ಕರಾವಳಿ

ಯುಗಾದಿ ಹಬ್ಬದ ಶುಭಕೋರಿ ಅಭಿಮಾನಿಗಳಿಗೆ ‘ಅಧ್ಯಾಯ-2’ ಬಗ್ಗೆ ಸರ್‌ಪ್ರೈಸ್ ಕೊಟ್ಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ

Pinterest LinkedIn Tumblr

ಬೆಂಗಳೂರು: ಜನತೆಗೆ ಯುಗಾದಿ ಹಬ್ಬದ ಶುಭಕೋರಿದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಸಿನಿ ಪ್ರಿಯರಿಗೆ ಸಿಹಿಸುದ್ದಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಯುಗಾದಿ ಹಬ್ಬದ ಪ್ರಯುಕ್ತ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿಯವರು ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಕಮಲಶಿಲೆಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ವಿಶೇಷ ಪೂಜೆ ಮಾಡಿಸಿದ್ದಾರೆ. ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಲ್ಲದೆ ‘ಅಧ್ಯಾಯ ಎರಡು ಇಲ್ಲಿಂದ ಶುರು’ ಎಂದು ನೋಟಿಸ್ ಬೋರ್ಡ್ ಮೇಲೆ ಬರೆದಿರುವ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಅಂದಹಾಗೇ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ ಅಧ್ಯಾಯ–1’ ಚಿತ್ರದ ಕೊನೆಯಲ್ಲಿ ‘ಅಧ್ಯಾಯ–2’ ಬರಲಿದೆ ಎಂಬ ಸುಳಿವು ನೀಡಲಾಗಿತ್ತು.ರಿಷಬ್ ಅವರು ಹಂಚಿಕೊಂಡ ಪೋಸ್ಟ್‌ಗೆ ಅಭಿಮಾನಿಗಳು ‘ಕಾಂತಾರ ಅಧ್ಯಾಯ–2’ ಬರಬಹುದೆಂದು ಊಹೆ ಮಾಡುತ್ತಿದ್ದಾರೆ.

 

Comments are closed.