ನೀಲಿ ಚಿತ್ರದ ರಾಣಿ ಸನ್ನಿ ಲಿಯೋನ್ ಅವರ ಪ್ರಸಿದ್ದಿ ಎಲ್ಲರಿಗೂ ಗೊತ್ತಿರುವ ವಿಚಾರ. ಯುಟ್ಯೂಬ್ ನಲ್ಲಿಯೂ ಅವಳ ‘ಹವಾ’ ಮುಂದೆ ಯಾರಿದ್ದೂ ಇಲ್ಲ. ಆದರೆ ಇದೀಗ ಸನ್ನಿ ಲಿಯೋನ್ ಜತೆ ನಟಿಸಲು ಬಾಲಿವುಡ್ ಮಂದಿಯೇ ಹೆದರುತ್ತಿದ್ದಾರೆ.
ಹೌದು. ಈ ಸತ್ಯವನ್ನು ಈಗ ‘ಏಕ್ ಪಹೇಲಿ ಲೀಲಾ’ ಚಿತ್ರದ ನಿರ್ದೇಶಕ ಬಾಬಿ ಖಾನ್ ಬಿಚ್ಚಿಟ್ಟಿದ್ದು , ಹಲವಾರು ನಿರ್ಮಾಪಕರು ಕಥೆ ಹಿಡಿದು ಪ್ರಖ್ಯಾತ ನಟರ ಮನೆ ಬಾಗಿಲಿಗೆ ಹೋದಾಗ ಖುಷಿಯಿಂದ ಒಪ್ಪಿಕೊಂಡಿದ್ದಾರಂತೆ. ಆದರೆ ಸನ್ನಿ ಲಿಯೋನ್ ನಾಯಕ ನಟಿ ಎಂದರೆ ಪಾತ್ರ ಮಾಡಲು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರಂತೆ.
ಇದಕ್ಕೆ ಕಾರಣವೆಂದರೆ ಸನ್ನಿ ನಟಿಸುವ ಸಮಯದಲ್ಲಿ ಸ್ವಲ್ಪವೂ ಹಿಂಜರಿಕೆ ಇಲ್ಲದೇ ಬಟ್ಟೆ ಬಿಚ್ಚಲು ಸಿದ್ದಳಾಗುತ್ತಾಳಂತೆ. ಅಷ್ಟೇ ಅಲ್ಲ, ಸ್ವಲ್ಪವೂ ಮುಜುಗರವಿಲ್ಲದೇ ನಟರ ಜತೆ ಬೆರೆಯುವುದು ಅವರಿಗೂ ಇರಿಸು ಮುರುಸಾಗುತ್ತಿದ್ದು ಇದೇ ಕಾರಣಕ್ಕೆ ಸನ್ನಿ ಜತೆಗೆ ನಟಿಸಲು ಬಾಲಿವುಡ್ ನಟರು ಹಿಂದೇಟು ಹಾಕುತ್ತಿದ್ದಾರಂತೆ.
ಏನೇ ಇರಲಿ, ಬಾಲಿವುಡ್ ಮಂದಿ ಮಾತ್ರವಲ್ಲ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸನ್ನಿ ಬಗೆಗೆ ಭಯವಿರುವುದೂ ಸಹ ಅಚ್ಚರಿ ಎನಿಸದಿರದು.