ಆರೋಗ್ಯ

ಗ್ರೀನ್ ಟೀ ಹೆಚ್ಚು ಸೇವನೆಯಿಂದ ಆರೋಗ್ಯಕ್ಕೆ ಆಗುವ ಹಾನಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು…!

Pinterest LinkedIn Tumblr

green-tea

ಪ್ರತಿಯೊಬ್ಬರಿಗೂ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇದ್ದೆ ಇರುತ್ತದೆ. ಕೆಲವರು ಅತಿಯಾಗಿ ದಪ್ಪಗಿರುವವರು ತೆಳ್ಳಗಾಗಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದರೆ,. ತೆಳ್ಳಗೆ ದೇಹ ಹೊಂದಿರುವವರು ದಪ್ಪ ಆಗೋಕೆ ನಾನಾ ಸರ್ಕಸ್‍ಗಳನ್ನೇ ಮಾಡುತ್ತಾರೆ. ಕಡಿಮೆ ತೂಕ ಇರುವವರು ತೂಕ ಹೆಚ್ಚಿಸಿಕೊಳ್ಳಲು, ಹೆಚ್ಚು ತೂಕ ಇರೋರು ತೂಕ ಕಡಿಮೆ ಮಾಡಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಹೀಗೆ ಸುಂದರವಾಗಿ ಕಾಣೋ ಭರದಲ್ಲಿ ಗೊತ್ತಿದ್ದು ಅಥವಾ ಗೊತ್ತಿಲ್ಲದೇಯೋ ನಾನಾ ಎಡವಟ್ಟುಗಳಾಗಿಬಿಡುತ್ತವೆ.

ಪ್ರತಿ ದಿನ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬರುವ ವೆಯ್ಟ್ ಲಾಸ್, ಫ್ಯಾಟ್ ಲಾಸ್ ಆ್ಯಡ್‍ಗಳು ಈ ಎಡವಟ್ಟುಗಳನ್ನು ಮಾಡಿಕೊಳ್ಳಲು ಮತ್ತಷ್ಟು ಪ್ರೇರೇಪಿಸುತ್ತವೆ. ದಿನಕ್ಕೊಂದು ಕಂಪನಿಗಳು ತಲೆಎತ್ತಿ ನೂರಾರು ಔಷಧಿಗಳನ್ನು ತಯಾರಿಸಿ ಆಕರ್ಷಕ ಆ್ಯಡ್‍ಗಳ ಮೂಲಕ ತಮ್ಮ ಪ್ರಾಡಕ್ಟ್‍ಗಳನ್ನು ಸೇಲ್ ಮಾಡಲು ಮುಂದಾಗುತ್ತವೆ. ಅನಿವಾರ್ಯತೆ ಇರುವ ಕೆಲವರು ಬೆಲೆಯನ್ನೂ ಲೆಕ್ಕಹಾಕದೇ ಆ್ಯಡ್‍ಗಳಲ್ಲಿ ಬರುವ ಔಷದಿಗಳನ್ನು ಉಪಯೋಗಿಸಿ ಲಾಭ ಪಡೆದುಕೊಂಡವರಂತೆ ಭಾವಿಸುತ್ತಾರೆ. ಆದರೆ ಅವರು ಆ ಒಂದು ಲಾಭದಿಂದಲೇ ಬೆಲೆಕಟ್ಟಲಾಗದಷ್ಟು ನಷ್ಟಕ್ಕೊಳಗಾಗಿರುತ್ತಾರೆ. ಹೇಗೆ ಅಂತೀರಾ?

ಇತ್ತೀಚೆಗೆ ಮಾರ್ಕೆಟ್‍ಗಳಲ್ಲಿ ನಾನಾ ಬಗೆಯ ಗ್ರೀನ್ ಟೀಗಳು, ನಾನಾ ಬಗೆಯ ಔಷಧಿಗಳು, ಮಾತ್ರ್ರೆಗಳು ಮಾರುಕಟ್ಟೆಯನ್ನೇ ಆವರಿಸಿಬಿಟ್ಟಿವೆ. ದಪ್ಪಗಿರುವವರನ್ನು, ತೆಳ್ಳಗಿರುವವರನ್ನು ಅಥವಾ ದೇಹದಲ್ಲಿ ಫ್ಯಾಟ್ ತುಂಬಿರುವವರನ್ನು ಗುರಿಯಾಗಿರಿಸಿಕೊಂಡು ತಯಾರಿಸಿದ ಈ ಔಷಧಿಗಳು ನೇರವಾಗಿ ಲಿವರ್ (ಯಕೃತ್ತು)ನ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬ ಅಂಶ ಇತ್ತೀಚೆಗೆ ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ,. ದಪ್ಪಗಿದ್ದವರು ತೆಳ್ಳಗಾಗಲು ಕುಡಿಯುವ ಕೆಲವು ಡ್ರಿಂಕ್ಸ್‍ಗಳು ನೇರವಾಗಿ ಯಕೃತ್ತಿನಮೇಲೆ ಪರಿಣಾಮಬೀರಿ ದೇಹದ ಕೊಬ್ಬನ್ನು ಕರಗಿಸುತ್ತವೆಯಾದರೂ ದೇಹದ ಅತಿ ಮುಖ್ಯ ಅಂಗವಾದ ಲಿವರ್‍ನ್ನು ಹಾಳುಮಾಡಿಬಿಡುತ್ತವೆ ಎಂಬ ಆಘಾತಕಾರಿ ಅಂಶ ಈ ಔಷಧಿಗಳ ಗುಣಮಟ್ಟವನ್ನು ಪ್ರಶ್ನಿಸುವಂತಿದೆ.

