ಕರ್ನಾಟಕ

1 ರೂ. ಹೆಚ್ಚುವರಿ ಪಡೆದ ವಾಸುದೇವ್ ಅಡಿಗಾಸ್ ಹೊಟೇಲ್ ನವರಿಗೆ 100 ರುಪಾಯಿ ದಂಡ ! ಈ ಕುತೂಹಲಕಾರಿ ಪ್ರಕರಣವನ್ನೊಮ್ಮೆ ಓದಲೇಬೇಕು….

Pinterest LinkedIn Tumblr

hotel

ಬೆಂಗಳೂರು: ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಗೆ ಹಣ ನೀಡುವುದಕ್ಕಾಗಿ ಅಡಿಗಾಸ್ ಹೊಟೇಲ್ ಗ್ರಾಹಕರಿಂದ ಪ್ರತಿ ಬಿಲ್ ಮೇಲೆ 1 ರುಪಾಯಿ ಹೆಚ್ಚುವರಿ ಹಣ ಪಡೆಯುತ್ತಿದ್ದು ಇದೀಗ ಗ್ರಾಹಕರ ನ್ಯಾಯಾಲಯದಲ್ಲಿ ಮಾನಕಳೆದುಕೊಂಡಿದೆ.

ಯೋಜನೆಗೆ ಹಣದ ನೆರವು ನೀಡುವುದಾದರೆ ವೈಯಕ್ತಿಕ ಆದಾಯ ಅಥವಾ ಹೊಟೇಲ್ ಆದಾಯದಲ್ಲಿ ನೀಡಬೇಕೆ ಹೊರತು ಗ್ರಾಹಕರಿಂದ ಹಣ ವಸೂಲಿ ಮಾಡಿ ಅಲ್ಲ ಎಂದು ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅಡಿಗಾಸ್ ಹೊಟೇಲ್ ನವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಅಡಿಗಾಸ್ ಅರ್ಜಿ ವಜಾ ಆಗಿದ್ದು, ದಂಡ ಕಟ್ಟುವ ಪರಿಸ್ಥಿತಿಗೆ ತಲುಪಿದೆ.

ಅಡಿಗಾಸ್ ಹೊಟೇಲ್ ನವರು ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಅವರು 2013ರಲ್ಲಿ ಗ್ರಾಹಕರ ಕೋರ್ಟ್ ಗೆ ದೂರು ನೀಡಿದ್ದರು. ವಾದ ವಿವಾದ ಆಲಿಸಿದ ಕೋರ್ಟ್ ವಾಸುದೇವ್ ಅಡಿಗಾಸ್ ಹೊಟೇಲ್ ನವರಿಗೆ 100 ರುಪಾಯಿ ದಂಡ ಹಾಗೂ ಅರ್ಜಿದಾರರಿಗೆ ಕಾನೂನು ಹೋರಾಟದ 1000 ರುಪಾಯಿ ಖರ್ಚನ್ನು ನೀಡಬೇಕೆಂದು ಆದೇಶಿಸಿತ್ತು.

ಇಸ್ಕಾನ್ ಮತ್ತು ಅಡಿಗಾಸ್ ಹೊಟೇಲ್ ಮಧ್ಯೆ ಒಪ್ಪಂದವಾಗಿತ್ತು. ಆದರೆ ಹೊಟೇಲ್ ನವರು ಜನರಿಂದ ಹಣ ವಸೂಲಿ ಮಾಡುತ್ತಿದ್ದು ಇದುವರೆಗೂ ವಾಸುದೇವ್ ಅಡಿಗಾಸ್ ಹೊಟೇಲ್ ಅಕ್ಷಯ ಪಾತ್ರೆ ಯೋಜನೆಗೆ ಎಷ್ಟು ಹಣ ನೀಡಿದೆ ಎನ್ನುವ ಮಾಹಿತಿ ಎಲ್ಲೂ ನೀಡಿಲ್ಲ.

Comments are closed.