ಆರೋಗ್ಯ

ಬೊಕ್ಕತಲೆ ನಿವಾರಣೆಗೆ ಮನೆ ಮದ್ದು.

Pinterest LinkedIn Tumblr

baldness

ಮಂಗಳೂರು: ಪ್ರಸಕ್ತ ದಿನಗಳಲ್ಲಿ ಕೂದಲು ಉದುರುವಿಕೆ ಸಾಮಾನ್ಯ. ಹಿಂದೊಂದು ಕಾಲದಲ್ಲಿ ವೃದ್ಧಾಪ್ಯ ಬಂದರೆ ಮಾತ್ರ ಕೂದಲು ಉದುರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ 20ನೇ ವಯಸ್ಸಿಗೇ ಕೂದಲು ಉದುರಲು ಪ್ರಾರಂಭವಾಗಿ ಬಿಟ್ಟಿದೆ. ಅಲ್ಲದೆ ಇಂತಹ ಸಮಸ್ಯೆ ಎದುರಿಸುವವರು ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಹೋಗಿ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಬಗೆ ರಾಸಾಯನಿಕ ಶಾಂಪೂಗಳಿಗೆ ಮರುಳಾಗಿ, ಕೊನೆಗೆ ಯಾವುದೇ ಫಲಿತಾಂಶ ಕಾಣದೇ ಬೇಸತ್ತು ಹೋಗಿರುತ್ತಾರೆ.

ಮೊದಲಿಗೆ ಕೂದಲು ಯಾಕೆ ಉದುರುತ್ತದೆ ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ನಾವು ತಿಳಿದುಕೊಳ್ಳುವುದು ಅತ್ಯಗತ್ಯ. ಸಾಮಾನ್ಯವಾಗಿ, ಆರೋಗ್ಯವಂತ ಮನುಷ್ಯನಲ್ಲಿ ಪ್ರತಿ ದಿನ 50 ರಿಂದ 100 ಕೂದಲು ಉದುರುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ. ಆದರೆ ಇವುಗಳಿಗಿಂತಲೂ ಮಿಗಿಲಾಗಿ ಇಂದಿನ ಒತ್ತಡ ಮತ್ತು ಅಧಿಕ ಕೆಲಸದಿಂದ ಕೂಡಿದ ಜೀವನ ಶೈಲಿಯೇ ಕೂದಲು ಉದುರುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಯಾವಾಗ ನಾವು ಆರೋಗ್ಯಕರವಾದ ಆಹಾರ ಮತ್ತು ಜೀವನ ಶೈಲಿಗೆ ಬೆನ್ನು ಮಾಡಿ ಸಾಗುತ್ತೇವೆಯೋ, ಆಗ ಅದರಿಂದ ನಮ್ಮ ಸೌಂದರ್ಯ ಮತ್ತು ಕೂದಲಿನ ಮೇಲೆ ಇದರ ದುಷ್ಪರಿಣಾಮಗಳು ಕಂಡು ಬರುತ್ತವೆ. ಅಲ್ಲದೆ ಕೆಲವೊಮ್ಮೆ ಆರೋಗ್ಯಕರವಾದ ಡಯಟ್ ನಿಮ್ಮ ಕೂದಲಿಗೆ ಒಳ್ಳೆಯ ಲುಕ್ ನೀಡಿದರೆ, ಡಯಟ್‌ನಿಂದಾಗುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು, ನಿಮ್ಮ ಕೂದಲು ಉದುರುವಿಕೆಗೆ ಮತ್ತು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ನಿಮ್ಮ ತಲೆಯಲ್ಲಿ ಬೊಕ್ಕ ತಲೆಯ ಲಕ್ಷಣಗಳನ್ನು ನೀವು ಗುರುತಿಸಿದಲ್ಲಿ, ಅದಕ್ಕೆ ನೀವು ಸೇವಿಸುತ್ತಿರುವ ಕೆಟ್ಟ ಊಟ ಮತ್ತು ತಲೆ ಕೂದಲಿಗೆ ಬಳಸುತ್ತಿರುವ ಕೆಟ್ಟ ಪದಾರ್ಥಗಳೇ ಕಾರಣ ಎಂದು ತಿಳಿಯಿರಿ.

ಚಿಂತಿಸಬೇಡಿ, ಬೊಕ್ಕ ತಲೆಯ ಮೇಲೆ ಕೂದಲು ಬೆಳೆಯಲು ಮನೆಯಲ್ಲಿಯೇ ಹಲವಾರು ಮನೆ ಮದ್ದುಗಳು ದೊರೆಯುತ್ತವೆ. ಅವುಗಳನ್ನು ಸುಲಭವಾಗಿ ಬಳಸಿಕೊಂಡು, ಸ್ವಾಭಾವಿಕವಾಗಿ ನಿಮ್ಮ ತಲೆಯಲ್ಲಿ ಕೂದಲನ್ನು ಬೆಳೆಯುವ ಹಾಗೆ ಮಾಡಬಹುದು!, ಬನ್ನಿ ಅದಕ್ಕಾಗಿ ಯಾವ ಮನೆ ಮದ್ದುಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ..

