Entertainment

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಪ್ರಸ್ತುತ ಪಡಿಸುವ “ದುಬೈ ಯಕ್ಷೋತ್ಸವ 2024” ಅಂಗವಾಗಿ ನಡೆಯಲಿರುವ “ದಾಶರಥಿ ದರ್ಶನ” ಯಕ್ಷಗಾನ ಪ್ರಸಂಗದ ಪ್ರವೇಶ ಪತ್ರ- ಆಮಂತ್ರಣ ಪತ್ರಿಕೆ ಬಿಡುಗಡೆ

Pinterest LinkedIn Tumblr

ದುಬೈ: 09-06-2024 ರಂದು ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ (ಇಂಡಿಯನ್ ಸ್ಕೂಲ್ ಕರಾಮ – ಊದ್ ದ ಮೆಹತಾ) ದಲ್ಲಿ ನಡೆಯಲಿರುವ ಬಹು ನಿರೀಕ್ಷಿತ ದುಬೈ ಯಕ್ಷೋತ್ಸವ 2024ರ ಅಂಗವಾಗಿ ನಡೆಯಲಿರುವ ಅದ್ದೂರಿಯ ಯಕ್ಷಗಾನ ಕಾರ್ಯಕ್ರಮ ದಾಶರಥಿ ದರ್ಶನ ಇದರ ಆಮಂತ್ರಣ ಪತ್ರ ಮತ್ತು ಪ್ರವೇಶಪತ್ರದ ಬಿಡುಗಡೆ ಸಮಾರಂಭ ಇತ್ತೀಚೆಗೆ ಹೋಟೇಲ್ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ, ಇದೇ ಕಳೆದ ಏಪ್ರಿಲ್ 21, 2024ರಂದು ನಡೆಯಿತು.

ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಯಕ್ಷ್ಗಗಾನ ಅಭ್ಯಾಸ ಕೇಂದ್ರ ನಡೆದು ಬಂದ ದಾರಿ, ಉದ್ದೇಶ, ಸಾಫಲ್ಯ ಕುರಿತು ಮಾತನಾಡಿ, ಪ್ರಸ್ತುತ ವರ್ಷದ ಅದ್ದೂರಿಯ ಯಕ್ಷಗಾನ ದಾಶರಥಿ ದರ್ಶನ ದ ಯಶಸ್ಸಿಗೆ ಸರ್ವರ ಸಹಕಾರವನ್ನು ಬಯಸಿದರು.

ಯಕ್ಷಧ್ರುವ ಪಟ್ಲ ಘಟಕದ ಸ್ಥಾಪಕರಾದ ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟಿಯವರ ಗಾನ ಸಾರಥ್ಯದಲ್ಲಿ ನಡೆಯಲಿರುವ ದಾಶರಥಿ ದರ್ಶನ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅತಿಥಿ ಕಲಾವಿದರಾದ, ಗಾನ ಪ್ರತಿಭೆ ಶ್ರೀಮತಿ ಭವ್ಯ ಹರೀಶ ಕುಲ್ಕುಂದ, ಚೆಂಡೆ-ಮದ್ದಳೆ ವಾದಕರಾದ ಸವಿನಯ ನೆಲ್ಲಿತೀರ್ಥ, ಮಯೂರ ನಾಯ್ಗ, ಹಾಗೂ ವರ್ಣವಸ್ತ್ರಾಲಂಕಾರ ತಜ್ಞರಾದ ಶ್ರೀಯುತ ಗಂಗಾಧರ ಡಿ. ಶೆಟ್ಟಿಗಾರ್, ಕಿನ್ನಿಗೋಳಿ, ನಿತಿನ್ ಕುಂಪಲ ಮತ್ತು ಮನೋಜ್ ಶೆಟ್ಟಿಗಾರ್ ಹಳೆಯಂಗಡಿಯವರ ವಿವರಗಳನ್ನು ಸಭೆಗೆ ನೀಡಿದರು.

ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಗುರುಗಳೂ ಪ್ರಸಂಗ ನಿರ್ದೇಶಕರೂ ಆದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು, ದಾಶರಥಿ ದರ್ಶನದ ಕಥಾಹಂದರ- ಪ್ರದರ್ಶನ ವಿಶೇಷತೆಗಳ ಜೊತೆಗೆ ಪ್ರಸಂಗಗಳಿಗೆ ಆಯ್ದುಕೊಳ್ಳುವ ಮೂಲ ಪ್ರಸಂಗ, ಮತ್ತು ಕವಿಗಳಾದ ಪಾರ್ತಿಸುಬ್ಬ, ಜತ್ತಿ ಈಶ್ವರ ಭಟ್, ಕಾಸರಗೋಡು ಸುಬ್ರಾಯ ಪಂಡಿತ, ಹೊಸ್ತೋಟ ಮಂಜುನಾಥ ಭಾಗವತ, ಬೊಟ್ಟಿಕೆರೆ ಪುರುಷೋತ್ವಮ ಪೂಂಜ, ಮೊದಲಾದವರ ಕವಿ-ಕೃತಿ ಪರಿಚಯವನ್ನು ಸಭೆಯ ಮುಂಡಿಟ್ಟರು.

