಂಡಿದ್ದು ಸುಮಾರು ಅರ್ಧಗಂಟೆಗಳ ಕಾಲ ಮತದಾನ ಪ್ರಕ್ರಿಯೆ ವಿಳಂಭವಾಗಿ ನಡೆಯಿತು. ಮತದಾನಕ್ಕೆಂದು 7  ಗಂಟೆಗೆ ಆಗಮಿಸಿದ್ದ ಜನರು ಬಹಳಷ್ಟು ಹೊತ್ತು ಕಾದು ನಿಂತಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.