ಮಂಗಳೂರು: ಹಿಂದಿನಕಾಲದಲ್ಲಿ ಯಾವುದೇ ಕಾಯಿಲೆಗಳು ಬಂದರೂ ಅದಕ್ಕೆ ಅಜ್ಜಿ ಅಥವಾ ತಾಯಿ ತಯಾರಿಸುವ ಮನೆಮದ್ದ್ದಿಗೆ ಸಾಟಿ ಇಲ್ಲವಾಗಿತ್ತು. ಹಾಗೇ ಕಾಯಿಲೆಗಳು ಬೇಗನೆ ಗುಣಮುಖವಾಗುತ್ತಿತ್ತು. ಅದರೆ ಕಾಲ ಬದಲಾದಂತೆ ಜೀವನ ಶೈಲಿಯು ಬದಲಾಗುತ್ತ ಬಂತು. ಈಗ ಪ್ರತಿಯೊಂದು ರೊಗಕ್ಕೂ ಆರ್ಯುವೇದ ಮದ್ದಿಗೆ ಮೊರೆ ಹೋಗುವ ಜನಸಂಖ್ಯೆ ಜಾಸ್ತಿಯಾಗಿದೆ.ಅತೀ ಕಡಿಮೆ ಸಮಯದಲ್ಲಿ , ಕಡಿಮೆ ವೆಚ್ಚದಲ್ಲಿ ಗುಣಮುಖವಾಗುವುವ ಬಗ್ಗೆ ಎಲ್ಲರೂ ಆಲೋಚನೆ ಮಾಡುವಂತ ಪರಿಸ್ಥಿತಿ ಸೃಷ್ಠಿಯಾಗಿದೆ. ಇದಕ್ಕಾಗಿ ಇಲ್ಲಿದೆ ಕೆಲವು ಉತ್ತಮ ಆರೋಗ್ಯಕ್ಕಾಗಿ ಉತ್ತಮ್ ಮಾಹಿತಿ…..
ಎಳನೀರು ಸರ್ವರೋಗಕ್ಕೂ ಪನ್ನಿರು.
ಎಳ ನೀರಿನಲ್ಲಿ ಸೈಟೀಕೈನ್ ಮತ್ತು ಲಾರಿಕ್ ಅಮ್ಲ ಎಂಬ ಎರಡು ಪೋಷಕಾಂಶಗಳಿವೆ. ಇವು ಜೀವಕೋಶದ ಸಮರ್ಪಕ ಬೆಳೆವಣಿಗೆ ಮತ್ತು ನಿಯಂತ್ರಣಕ್ಕೆ ನೆರವಾಗುತ್ತದೆ. ಎಳನೀರು ಕ್ಯಾನ್ಸರು ಜನಕ ಕಣಗಳಿಗೆ ವಿರೋಧ ಒಡ್ಡುವುದರಿಂದ ದೇಹವನ್ನು ಕ್ಯಾನ್ಸರ್‌ನಿಂದ ತಡೆಯುತ್ತದೆ.
ಎಳನೀರಿನ ಇನ್ನೊಂದು ಉತ್ತಮ ಗುಣವೆಂದರೆ ದೇಹದೊಳಗಿನ ರಕ್ತ ಹೆಪ್ಪುಗಟ್ಟಿದಂತೆ ತಡೆಯುವುದು. ಕೆಲವೊಮ್ಮೆ ಅಂತರಿಕ ಸ್ರಾವದಿಂದ ನರದಲ್ಲಿ ಬಿರುಕುಂಟಾದರೆ ಒಳಗಡೆ ರಕ್ತಸ್ರಾವವಾದರೂ ಈ ಸ್ಥಳದಲ್ಲಿ ರಕ್ತ ನರದೊಳಗೆ ಹೆಪ್ಪುಗಟ್ಟಿಬಾರದು. ಒಂದು ವೇಳೆ ಹೀಗಾದರೆ(ಅದರಲ್ಲೂ ಮೆದಳಿಗೆ ರಕ್ತ ಪೊರೈಸುವ ನರ ಪ್ರಾಣಕ್ಕೆ ಅಪಾಯವಿದೆ. ಇದನ್ನೇ ಬ್ರೈನ್ ಹೆಮರೆಜ್ ಎಂದು ಕರೆಯುತ್ತಾರೆ. ಜೊತೆಗೆ ಎಳನೀರಿನ ನಿರಂತರ ಸೇವೆನೆಯಿಂದ ಚರ್ಮದ ಸೆಳೆತವೂ ಹೆಚ್ಚುತ್ತದೆ. ತನ್ಮೂಲಕ ನೆರಿಗೆ ಬೀಳುವುದನ್ನು ತಪ್ಪಿಸುತ್ತದೆ. ಎಳನೀರು ಅಪ್ಪಟ ನೀರಿನ ಪಿಎಸ್ ಸಂಖ್ಯೆ ಹೊಂದಿರುವುದರಿಂದ ಜಠರದಲ್ಲಿ ಅಮ್ಲೀಯತೆಯನ್ನು ಕಡಿಮೆಗೊಳಿಸಲು ನೆರೆವಾಗುತ್ತದೆ.
ಮನೆ ಮದ್ದಿನ ವಿಶೇಷತೆ ಉಪಯೋಗಿಸಿ ನೋಡಿ.
