ಕರಾವಳಿ

ನಾಳೆ (ಮಾ.20 ಶುಕ್ರವಾರ) ಈದುಲ್ ಫಿತ್ರ್‌ ಆಚರಿಸಲು ದ.ಕ.ಜಿಲ್ಲಾ ಖಾಜಿ, ಉಳ್ಳಾಲ ಖಾಝಿ, ಉಡುಪಿ ಜಿಲ್ಲಾ ನಾಇಬ್ ಖಾಝಿ ಕರೆ

Pinterest LinkedIn Tumblr

ಮಂಗಳೂರು/ಉಡುಪಿ: ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಇಂದು ಮುಸ್ಸಂಜೆ ಆಗಿರುವುದರಿಂದ ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಮಸ್ಟಿದ್ ಝೀನತ್ ಭಕ್ಟ್ ಕೋಶಾಧಿಕಾರಿ ಎಸ್.ಎಂ. ರಶೀದ್‌ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಳ್ಳಾಲದಲ್ಲಿಯೂ ಶುಕ್ರವಾರ ಈದುಲ್ ಫಿತ್‌‌ರ್ ಆಚರಿಸಲು ಉಳ್ಳಾಲ ಖಾಝಿ ಕಾಂತಪುರಂ ಎ.ಪಿ. ಅಬೂಬಕ‌ರ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜೆ.ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಶುಕ್ರವಾರ: ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಇಂದು ಮುಸ್ಸಂಜೆ ಆಗಿರುವುದರಿಂದ ಕರಾವಳಿಯಲ್ಲಿ ಶುಕ್ರವಾರ ಈದುಲ್ ಫಿತ್ ಆಚರಿಸಲು ಉಡುಪಿ ಜಿಲ್ಲಾ ನಾಇಬ್ ಖಾಝಿ ಬಿ ಕೆ ಅಬ್ದುರ್ರಹ್ಮಾನ್ ಮದನಿ ಮೂಳೂರು ಕರೆ ನೀಡಿದ್ದಾರೆ ಎಂದು ಉಡುಪಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ ಬಾವು ಮೂಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.