ಒಂದು ಅಧ್ಯಯನದ ಪ್ರಕಾರ ಹರೆಯದವರು, ಮಧ್ಯವಯಸ್ಸಿನವರು ಸುಂದರವಾಗಿ ಕಾಣುವ ಆತುರದಲ್ಲಿ ಟಿವಿಗಳಲ್ಲಿ, ಪೇಪರ್‍ಗಳಲ್ಲಿ ಬರುವ ಜಾಹೀರಾತುಗಳ ಮೊರೆಹೋಗಿ ಒಂದೆ ವಾರದಲ್ಲಿ ತೆಳ್ಳಗೆ ಬೆಳ್ಳಗೆ ಕಾಣುವ ಅವಸರದಲ್ಲಿ ಯಾವ ವೈದ್ಯರ ಸಲಹೆಯೂ ಇಲ್ಲದೇ ಈ ಔಷಧಿಗಳನ್ನು ಉಪಯೋಗಿಸಿ ತಮ್ಮ ಲಿವರ್‍ನ್ನು ಹಾಳುಮಾಡಿಕೊಂಡವರ ಸಂಖ್ಯೆ ಹಚ್ಚುತ್ತಿದೆ ಎಂಬುದು ಬಯಲಾಗಿದೆ. 2004 ರಿಂದ 2012 ವರೆಗೆ ಈ ರೀತಿಯ ಔಷಧಿಗಳನ್ನು ಉಪಯೋಗಿಸಿದ ಪ್ರತಿ ಸಾವಿರ ಜನರಲ್ಲಿ 845 ಜನರ ಲಿವರ್‍ಗೆ ಹಾನಿಯುಂಟಾಗಿ ಬಹುದೊಡ್ಡ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ತೂಕ ಇಳಿಸಿಕೊಳ್ಳಲು, ಕೊಬ್ಬು ಕರಗಿಸಿಕೊಳ್ಳಲು ಹೆಚ್ಚಾಗಿ ಅನೇಕರು ಗ್ರೀನ್‍ಟೀಗಳ ಮೊರೆಹೋಗುತ್ತಾರೆ. ಆದರೆ ಆ ಒಂದು ಕಪ್ ಗ್ರೀನ್ ಟೀಯಲ್ಲಿ ಲಿವರ್‍ನ್ನು ಹಾಳುಮಾಡುವಷ್ಟು ಕ್ಯಾಟ್ಚಿನ್ಸ್ ಅಂಶವಿರುವುದು ಬೆಳಕಿಗೆ ಬಂದಿದೆ. ನೈಸರ್ಗಿಕವಾಗಿ ತಯಾರಿಸಿದ ಗ್ರೀನ್‍ಟೀಗಳು ಆರೋಗ್ಯಕ್ಕೇನೋ ಒಳ್ಳೆಯದೇ ಆದರೆ ನಾನಾ ಕಂಪನಿಗಳು ತಯಾರಿಸಿದ ಗ್ರೀನ್‍ಟೀ ಗಳು ನೈಸರ್ಗಿಕ ಅಂಶವನ್ನೇ ಹೊಂದಿರುವುದಿಲ್ಲ ಎಂಬ ಭಯಾನಕ ಅಂಶವು ಗ್ರೀನ್‍ಟೀಯ ಇನ್ನೊಂದು ಮುಖವನ್ನು ತೆರೆದಿಡುತ್ತದೆ. ಹೀಗಾಗಿ ತೂಕ ಮತ್ತು ಕೊಬ್ಬು ಕರಗಿಸಲು ಪ್ರತಿದಿನ ವ್ಯಾಯಾಮ ಅಥವಾ ಯೋಗಗಳಂತಹ ಯಾವುದೇ ಅಡ್ಡಪರಿಣಾಮಗಳಿಲ್ಲದ ಮಾರ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಇದರಿಂದ ನಿಮ್ಮ ಜೇಬಿಗೆ ಬೀಳುವ ಕತ್ತರಿಯಿಂದಲೂ, ಅನೇಕ ಅಡ್ಡ್ಟ ಪರಿಣಾಮ ಗಳಿಂದಲೂ ದೂರವಿರಬಹುದು.

Comments are closed.