ವೀಡಿಯೋ ವರದಿಗಳು

ತನ್ನ ಮಲ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಂದೆಗೆ 100 ವರ್ಷ ಶಿಕ್ಷೆ ! ಕೊಂದ ದೃಶ್ಯವನ್ನೊಮ್ಮೆ ನೋಡಿ…

Pinterest LinkedIn Tumblr

https://youtu.be/0IWbcJ-qobo

ನ್ಯೂಯಾರ್ಕ್: 3 ವರ್ಷದ ಮಲ ಮಗಳನ್ನು ಈಜುಕೊಳದಲ್ಲಿ ಎಸೆದು ಕೊಂದ ಪಾಪಿ ತಂದೆಗೆ 100 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಅಗಸ್ಟ್‌12, 2015ರಲ್ಲಿ ಮೆಕ್ಸಿಕೋದ ಮಿಚೋಕನ್ ನಗರದ ಹೋಟೆಲೊಂದರಲ್ಲಿ ಜೋಸ್ ಡೇವಿಡ್ ಎನ್ನೋ ವ್ಯಕ್ತಿ ತನ್ನ ಮಲಮಗಳನ್ನು ಈಜು ಕೊಳದಲ್ಲಿ ಮುಳುಗಿಸಿ ಹತ್ಯೆಗೈದಿದ್ದ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಸಿಸಿಟಿವಿಯಲ್ಲಿ ದೃಶ್ಯಗಳನ್ನು ನೋಡಿದ ಮಗುವಿನ ತಾಯಿ ದೂರು ದಾಖಲಿಸಿದ್ದಳು. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಪೊಲೀಸರು ಅರೋಪಿ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದ್ದರು.

ಸುದೀರ್ಘ ವಿಚಾರಣೆ ಬಳಿಕ ಕೋರ್ಟ್‌ಇದೀಗ ತೀರ್ಪು ನೀಡಿದೆ. ನ್ಯಾಯಾಲಯ ಮಗಳನ್ನು ಕೊಂದ ಅಪ್ಪನಿಗೆ 100 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Comments are closed.