ಮುಂಬೈ

ಬಂಟರ ಸಂಘ, ವಸಾಯಿ – ಡಹಾಣು ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಪ್ರತಿಭಾ ಪುರಸ್ಕಾರ

Pinterest LinkedIn Tumblr

mumbai_bunts_pro_1

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

ಮುಂಬಯಿ : ಬಂಟರ ಸಂಘ, ಮುಂಬಯಿ, ಇದರ ವಸಾಯಿ – ಡಹಾಣು ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಪ್ರತಿಭಾ ಪುರಸ್ಕಾರ ಹಾಗೂ ದತ್ತು ಸ್ವೀಕಾರ ಕಾರ್ಯಕ್ರಮವು ಅ. 2 ರಂದು ನಾಲಾಸೋಪಾರ ಪೂರ್ವ ದ ರೀಜೆನ್ಸಿ ಬಾಂಕ್ವೆಟ್ ಹಾಲ್, ಜರಗಿತು.

ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಆ ನಂತರ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು “ಪ್ರತಿಭಾವಂತ ಮಕ್ಕಳನ್ನು ಸತ್ಕರಿಸುವುದರಿಂದ ಇತರ ಮಕ್ಕಳಿಗೆ ಮಾರ್ಗದರ್ಶನವಾದುದರೊಂದಿಗೆ ಉತ್ಸಾಹವು ಹೆಚ್ಚುತ್ತದೆ. ವಿದ್ಯೆಗೆ ನೆರವು, ದತ್ತು ಸ್ವೀಕಾರ ಪಡೆದ ಮಕ್ಕಳು ಮುಂದೆ ದೊಡ್ಡವರಾದ ನಂತರ ಖಂಡಿತವಾಗಿಯೂ ಯಾವುದಾದರೂ ರೀತಿಯಲ್ಲಿ ಸಮಾಜಕ್ಕೆ ಹಿಂತಿರುಗಿಸುತ್ತಾರೆ. ಹಳದಿ ಕುಂಕುಮವು ಮಹಿಳೆಯರಿಗೆ ದೇವರ ಪೂಜೆಯಂತೆ ಮಾತ್ರವಲ್ಲ ಸೌಭಾಗ್ಯವೂ ಆಗಿದೆ. ಶೈಕ್ಷಣಿಕ ನೆರವು ಸಂಘದ ಮುಖ್ಯ ದ್ಯೇಯಗಳಲ್ಲಿ ಒಂದಾಗಿದ್ದು ಎಷ್ಟು ಕಷ್ಟ ಬಂದರೂ ಶಿಕ್ಷಣಕ್ಕೆ ನಾವು ಖಂಡಿತವಾಗಿಯೂ ಸಹಕರಿಸುತ್ತೇವೆ. ಎಲ್ಲಾ ಪ್ರಾದೇಶಿಕ ಸಮಿತಿಗಳ ಹಾಗೂ ಮಹಿಳಾ ವಿಭಾಗದ ಬೆಂಬಲ ನಮಗೆ ಯಾವತ್ತೂ ಇದೆ ಎಂದರು.

mumbai_bunts_pro_2 mumbai_bunts_pro_3 mumbai_bunts_pro_4 mumbai_bunts_pro_5 mumbai_bunts_pro_6 mumbai_bunts_pro_7 mumbai_bunts_pro_8 mumbai_bunts_pro_9 mumbai_bunts_pro_10

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘ ದ ಮಹಿಳಾ ವಿಭಾಗದ ಕಾರ್ಯಾಧ್ಯ್ಯಕ್ಷೆ ಲತಾ ಜೆ. ಶೆಟ್ಟಿ ಯವರು ಮಾತನಾಡುತ್ತಾ ಮಹಿಳೆಯರು ಸಮಾಜದ ಮುಖ್ಯ ಅಂಗವಾಗಿದ್ದು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಮಹಿಳೆಯರು ಆರೋಗ್ಯವಂತರಾಗಿದ್ದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತದೆ. ಶಿಕ್ಷಣ, ಆರೋಗ್ಯ, ವೈವಾಹಿಕ ನೆರವು ನಮ್ಮ ಮೂಲ ದ್ಯೇಯವಾಗಿದ್ದು ಇದಕ್ಕೆ ಯಾವಾಗಲೂ ನಮ್ಮ ಪ್ರೊತ್ಸಾಹವಿದೆ, ಇಂದು ಬಹಳ ಸಂಖ್ಯೆಯಲ್ಲಿ ಮಕ್ಕಳು ಉಪಸ್ಥಿತರಿರುವುದು ಸಂತೋಷ ತಂದಿದೆ. ಎಂದರು.

