ಅಂತರಾಷ್ಟ್ರೀಯ

ಕೋಮಾದಲ್ಲಿದ್ದವ ಈಜು ಸ್ಪರ್ಧೆಯಲ್ಲಿ ಬಂಗಾರ ಗೆದ್ದ ಕತೆ ಇದು…

Pinterest LinkedIn Tumblr

spa

ರಿಯೋ ಡಿ ಜನೈರೋ: ಗುಲ್ಮರೋಗಕ್ಕೆ ತುತ್ತಾಗಿ ಮರಣ ಗೆದ್ದು ಬಂದ ಕ್ರಿಸ್‌ ಸಾಧನೆಯಿದು. ಏಳು ವರ್ಷಗಳ ವೈರಸ್‌ ಸೋಂಕಿಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡುತ್ತಾ ಕೋಮಾ ಸ್ಥಿತಿ ತಲುಪಿದ್ದ ಬ್ರಿಟನ್‌ನ 23 ವರ್ಷದ ಕ್ರಿಸ್‌ ಮಿಯರ್ಸ್‌, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲೇಬೇಕೆಂಬ ಹಠದಲ್ಲಿ ಮರುಹುಟ್ಟು ಪಡೆದವ.

ಗುಲ್ಮದ ಸೋಂಕಿಗೆ ತುತ್ತಾಗಿದ್ದ ಕ್ರಿಸ್‌ನ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು ಪ್ರಯೋಜನಕ್ಕೆ ಬಾರದಷ್ಟುಹಾಳಾಗಿದ್ದ ಗುಲ್ಮವನ್ನು ಬೇರ್ಪಡಿಸಿದ್ದರು. ಆದರೂ, ಕ್ರಿಸ್‌ ಬದುಕುಳಿಯುವುದು ಕಷ್ಟವಾಗಿತ್ತು. ದಿನಗಟ್ಟಲೇ ಕೋಮಾದಲ್ಲಿದ್ದ ಅವರು, ಅದೃಷ್ಟವಶಾತ್‌ ಬದುಕುಳಿದರು.

ಆದರೆ, ಹಾಗೆ ಬದುಕುಳಿದ ಕ್ರಿಸ್‌ ಅವರಲ್ಲಿ ಏನಾದರೂ ಸಾಧಿಸಬೇಕೆಂಬ ಅದಮ್ಯ ಛಲ ಹುಟ್ಟಿತು. ತನ್ನ ಅಚ್ಚುಮೆಚ್ಚಿನ ಈಜು ಹವ್ಯಾಸದಲ್ಲಿ ತೊಡಗಿಕೊಂಡು ಒಲಿಂಪಿಕ್ಸ್‌ ಚಿನ್ನ ಗೆಲ್ಲಬೇಕೆಂದು ಆತ ನೀರಿಗಿಳಿದ. ಆರು ವರ್ಷಗಳ ಆತನ ಸತತ ಪರಿಶ್ರಮ ಇದೀಗ ನನಸಾಗಿದೆ.

ಬುಧವಾರ ರಾತ್ರಿ ನಡೆದ ಸಿಂಕ್ರೊನೈಸ್ಡ್‌ ಈಜು ಸ್ಪರ್ಧೆಯಲ್ಲಿ ಈತ ಹಾಗೂ ಜ್ಯಾಕ್‌ ಲಾಫರ್‌ ಜೋಡಿ, ಬ್ರಿಟನ್‌ಗೆ ಚಿನ್ನದ ಸಾಧನೆ ತಂದಿದೆ. ಇದು ಈ ವಿಭಾಗದಲ್ಲಿ ಬ್ರಿಟನ್‌ಗೆ ಬಂದ ಮೊಟ್ಟಮೊದಲ ಚಿನ್ನ. ಈ ಇಬ್ಬರ ಬಗ್ಗೆ ಮತ್ತಿನ್ನೊಂದು ವಿಚಾರವನ್ನಿಲ್ಲಿ ಹೇಳಲೇಬೇಕು. ಇಬ್ಬರೂ ಪ್ರತ್ಯೇಕವಾಗಿ ತಂತಮ್ಮ ಗಲ್‌ರ್‍ಫ್ರೆಂಡ್‌ಗಳನ್ನು ಹೊಂದಿದ್ದರೂ, ಸಲಿಂಗ ಕಾಮಿಗಳಂತೆ ಆಗಾಗ ಪೋಸು ಕೊಡುತ್ತಾರೆ! ಮರ್ಮವೇನೋ ಗೊತ್ತಿಲ್ಲ!

Comments are closed.