*ಪ್ರತಿದಿನ ಬಿಸಿಹಾಲಿನೊಂದಿಗೆ ಐದು ಬಾದಾಮಿಗಳನ್ನು ಸೇವಿಸಿದರೆ ಮೈಗ್ರೇನ್ ಸಮಸ್ಯೆ ನಿವಾರಣೆಯಾಗುತ್ತದೆ.
* ಒಣದಾಕ್ಷಿಯನ್ನು ರಾತ್ರಿ ನಿರೀನಲ್ಲಿ ನೆನೆಸಿ ಬೆಳಗ್ಗೆ ಸೇವಿಸುವುದರಿಂದ ಕಡಿಮೆ ರಕ್ತದೊತ್ತಡವನ್ನು ನಿಯಂತಿಸಬಹುದು.
* ನೆಲ್ಲಿಕಾಯಿ ಹಾಕಿ ಕುದಿಸಿದ ನೀರಿನಲ್ಲಿ ಕೂದಲನ್ನು ತೊಳೆದರೆ ಕೇಶವು ಉದ್ದ ಮತ್ತು ಹೊಳೆಪಾಗುತ್ತದೆ
* ಪ್ರತಿದಿನ ಅಹಾರ ಸೇವೆನೆಯ ನಂತರ ಬೆಲ್ಲ ಸೇವಿಸಿದರೆ ಎಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೂ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.
* ಪಪ್ಪಾಯಿ ಹಣ್ಣಿನಲ್ಲಿರುವ ಕ್ಯಾರೋಟೀನ್ ಅಂಶವು ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.
* ಊಟವಾದ ತಕ್ಷಣ ಮಜ್ಜಿಗೆ ಸೇವಿಸಿದರೆ ಜೀರ್ಣಕ್ರಿಯೆ ಚಿನ್ನಾಗಿ ಆಗುತ್ತದೆ.
* ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಈರುಳ್ಳಿಯ ರಸವನ್ನು ಮೂಸಬೇಕು ಹಾಗೂ ಹಸಿ ಈರುಳ್ಳಿಯನ್ನು ಸೇವಿಸಬೇಕು.
* ಬಸಳೆ ಸೊಪ್ಪಿನ ನಿಯಮಿತ ಸೇವನೆಯಿಂದ ಸಂಧಿವಾತದ ತೊಂದರೆಯನ್ನು ನಿವಾರಿಸಬಹುದು.
* ಕಲ್ಲಂಗಡಿ ಹಣ್ಣಿನಲ್ಲಿರುವ ಪೊಟಾಶಿಯಂ ಅಂಶವು ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಪ್ಪಿಸುತ್ತದೆ.
* ಆಹಾರದಲ್ಲಿ ಎಲೆಕೋಸಿನ ನಿಯಮಿತ ಬಳಕೆಯಿಂದ ಒಸಡಿನ ರಕ್ತಸ್ರಾವವನ್ನು ತಡೆಗಟ್ಟಬಹುದು.
*ಬೆಲ್ಲದೊಂದಿಗೆ ಒಣಶುಂಠಿಯ ನಿಯಮಿತ ಸೇವೆನೆಯಿಂದ ವಾಯುಬಾಧೆ ನಿಯಂತ್ರಣಕ್ಕೆ ಬರುತ್ತದೆ.
* ೪-೫ ಬೇವಿನ ಎಲೆ ಹಾಗೂ ಕಾಲು ಚಮಚದಷ್ಠು ಅರಿಶಿಣವನ್ನು ಅರೆದು ದಿನಕ್ಕೊಂದು ಸಲದಂತೆ ಕೆಲವು ದಿನ ಸೇವಿಸಿದರೆ ಗರ್ಭಾಶಯಕ್ಕೆ ಸಂಬಂಧಿಸಿದ ವ್ಯಾಧಿಗಳು ನಿವಾರಣೆಯಾಗುತ್ತದೆ.
*ಸಪೋಟ ಹಣ್ಣಿನ ನಿಯತ ಸೇವೆನೆಯು ಕೆಮ್ಮನ್ನು ದೂರ ಮಾಡುತ್ತದೆ.
* ವೀಳ್ಯದೆಲೆ ಹಾಗೂ ಅಡಕೆಯನ್ನು ಜಜ್ಜಿ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಒಣಕೆಮ್ಮು ಕಡಿಮೆಯಾಗುತ್ತದೆ.
* ಸೀಬೆಹಣ್ಣಿನ (ಪೇರಳೆ ಹಣ್ಣು) ನಿಯಮಿತ ಸೇವೆನೆಯಿಂದ ರಕ್ತಹೀನತೆಯನ್ನು ತಡೆಯಬಹುದು.
* ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ನೆಲ್ಲಿಕಾಯಿಯ ರಸವನ್ನು ಕುಡಿದರೆ ಅಜೀರ್ಣಿ ನಿವಾರಣೆಯಾಗುತ್ತದೆ.
* ಲವಂಗ ಕಷಾಯ ಸೇವೆಯಿಂದ ಜಂತುಹುಳುವಿನ ಸಮಸ್ಯೆಯನ್ನು ನಿವಾರಿಸಬಹುದು.
*ಕಾಳುಮೆಣಸು ಹಾಗೂ ಬೆಲ್ಲ ಸೇರಿಸಿ ತಯಾರಿಸಿದ ಕಷಾಯದ ಸೇವೆನೆಯಿಂದ ಗಂಟಲು ಕೆರೆತ ಕಡಿಮೆಯಾಗುತ್ತದೆ.