ಕರ್ನಾಟಕ

ಆಪರೇಷನ್ ಕಮಲ ಕುರಿತು ಆಡಿಯೋದಲ್ಲಿರುವ ಧ್ವನಿ ನನ್ನದೇ: ಯಡಿಯೂರಪ್ಪ

Pinterest LinkedIn Tumblr

ಹುಬ್ಬಳ್ಳಿ: ಆಪರೇಷನ್ ಕಮಲ ಕುರಿತು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವಂತೆ ಆ ಆಡಿಯೋದಲ್ಲಿನ ಧ್ವನಿ ನನ್ನದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ತಪ್ಪೊಪ್ಪಿಕೊಂಡಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಜೊತೆಗೆ ಮಾತನಾಡಿದ್ದು ನಿಜ ಎಂದು ಹೇಳಿದರು.

ಆದಾಗ್ಯೂ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನನ್ನ ಬಳಿ ಶರಣಗೌಡ ಅವರನ್ನು ಕಳುಹಿಸಿಕೊಟ್ಟಿದ್ದು, ಕುತಂತ್ರ ರಾಜಕೀಯ ನಡೆಸಿದ್ದಾರೆ. ಕುಮಾರಸ್ವಾಮಿ ಥರ್ಥ್ ಗ್ರೇಡ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಆಡಿಯೋದಲ್ಲಿ ನಾನು ಮಾತನಾಡಿದ ವಿಚಾರಗಳು ಬೇರೆಯೇ ಇದೆ. ಆದರೆ, ಕುಮಾರಸ್ವಾಮಿ ಅವರಿಗೆ ಬೇಕಾಗಿರುವುದನ್ನು ಮಾತ್ರ ಬಳಸಿಕೊಂಡು ಸತ್ಯವನ್ನು ಮರೆ ಮಾಚಲಾಗಿದೆ. ಆಡಿಯೋದಲ್ಲಿನ ಮುಂದುವರೆದ ಭಾಗವನ್ನು ಸದನದಲ್ಲಿ ನಾಳೆ ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.

ಇದೇ ವೇಳೆ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ, ನಮ್ಮದು ಸೂಟ್ ಕೇಸ್ ಸಂಸ್ಕೃತಿ ಪಕ್ಷ, ಸೂಟ್ ಕೇಸ್ ಇಲ್ಲದೆ ಏನು ಕೆಲಸ ನಡೆಯುವುದಿಲ್ಲ ಎಂದು ಹೇಳಿರುವ ವಿಡಿಯೋ ನನ್ನ ಬಳಿ ಇದೆ ಅದನ್ನು ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದರು.

Comments are closed.