Entertainment

ಬಾಲಿವುಡ್‌ನ ‘ಡಾಕ್ಟರ್ ಜೀ’ ಚಿತ್ರದಲ್ಲಿ ಕರಾವಳಿ ಮೂಲದ ಬಹುಮುಖ ಪ್ರತಿಭೆ ‘ಅಯ್ಯೋ ಶೃದ್ಧಾ’..!

Pinterest LinkedIn Tumblr

ಮಂಗಳೂರು: ಬಹುಮುಖ ಪ್ರತಿಭೆ ಶ್ರದ್ಧಾ, ಸೋಷಿಯಲ್ ಮೀಡಿಯಾದಲ್ಲಿ ಪಟ ಪಟ ಮಾತಿನ ಮೂಲಕ `ಅಯ್ಯೋ ಶ್ರದ್ಧಾ’ ಎಂದು ಬಹಳಷ್ಟು ಖ್ಯಾತಿಯಾಗಿದ್ದಾರೆ.

ಮಂಗಳೂರು ಮೂಲದ ಶ್ರದ್ಧಾ ಅವರ ಪ್ರತಿಭೆ ಇದೀಗ ಬಿಟೌನ್‌ವೆರೆಗೂ ಮುಟ್ಟಿದೆ. ಬಾಲಿವುಡ್‌ನ ಸ್ಟಾರ್‌ ನಟನ ಜೊತೆ ಕನ್ನಡತಿ ಶ್ರದ್ಧಾಗೆ ನಟಿಸಲು ಅವಕಾಶ ಸಿಕ್ಕಿದ್ದು ಅವರು ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಸಮಾಜದಲ್ಲಿ ನಿತ್ಯ ನಡೆಯುವ ಹಾಗೂ ನೋಡುವ ವಿಚಾರವನ್ನೇ ಜನರ ಕಣ್ಣಿಗೆ ಕಟ್ಟುವಂತೆ ವಿಡಿಯೋ ಮೂಲಕ ತೋರಿಸುವ ಪ್ರಯತ್ನ‌ಮಾಡಿದ ಶ್ರದ್ಧಾ ಅವರ ಯಶಸ್ವಿ ಪ್ರತಿಭೆಗೆ ಕನ್ನಡಿಗರು ಮಾತ್ರವಲ್ಲ, ಹೊರ ರಾಜ್ಯದ ಮಂದಿಯೂ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಶ್ರದ್ಧಾ ಬಿಟೌನ್‌ನಲ್ಲಿ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ.

ಬಾಲಿವುಡ್ ನಟ ಆಯುಷ್ಮಾನ್ ಖುರಾನ ಜೊತೆ `ಡಾಕ್ಟರ್ ಜಿ’ ಸಿನಿಮಾದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಈ ವಿಚಾರವನ್ನ ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ್ದಾರೆ. ಆಯುಷ್ಮಾನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಜತೆ ಶ್ರದ್ಧಾ ಕೂಡ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾಕ್ಟರ್ ಪಾತ್ರಕ್ಕೆ ಕನ್ನಡದ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

ಅನುಭೂತಿ ನಿರ್ದೇಶನದ ʻಡಾಕ್ಟರ್‌ ಜಿʼ ಚಿತ್ರದಲ್ಲಿ ಕನ್ನಡದ ನಟಿರೊಬ್ಬರು ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿರೋದು ಅಯ್ಯೋ ಶ್ರದ್ಧಾ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

Comments are closed.