ಯಕ್ಷಗಾನ ಅಭ್ಯಾಸ ಕೇಂದ್ರದ ಸದಸ್ಯರಾದ ರಾಜೇಶ್ ಕುತ್ತಾರರು ಅತಿಥಿ ಅಭ್ಯಾಗತರನ್ನು ಸ್ವಾಗತಿಸುವ ಜೊತೆ, ಕಾರ್ಯಕ್ರಮ ನಿರ್ವಹಿಸಿದರೆ, ಗಿರೀಶ್ ನಾರಾಯಣರು ಧನ್ಯವಾದ ಸಮರ್ಪಣೆ ಮಾಡಿದರು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು ಯಕ್ಷೋತ್ಸವದ ಆಮಂತ್ರಣ ಪತ್ರ ಮತ್ತು ಪ್ರವೇಶ ಬಿಡುಗಡೆಗೊಳಿಸಿದ ಯುಎಇ., ಉದ್ಯಮಿಗಳೂ – ಕಲಾಪೋಷಕರೂ ಆದ ಸುಧಾಕರ ರಾವ್ ಪೇಜಾವರ, ಹರೀಶ ಬಂಗೇರ, ದಿವಾಕರ ಶೆಟ್ಟಿ, ಸಂದೀಪ್ ರೈ ನಂಜೆ, ಬಾಲಕೃಷ್ಣ ಸಾಲಿಯಾನ್, ಮನೋಹರ ಹೆಗ್ಡೆ, ರಮಾನಂದ ಶೆಟ್ಟಿ, ರಘರಾಮ ಶೆಟ್ಟಿಗಾರ್, ವಾಸು ಶೆಟ್ಟಿ, ಪ್ರಭಾಕರ ಸುವರ್ಣ, ಜಯಾನಂದ ಪಕ್ಕಳ, ಮೊದಲಾದವರು, ಕೇಂದ್ರದ ವತಿಯ ಗೌರವಾರ್ಪಣೆ ಸ್ವೀಕರಿಸಿ ಇದೇ ಬರುವ ಜೂನ್ 9, 2024 ರಂದು ಶೇಖ್ ರಶೀದ್ ಅಡಿಟೋರಿಯಂನಲ್ಲಿ ಜರಗಲಿರುವ ದುಬಾಯಿ ಯಕ್ಷೋತ್ಸವ 2024 ಕ್ಕೆ ಶುಭಕೋರಿ ಕಾರ್ಯಕ್ರಮಕ್ಕೆ ತಮ್ಮ ಸರ್ವ ಬೆಂಬಲ‌ ವ್ಯಕ್ತಪಡಿಸಿದರು. ಕೇಂದ್ರದ ಹಿರಿಯ ಕಲಾವಿದರಾದ ವೆಂಕಟೇಶ ಶಾಸ್ತ್ರಿ ಪುತ್ತಿಗೆ,ಮತ್ತು ಹಿರಿಯ ಸದಸ್ಯ ಜಯಾನಂದ ಪಕ್ಕಳ, ವೇದಿಕೆಯಲ್ಲಿ ಅತಿಥಿಗಳೊಂದಿಗೆ ಉಪಸ್ಥಿತರಿದ್ದು ಕಾರ್ಯಕ್ರಮ- ಪ್ರಸಂಗಗಳ ಮುನ್ನೋಟದ ಮಾತುಗಳನ್ನಾಡಿದರು.

ಅಭ್ಯಾಸ ಕೇಂದ್ರದ ಹಿತೈಷಿಗಳಾದ ಸರ್ವಮಾನ್ಯ ವಿಶ್ವನಾಥ ಶೆಟ್ಟಿ, ವರದರಾಜ ಶೆಟ್ಟಿಗಾರ್, ಧನಂಜಯ ಶೆಟ್ಟಿಗಾರ್ ಕಿನ್ನಿಗೋಳಿ, ಮಾಧ್ಯಮ ಮಿತ್ರರಾದ ಶರತ್ ಸರಳಾಯ,ನಾಗೇಶ್ ಸರಳಾಯ, V4 ನ್ಯೂಸ್ ನ ರಮೇಶ್ ಮತ್ತು ಪ್ರಶಾಂತ್ ನಾಯರ್ ಅಲ್ಲದೆ ಮೇ 5ರಂದು ದುಬಾಯಿಯಲ್ಲಿ ಬಿಡುಗಡೆ ಕಾಣಲಿರುವ, ತುಳು ಚಲನಚಿತ್ರ ತುಡರ್ ತಂಡದ ನಿರ್ದೇಶಕ ಮೋಹನ್ , ನಾಯಕ ನಟ ಸಿದ್ದಾರ್ಥ್ ಶೆಟ್ಟಿ ಹಾಗೂ ಗೌತಮ್ ಬಂಗೇರ ಮೊದಲಾದವರ ಉಪಸ್ಥಿತಿಯನ್ನು ಕೇಂದ್ರದ ವತಿಯಿಂದ ಗೌರವಿಸಲಾಯಿತು.

ಕೇಂದ್ರದ ವಿದ್ಯಾರ್ಥಿಗಳು, ಮಕ್ಕಳ ಹೆತ್ತವರು, ಕಾರ್ಯಕರ್ತರು, ಕಲಾಪ್ರೇಮಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದರು.

Comments are closed.