ಮೆಂತೆ ಕಾಳು:
ಮೆಂತೆ ಕಾಳುಗಳೂ ಕೂಡ ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಾಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಹಾಗಾಗಿ ಮೆಂತೆ ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

ಅಲೋವಿರಾ ಜೆಲ್:
ಅಲೋವಿರಾ ಅಥವಾ ಲೋಳೆಯ ಜೆಲ್ ಅನ್ನು ತಾಜಾ ಆಗಿ ಗಿಡದಿಂದ ಕತ್ತರಿಸಿ ತೆಗೆದುಕೊಳ್ಳಿ. ಇದನ್ನು ಬೊಕ್ಕತಲೆಯ ಭಾಗದಲ್ಲಿ ನೇರವಾಗಿ ಲೇಪಿಸಿ. ತದನಂತರ ಸ್ವಲ್ಪ ಹೊತ್ತು ಇದನ್ನು ಹಾಗೆಯೇ ಒಣಗಲು ಬಿಡಿ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಎಲ್ಲಾ ಮುಗಿದ ಮೇಲೆ ಬೆಚ್ಚಗಿನ ನೀರಿನಿಂದ ತಲೆ ಕೂದಲನ್ನು ಚೆನ್ನಾಗಿ ತೊಳೆಯಿರಿ.

coconut_oil

ತೆಂಗಿನ ಹಾಲು ಮತ್ತು ಎಣ್ಣೆ;
ತೆಂಗಿನ ಹಾಲನ್ನು ಎಣ್ಣೆಯ ಜೊತೆಗೆ ಬೆರೆಸಿಕೊಳ್ಳಿ. ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಬೆರೆಸಿಕೊಳ್ಳಿ ಮತ್ತು ಅದನ್ನು ಬೊಕ್ಕ ತಲೆಗೆ ಲೇಪಿಸಿ ಮಸಾಜ್ ಮಾಡಿ. ಈ ಚಿಕಿತ್ಸೆಯನ್ನು ವಾರಕ್ಕೆ ಎರಡು ಬಾರಿ ಮಾಡಿಕೊಳ್ಳಿ. ಬೊಕ್ಕ ತಲೆಯ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಜೇನು ತುಪ್ಪದ ಮಸಾಜ್:
ಎರಡು ಟೇಬಲ್ ಚಮಚ ಜೇನು ತುಪ್ಪದ ಜೊತೆಗೆ ಒಂದು ಟೇಬಲ್ ಚಮಚ ಚಕ್ಕೆಯ ಪುಡಿಯನ್ನು ಬೆರೆಸಿಕೊಳ್ಳಿ. ತದನಂತರ ಈ ಮಿಶ್ರಣವನ್ನು ಬೊಕ್ಕ ತಲೆಯ ಮೇಲೆ ಲೇಪಿಸಿಕೊಂಡು, 20 ನಿಮಿಷ ಬಿಟ್ಟು ಕೂದಲನ್ನು ಚೆನ್ನಾಗಿ ತೊಳೆಯಿರಿ.

ಸೀಬೆ ಹಣ್ಣಿನ ಎಲೆಗಳು:
ಒಂದಿಷ್ಟು ಸೀಬೆ ಹಣ್ಣಿನ ಎಲೆಗಳ ಜೊತೆಗೆ ಎರಡು ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದರ ಮೂಲಕ ನಿಮ್ಮ ಕೂದಲನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಕೂದಲು ಬೇಗೆ ಬೆಳೆಯಲು ಸಾಧ್ಯವಾಗುತ್ತದೆ. ನಿಮಗೆ ಬೇಕಾದಲ್ಲಿ ಒಂದು ಟೇಬಲ್ ಚಮಚ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು.

ಹರಳೆಣ್ಣೆ:
ಹರಳೆಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದು ಅಥವಾ ಎರಡು ಟೇಬಲ್ ಚಮಚ ಹರಳೆಣ್ಣೆಯನ್ನು ಅಂಗೈನಲ್ಲಿ ತೆಗೆದುಕೊಂಡು ಬೊಕ್ಕತಲೆಯ ಭಾಗದಲ್ಲಿ ಲೇಪಿಸಿಕೊಳ್ಳಿ. ಇದರಿಂದ ಸ್ವಾಭಾವಿಕವಾಗಿ ನಿಮ್ಮ ಕೂದಲು ಆ ಭಾಗದಲ್ಲಿ ಬೆಳೆಯುತ್ತದೆ.

ನೆಲ್ಲಿಕಾಯಿ:
ಕೂದಲಿನ ವೃದ್ಧಿಸಲು ಹಾಗೂ ಕೂದಲನ್ನು ಸುಸ್ಥಿತಿಯಲ್ಲಿಡುವಲ್ಲಿ ನೆಲ್ಲಿಕಾಯಿಯ ಪಾತ್ರ ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ವಿಟಮಿನ್ ಸಿ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೆಲ್ಲಿಕಾಯಿ ರಸ ಮತ್ತು ಲಿಂಬೆ ಹಣ್ಣಿನ ರಸಗಳ ಮಿಶ್ರಣವನ್ನು ಕೂದಲು ಉದುರಿರುವ ಜಾಗಕ್ಕೆ ಹಚ್ಚಿ, ಅಲ್ಲದೆ ಒಂದು ದಿನ ಹಾಗೆಯೇ ಬಿಡಿ ಹಾಗೂ ಮರುದಿನ ಸ್ನಾನ ಮಾಡುವಾಗ ನೈಸರ್ಗಿಕ ಶಾಂಪೂ ಬಳಸಿ ಸ್ನಾನ ಮಾಡಿ.

Comments are closed.