ಅಂತರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್; ಭಾರತೀಯ ಸೇನೆಯನ್ನು ಬೆಂಬಲಿಸಿದ ರಷ್ಯಾ…ಪಾಕ್ ಗೆ ಹೇಳಿದ್ದೇನು…?

Pinterest LinkedIn Tumblr

indian-army

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ಮೂಲಕ ಉಗ್ರರ ಶಿಬಿರಗಳನ್ನು ಧ್ವಂಸಗೈದ ಭಾರತೀಯ ಸೇನೆಯ ಪರಾಕ್ರಮಕ್ಕೆ ರಷ್ಯಾ ಬೆಂಬಲ ಸೂಚಿಸಿದ್ದು, ಭಯೋತ್ಪಾದನೆ ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿದೆ.

ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಉಗ್ರ ದಾಳಿ ನಡೆಸಿ 20 ಯೋಧರನ್ನು ಹತ್ಯೆಗೈದ ಉಗ್ರರು ಪಾಕಿಸ್ತಾನಿ ಉಗ್ರರೆ ಎಂದು ಬಹಿರಂಗವಾಗಿ ಪ್ರಪ್ರಥಮ ಬಾರಿಗೆ ಹೇಳಿದ ದೇಶ ರಷ್ಯಾ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಎಂ ಕದಾಕಿನ್ ಹೇಳಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕದಾಕಿನ್ ಅವರು ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ರಷ್ಯಾ ಪಾಕಿಸ್ತಾನ ಜತೆಗೆ ಜಂಟಿ ಸಮರಾಭ್ಯಾಸ ನಡೆಸಿತ್ತು. ಇದಕ್ಕೆ ಬಾರತ ಆತಂಕ ಪಡಬೇಕಿಲ್ಲ. ಉಭಯ ದೇಶಗಳ ಸೇನಾ ನಡುವಿನ ಸಾಮಾನ್ಯ ಸಮರಾಭ್ಯಾಸ ಇದಾಗಿತ್ತು. ಅಲ್ಲದೆ ಈ ಸಮರಾಭ್ಯಾಸವು ಉಗ್ರ ನಿಗ್ರಹ ಕಾದಾಟದ ಅಭ್ಯಾಸವಾಗಿತ್ತು. ಭಯೋತ್ಪಾದಕ ಕೃತ್ಯಗಳಿಗೆ ಪಾಕಿಸ್ತಾನ ತನ್ನ ಸೇನೆಯನ್ನು ಬಳಿಸಿಕೊಳ್ಳಬಾರದು ಎಂಬ ಪಾಠ ಹೇಳಿಕೊಡುವುದೇ ಈ ಸಮರಭ್ಯಾಸದ ಕಾರಣವಾಗಿತ್ತು ಎಂದು ಹೇಳಿದ್ದಾರೆ.

Comments are closed.