ಪ್ರಮುಖ ವರದಿಗಳು

ಕುಡಿತ ಮತ್ತಲ್ಲಿ ಕೊಟ್ಟ ಕಿಸ್ಸೊಂದು ಯುವತಿಯ ಮದುವೆಯನ್ನೇ ಮುರಿದು ಹಾಕಿತು…ಈ ವೀಡಿಯೊ ಒಮ್ಮೆ ನೋಡಿ !

Pinterest LinkedIn Tumblr

https://youtu.be/Jpwgjel_k6k

ಮೆಕ್ಸಿಕೋ: ಕುಡಿತ ಅತಿಯಾದರೆ ಎಂತಹ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಮೆಕ್ಸಿಕೋದಲ್ಲಿ ಒಂದು ನಿದರ್ಶನ ಘಟನೆ ನಡೆದಿದೆ. ಅತಿಯಾಗಿ ಕುಡಿದು ಮೈಮರೆತ ಯುವತಿಯ ಮದುವೆ ಇದೀಗ ರದ್ದಾಗಿ ಹೋಗಿದೆ.

ಕೆಲವೇ ದಿನಗಳಲ್ಲಿ ಮದುವೆ ಮಾಡಿಕೊಳ್ಳಬೇಕಿದ್ದ ಎಮ್ಮಾ ಅಲಿಸಿಯಾ ಪಜ್‌ಅಯ್ಲಾ ಎಂಬ ಮೆಕ್ಸಿಕೋದ ಯುವತಿ ತನ್ನ ಗೆಳತಿಯೊಂದಿಗೆ ಪಾರ್ಟಿಯೊಂದಕ್ಕೆ ತೆರಳಿದ್ದಾಳೆ. ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದ ಎಮ್ಮಾ ಅಪರಿಚಿತ ವ್ಯಕ್ತಿಯೊಂದಿಗೆ ಚುಂಬನ ಮಾಡಿದ್ದಾಳೆ. ರೆಸಾರ್ಟ್‌ನಲ್ಲಿ ನಡೆದ ಈ ಪಾರ್ಟಿಯ ಈ ಚುಂಬಿಸುತ್ತಿದ್ದಾಗ ಅಲ್ಲಿದ್ದವರೇ ವಿಡಿಯೋ ಮಾಡಿದ್ದಾರೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಭಾವಿ ಪತಿ ಹಾಗೂ ಆತನ ಕುಟುಂಬ ಮದುವೆಯನ್ನು ರದ್ದುಗೊಳಿಸಿದೆ. ಕೇವಲ ಒಂದೇ ನಿಮಿಷದ ಈ ವಿಡಿಯೋ ಇದೀಗ ಮದುವೆಯನ್ನೇ ಮುರಿದು ಹಾಕಿದೆ.

Comments are closed.