ಅಂತರಾಷ್ಟ್ರೀಯ

ಊಟದಲ್ಲಿ ವಿಷ ಹಾಕಿ ತನ್ನ ಆಪ್ತರಿಂದಲೇ ಇಸಿಸ್ ಮುಖ್ಯಸ್ಥ ಬಾಗ್ದಾದಿ ಹತ್ಯೆಗೆ ಯತ್ನ!

Pinterest LinkedIn Tumblr

baghdadi

ಬಾಗ್ದಾದ್: ವಿಶ್ವ ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಕೊಲೆಗೈಯ್ಯಲು ಯತ್ನಿಸಲಾಗಿದ್ದು, ಆತನ ಊಟಕ್ಕೆ ವಿಷ ಬೆರೆಸಿ ಕೊಲ್ಲಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಗುಪ್ತಚರ ಮೂಲಗಳ ಮಾಹಿತಿ ಪ್ರಕಾರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಲ್ಲಿರುವ ಬಾಗ್ದಾದಿ ಆಪ್ತರೇ ಆತನ ಊಟಕ್ಕೆ ವಿಷ ಬೆರೆಸಿ ನೀಡಿದ್ದು, ಪ್ರಸ್ತುತ ಬಾಗ್ದಾದಿ ಸ್ಥಿತಿ ಗಂಭೀರವಾಗಿದೆ. ಬಾಗ್ದಾದಿಯನ್ನು ಇಸಿಸ್ ಉಗ್ರ ಕಪಿಮುಷ್ಠಿಯಲ್ಲಿರುವ ನೈನ್ ವೇ ಪ್ರಾಂತ್ಯದಲ್ಲಿರುವ ಬೀಅಜ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನು ಬಾಗ್ದಾದಿಗೆ ವಿಷ ಹಾಕಿದ ವ್ಯಕ್ತಿ ಯಾರು ಎಂಬ ವಿಚಾರ ತಿಳಿಯದೇ ತಲೆಕೆಡಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥರು ಇದೀಗ ಸಂಘಟನೆ ಶಂಕಿತ ವ್ಯಕ್ತಿಗಳ ಬಂಧನದಲ್ಲಿ ತೊಡಗಿದ್ದಾರಂತೆ. ಬಂಧಿತರ ಪೈಕಿ ಮೂವರು ವ್ಯಕ್ತಿಗಳು ಸೇರಿ ಬಾಗ್ದಾದಿಗೆ ವಿಷ ಹಾಕಿದ್ದಾರೆ ಎಂದು ತಿಳಿದುಬಂದಿದ್ದು, ಮೂವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆಯಂತೆ.

ಇನ್ನು ಇತ್ತೀಚೆಗಷ್ಟೇ ಅಮೆರಿಕದ ಚಾಲಕ ರಹಿತ ಯುದ್ಧ ವಿಮಾನ ಡ್ರೋನ್ ದಾಳಿಯಲ್ಲಿ ಬಾಗ್ದಾದಿ ಸಾವನ್ನಪ್ಪಿದ್ದ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಹೊಸ ವರದಿಗಳ ಪ್ರಕಾರ ಬಾಗ್ದಾದಿ ಬದುಕಿದ್ದು, ತನ್ನ ಆಪ್ತರಿಂದಲೇ ಇದೀಗ ಮೃತ್ಯುಕೂಪಕ್ಕೆ ತಳ್ಳಲ್ಪಟ್ಟಿದ್ದಾನೆ.

Comments are closed.