ಮನೋರಂಜನೆ

ಈ ಬಾರಿಯ ಬಿಗ್’ಬಾಸ್ ನಲ್ಲಿ ಹುಚ್ಚ ವೆಂಕಟ್ ಭಾಗವಹಿಸುತ್ತಿರುದು ಏಕೆ ಗೊತ್ತಾ..?

Pinterest LinkedIn Tumblr

venkat

ಕಿರುತೆರೆಯಲ್ಲಿ ಬಿಗ್‌ಬಾಸ್ ಹವಾ ಜೋರಾಗಿದೆ. ಸೀಸನ್ 4ರಲ್ಲಿ ಇರಬಹುದಾದ ಸೆಲಿಬ್ರಿಟಿಗಳ ಕುತೂಹಲ ಎಲ್ಲರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಅಧಿಕೃತವೋ, ಅನಧಿಕೃತವೋ ಈಗಾಗಲೇ ಸಾಕಷ್ಟು ಹೆಸರು ಚಾಲ್ತಿ ಪಡೆದುಕೊಂಡಿವೆ. ಈ ನಡುವೆಯೇ ನಟ ಹುಚ್ಚು ವೆಂಕಟ್ ಕೂಡ ಸೀಸನ್ 4ರಲ್ಲೂ ಇರಲಿದ್ದಾರೆನ್ನುವ ಸುದ್ದಿ ಹಬ್ಬಿದೆ.

ಹಾಗಂತ ಇದು ಕಲರ್ಸ್ ಕನ್ನಡದ ಕಡೆಯಿಂದ ಬಂದ ಮಾಹಿತಿ ಖಂಡಿತವಾಗಿಯೂ ಅಲ್ಲ, ಖುದ್ದು ಹುಚ್ಚ ವೆಂಕಟ್ ಅವರೇ ಹೇಳಿದ್ದು. ‘ಬಿಗ್‌ಬಾಸ್‌ಗೆ ಹೋಗುವುದಿಕ್ಕೆ ನಂಗೂ ಆಹ್ವಾನ ಬಂದಿದೆ. ಕಲರ್ಸ್ ಕನ್ನಡದವರು ಸಂಪರ್ಕ ಮಾಡಿದ್ದಾರೆ. ಪೇಮೆಂಟ್ ವಿಚಾರದಲ್ಲಿ ಇನ್ನು ಫೈನಲ್ ಆಗಬೇಕಿದೆ’ ಎಂದಿದ್ದಾರೆ ಹುಚ್ಚ ವೆಂಕಟ್.

ಅಂದ ಹಾಗೆ, ಹುಚ್ಚ ವೆಂಕಟ್ ಈ ಬಾರಿ ‘ಬಿಗ್‌ಬಾಸ್’ಗೆ ಹೋಗುತ್ತಿರುವುದು ಕಂಟೆಸ್ಟೆಡ್ ಆಗಿ ಅಲ್ಲ. ಪ್ರತಿವಾರ ಟೆಲಿಕಾಸ್ಟ್ ಆಗುವ ಎಪಿಸೋಡ್‌ಗೆ ಕಾಮೆಂಟ್ ಕೊಡುತ್ತಾರಂತೆ ವೆಂಕಟ್. ಈ ಬಾರಿ ‘ಬಿಗ್‌ಬಾಸ್’ನಲ್ಲಿರುವ ವಿಶೇಷತೆಗಳ ಈ ಪೈಕಿ ಇದು ಒಂದಂತೆ. ಈ ನೆಪದಲ್ಲಿ ತಾನೂ ಕೂಡ ‘ಬಿಗ್‌ಬಾಸ್’ಗೆ ಹೋಗುತ್ತಿದ್ದೇನೆ ಎನ್ನುವುದು ವೆಂಕಟ್ ಹೇಳುವ ಮಾತು.

ಕಲರ್ಸ್ ಕನ್ನಡದ ಕಡೆಯಿಂದ ಇದು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಅಸಲಿಗೆ ವಾಹಿನಿ ಇದುವರೆಗೂ ಯಾವುದೇ ಸೆಲೆಬ್ರಿಟಿಗಳ ಬಗ್ಗೆ ಮಾತನಾಡಿಲ್ಲ. ಇಷ್ಟಾಗಿಯೂ ಕಾಮೆಂಟ್ ಪಡೆಯುವ ನೆಪದಲ್ಲಿ ‘ಕಲರ್ಸ್ ಕನ್ನಡ’ಬಿಗ್‌ಬಾಸ್ ಸೀಸನ್ 4ಕ್ಕೂ ಹುಚ್ಚು ವೆಂಕಟ್ ಅವರ ಮೇಲೆ ಕಣ್ಣು ಹಾಕಿರುವುದಕ್ಕೆ ಕಾರಣವೇ ಇಲ್ಲ ಅಂತಲ್ಲ.

Comments are closed.