ಅಂತರಾಷ್ಟ್ರೀಯ

ಕಿಡ್ನಿ ಕಲ್ಲಿನ ಲಕ್ಷಣಗಳು ಇಲ್ಲಿವೆ….ನೀವು ಇದನ್ನು ತಿಳಿದುಕೊಳ್ಳಿ

Pinterest LinkedIn Tumblr

kidney_stone

ನವದೆಹಲಿ: ಮೂತ್ರಪಿಂಡದಲ್ಲಿ ಕಲ್ಲು ಬೆಳೆಯುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುವ ಕಾಯಿಲೆ. ಇದಕ್ಕೆ ಹಲವು ಕಾರಣಗಳಿದ್ದು, ಸೂಕ್ತ ಚಿಕಿತ್ಸೆ ಅಥವಾ ಮುಂಜಾಗ್ರತಾ ಕ್ರಮದಿಂದ ಇದನ್ನು ತಡೆಯಬಹುದು ಎಂದು ವೈದ್ಯರು ಹೇಳುತ್ತಾರೆ.

ನೀರಿನ ಕೊರತೆ, ಸೋಡಿಯಂ ಪ್ರಮಾಣದಲ್ಲಿ ಹೆಚ್ಚಳ, ಡಯಾಬಿಟಿಸ್, ರಕ್ತದೊತ್ತಡ ಮತ್ತು ಅನುವಂಶಿಕತೆಯಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವ ಸಾಧ್ಯತೆ ಹೆಚ್ಚು. ಕೆಳಹೊಟ್ಟೆಯಲ್ಲಿ ಅಸಾಧ್ಯ ನೋವು, ಪಕ್ಕೆಲುಬು, ಬೆನ್ನಿನಲ್ಲಿ ನೋವು, ವಾಂತಿಯ ಜತೆ ನೋವು, ಬೇಗ ಸುಸ್ತಾಗುವುದು, ಮೂತ್ರವಿಸರ್ಜನೆ ವೇಳೆ ನೋವು, ಮೂತ್ರದಲ್ಲಿ ರಕ್ತ, ವಾಸನೆಯುಕ್ತ ಮೂತ್ರ, ಮೂತ್ರ ಹೊಯ್ಯಲು ಸಮಸ್ಯೆ, ಉರಿಮೂತ್ರ, ಜ್ವರ-ಶೀತ ಮತ್ತು ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕೆನ್ನಿಸುವುದು ಕಿಡ್ನಿಯಲ್ಲಿ ಕಲ್ಲು ಉಂಟಾಗಿರುವ ಸೂಚನೆ ಎಂದು ವೈದ್ಯರು ತಿಳಿಸಿದ್ದಾರೆ.

ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡರೆ ಸಮಸ್ಯೆಯಿಂದ ಪಾರಾಗಬಹುದು. ದಿನನಿತ್ಯ ಅತಿಹೆಚ್ಚು ನೀರು ಕುಡಿಯುವುದು, ನೀರಿನಂಶ ಹೆಚ್ಚಿರುವ ಆಹಾರ, ಸೋಡಿಯಂ ಪದಾರ್ಥಗಳ ಕಡಿಮೆ ಸೇವನೆ ಮಾಡಬೇಕು.

Comments are closed.