ಮನೋರಂಜನೆ

‘ಕೆಜಿಎಫ್ ಭಾಗ 2 ‘ನಲ್ಲಿ ಖಳನಾಯಕನ ಪಾತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟ !

Pinterest LinkedIn Tumblr

ಕೆಜಿಎಫ್ ಚಾಪ್ಟರ್ 1ರಲ್ಲಿ ಮಾಡಲ್ಲ ಅಂತ ಹೇಳಿದ್ದ ಬಾಲಿವುಡ್‌ನ ಖ್ಯಾತ ನಟ ಇದೀಗ ಕೆಜಿಎಫ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಇದೀಗ ಎಚ್ಚೇತ್ತು ಕೆಜಿಎಫ್ ಚಾಪ್ಟರ್ 2ನಲ್ಲಿ ಅಭಿನಯಿಸುವುದಾಗಿ ಒಪ್ಪಿಕೊಂಡಿದ್ದಾರಂತೆ.

ಹೌದು ಕನ್ನಡ ಕೆಜಿಎಫ್ ಚಿತ್ರ 2018ರ ಡಿಸೆಂಬರ್ 21ರಂದು ಬಿಡುಗಡೆಯಾಗಿದ್ದು ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ 250 ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿತ್ತು.

ಬಾಲಿವುಡ್ ಮುನ್ನಾ ಭಾಯ್ ಸಂಜಯ್ ದತ್ ಇದೀಗ ಕೆಜಿಎಫ್ 2 ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಪುರುಷ ಕಲಾವಿದರು 90ರ ದಶಕಕ್ಕನುಗುಣವಾಗಿ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಜಯ್ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಹಾಗಾಗಿ ಚಿತ್ರದ ಪಾತ್ರಕ್ಕಾಗಿ ಅಣಿಯಾಗುತ್ತಿದ್ದಾರೆ ಎಂದು ಅವರ ಫೋಟೋಗಳು ಹೇಳುತ್ತಿವೆ.

Comments are closed.