ಥಾಣೆ ಬಂಟ್ಸ್ ನ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಎಸ್. ಮಾಡಾ ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಅರಸಿನ ಕುಂಕುಮ ಕಾರ್ಯಕ್ರಮವು ಎಲ್ಲಾ ಮಹಿಳೆಯರನ್ನು ಒಂದೆಡೆ ಸೇರಿಸುವ ಕಾರ್ಯಕ್ರಮವಾಗಿದ್ದು, ದಸರಾ ಹಬ್ಬದ ಈ ಸಂದರ್ಭದಲ್ಲಿ ಮಹಿಳಾ ವಿಭಾಗವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಅಲ್ಲದೆ ಈ ತಿಂಗಳು ದಸರಾ, ದೀಪಾವಳಿ ಮುಂತಾದ ಹಬ್ಬಗಳಿಂದ ಶ್ರೇಷ್ಥ ವಾಗಿದ್ದು ಪವಿತ್ರವಾದ ದಿನವಾಗಿದೆ. ನಮ್ಮವರು ಇಂದು ಕಠಿಣ ಪರಿಶ್ರಮದಿಂದಾಗಿ ಹೋಟೇಲು ಉದ್ಯಮದಲ್ಲಿ ಯಶಸ್ಸನ್ನು ಗಳಿಸಿದ್ದರೆ. ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ನಾವು ಪ್ರಯತ್ನಿಸಬೇಕಾಗಿದೆ. ನಮ್ಮ ಮಕ್ಕಳಿಗೆ ಸಂಬಂದಿಕರ ಅರಿವಾಗಲು ವರ್ಷಕ್ಕೆ ಒಮ್ಮೆಯಾದರೂ ನಾವು ನಮ್ಮ ಮಕ್ಕಳನ್ನು ತವರೂರಿಗೆ ಕರೆದೊಯ್ಯಬೇಕಾಗಿದೆ ಎಂದರು.

ಮಮತಾ ಶೆಟ್ಟಿಯವರು ಪ್ರಾರಂಭದಲ್ಲಿ ಪ್ರಾರ್ಥನೆ ಮಾಡಿದರು. ವಸಾಯಿ – ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಕೆ. ಶೆಟ್ಟಿ ಪ್ರಸ್ತಾವನೆಗೈಯುತ್ತಾ ಪ್ರಾದೇಶಿಕ ಸಮಿತಿಯ ಚಟುವಟಿಕೆಯ ಬಗ್ಗೆ ಮಾಹಿತಿಯಿತ್ತರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶರ್ಮಿಳಾ ಎಸ್. ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು.

ಅಥಿತಿಗಳು ಶೈಕ್ಷಣಿಕ ಕ್ಷೇತ್ರದಲ್ಲಿನ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿದರು. ಹಾಗೂ ಕೆಲವು ಮಕ್ಕಳನ್ನು ದತ್ತು ಸ್ವೀಕರಿಸಲಾಯಿತು.

ವೇದಿಕೆಯಲ್ಲಿ ಸಮನ್ವಯಕ ಕರ್ನಿರೆ ಶ್ರೀಧರ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಮೋಹನ್ ವಿ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ,ಕಾರ್ಯದರ್ಶಿ ಪ್ರವೀಣ್ ಕಣಂಜಾರು, ಕೋಶಾಧಿಕಾರಿ ವಿಜಯ ಎಂ. ಶೆಟ್ಟಿ, ಸ್ಥಳೀಯ ಅಧಿಕಾರಿ ಪಾಟೀಲ್, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಆನಂದ ಶೆಟ್ಟಿ, ಜೊತೆ ಕಾರ್ಯಾದರ್ಶಿ ದಿನೇಶ್ ಎಸ್. ಹೆಗ್ಡೆ, ಜೊತೆ ಕೋಶಾಧಿಕಾರಿ ತಾರನಾಥ ಎಸ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಜಯ ಅಶೋಕ್ ಶೆಟ್ಟಿ, ಕಾರ್ಯದರ್ಶಿ ಉಮಾ ಎಸ್. ಶೆಟ್ಟಿ., ಕೋಶಾಧಿಕಾರಿ ರೇಖಾ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಲತಾ ಆರ್. ಶೆಟ್ಟಿ, ಜತೆ ಕೋಶಾಧಿಕಾರಿ ಸಂಧ್ಯಾ ಯು. ಶೆಟ್ಟಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಭಜನೆ ನಂತರ ಹಳದಿ ಕುಂಕುಮ ರಾತ್ರಿ ದಾಂಡಿಯಾ ರಾಸ್ ನಡೆದಿದ್ದು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಜಯಶ್ರೀ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದ್ದು ಉಮಾ ಸತೀಶ್ ಶೆಟ್ಟಿ ವಂದಿಸಿದರು.

Comments are closed.