ಕರ್ನಾಟಕ

‘ಯೋ ಬರ್ಕಯ್ಯ.. ಪೇಪರ್ ಮುಂದಾಗಡೆ ಬರ್ಕೊ, ಇವತ್ತು ಗೆಲ್ಲೋದು ನಮ್ RCB ಹುಡುಗರೇ: ಮ್ಯಾಚ್‌ಗೂ ಮೊದಲು ಶಿವಣ್ಣ FB ಪೋಸ್ಟ್..!

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024)ನ 17ನೇ ಸೀಸನ್ ಹೈವೋಲ್ಟೇಜ್‌ ಪಂದ್ಯದಲ್ಲಿ ಆರ್​ಸಿಬಿ v/s ಸಿಎಸ್​ಕೆ ಬಿಗ್ ಫೈಟ್ ನೋಡಲು ಕ್ರೀಡಾಂಗಣಕ್ಕೆ ಗಣ್ಯರ ದಂಡೇ ಹರಿದು ಬಂದಿತ್ತು.

ಆರ್.ಸಿ.ಬಿ ತಂಡಕ್ಕೆ ಬೆಂಬಲ‌ನೀಡುವ ಸಲುವಾಗಿ ಕ್ರೀಡಾಂಗಣಕ್ಕೆ ಜೆರ್ಸಿ ತೊಟ್ಟು ಆಗಮಿಸಿದ ನಟ ಡಾ. ಶಿವರಾಜಕುಮಾರ್ ಅವರು ಪದ್ಯಾಂಟ ವೀಕ್ಷಿಸಿದರು. ಇದೇ ಸಮಯ ಸಿಎಂ ಸಿದ್ದರಾಮಯ್ಯ ಮ್ಯಾಚ್ ವೀಕ್ಷಿಸುತ್ತಿದ್ದ ಸ್ಥಳಕ್ಕೆ ಆಗಮಿಸಿ ಶೇಕ್ ಹ್ಯಾಂಡ್ ಮಾಡಿದರು.

ಇನ್ನು‌ ಮ್ಯಾಚ್ ಆರಂಭಕ್ಕೂ ಮೊದಲು ಅಂದಾಜು 7 ಗಂಟೆ ಸುಮಾರಿಗೆ ತಮ್ಮ ಅಧೀಕೃತ ಫೇಸ್‌ಬುಕ್‌ ಖಾತೆಯಲ್ಲಿ ‘ಯೋ ಬರ್ಕಯ್ಯ.. ಪೇಪರ್ ಮುಂದಾಗಡೆ ಬರ್ಕೊ, ಇವತ್ತು ಗೆಲ್ಲೋದು ನಮ್ @royalchallengers.bengaluru ಹುಡುಗರೇ.. #PlayBold #RCBvsCSK’ ಎಂದು ಬರೆದುಕೊಂಡಿದ್ದಾರೆ.

Comments are closed.