UAE

ಯುಎಇಯ ಗಮ್ಮತ್ ಕಲಾವಿದೆರ್ ಅಧ್ಯಕ್ಷರಾಗಿ ಲವೀನ ಫೆರ್ನಾಂಡಿಸ್ ಆಯ್ಕೆ

Pinterest LinkedIn Tumblr

ದುಬೈ: ಗಮ್ಮತ್ ಕಲಾವಿದೆರ್ ಯುಎಇ ಇದರ 2024-2025ರ ವಾರ್ಷಿಕ ಮಹಾಸಬೆ ಹಾಗೂ ಹೊಸ ಕಾರ್ಯಕಾರಿ ಸಮಿತಿಯ ಆಯ್ಕೆ ಜೂನ್ 23ರ ರವಿವಾರದಂದು ದುಬಾಯಿಯ ಬಿ ಟೌನ್ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ ಮಹಾ ಪೋಷಕರು ಹರೀಶ್ ಬಂಗೇರ, ನಿರ್ದೇಶಕರಾದ ವಿಶ್ವನಾಥ್ ಶೆಟ್ಟಿ,ಅಧ್ಯಕ್ಷರಾದ ರಾಜೇಶ್ ಕುತ್ತಾರ್ , ಕಾರ್ಯದರ್ಶಿ ಗಿರೀಶ್ ನಾರಾಯಣ್ ಮತ್ತು ಕೋಶಾಧಿಕಾರಿ ಆಶಾ ಕೋರಿಯಾ ಮತ್ತು ಎಲ್ಲಾ ಸದಸ್ಯರ ಉಪಸ್ತಿತಿಯಲ್ಲಿ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.

ಪ್ರಸ್ತುತ ಅದ್ಯಕ್ಷರು, ಸಭೆಗೆ ಹಾಜರಿದ್ದ ಎಲ್ಲಾ ಸದಸ್ಯರಿಗೆ ಸ್ವಾಗತ ಕೋರುತ್ತಾ ತಮ್ಮ ಆಡಳಿತ ಅವಧಿಯ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ತಮ್ಮ ಅವಧಿಯಲ್ಲಿ ಸಮಿತಿಯನ್ನು ಬೆಂಬಲಿಸಿ ಸಹಕರಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು. ಇದೇ ಸಮಯದಲ್ಲಿ ಮಹಾ ಪೋಷಕರು ಸಂಘವು ಹಿಂದೆ ನಡೆದು ಬಂದ ದಾರಿ ಹಾಗೆಯೇ ಇನ್ನು ಮುಂದಿನ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಹಿಂದಿನ ಕಾರ್ಯಕಾರಿ ಸಮಿತಿಯನ್ನು ಬರ್ಕಾಸ್ತು ಮಾಡಿ, ನೂತನ ಸಮಿತಿಯನ್ನು ರಚಿಸಲಾಯಿತು.

ಸರ್ವ ಸದಸ್ಯರ ಸಮ್ಮುಖದಲ್ಲಿ 2024-2025 ನೇ ಅವಧಿಯ ಹೊಸ ಕಾರ್ಯಕಾರಿ ಸಮಿತಿಯನ್ನು ಸರ್ವ ಸದಸ್ಯರ ಸಮ್ಮತಿಯೊಂದಿಗೆ ಆಯ್ಕೆ ಮಾಡಲಾತಿಯು . ಶ್ರೀಮತಿ ಲವೀನಾ ಫೆರ್ನಾಂಡಿಸ್ ಪಾಂಗಳ, ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು . ಕಾರ್ಯದರ್ಶಿಯಾಗಿ ದೀಪ್ತಿ ದೀನರಾಜ್ ಮತ್ತು ಕೋಶಾಧಿಕಾರಿಯಾಗಿ ಜೇಶ್ ಬಾಯಾರ್ ಆಯ್ಕೆಯಾದರು.

ನೂತನ ಅಧ್ಯಕ್ಷರಾದ ಲವೀನ ಫೆರ್ನಾಂಡಿಸ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ, ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಹಾಗೂ ಸಲಹಾ ಸಮಿತಿಯ ಸಹಕಾರ ಕೋರಿದರು. ನಂತರ ಮಾತನಾಡಿದ ಕಾರ್ಯದರ್ಶಿ ಶ್ರೀಮತಿ ದೀಪ್ತಿ ದೀನರಾಜ್ ಮತ್ತು ಕೋಶಾಧಿಕಾರಿ ಜೇಶ್ ಬಾಯಾರ್ ಅವರು ಎಲ್ಲಾ ಸದಸ್ಯರಿಗೂ ಧನ್ಯವಾದ ಸಮರ್ಪಿಸಿದರು‌

ಮಹಾಪೋಷಕರಾದ ಹರೀಶ್ ಬಂಗೇರ , ತಂಡದ ನಿರ್ದೇಶಕ ವಿಶ್ವನಾಥ್ ಶೆಟ್ಟಿ ,ಪೂರ್ವ ಅಧ್ಯಕ್ಷರುಗಳಾದ ವಾಸು ಶೆಟ್ಟಿ, ಸುವರ್ಣಾ ಸತೀಶ್, ರಾಜೇಶ್ ಕುತ್ತಾರ್ ಒಳಗೊಂಡ ಸಲಹಾ ಸಮಿತಿಯು, ಹೊಸದಾಗಿ ನೇಮಕಗೊಂಡ ಸಮಿತಿಗೆ ತಮ್ಮ ಎಲ್ಲಾ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು‌

ಸರ್ವ ಸದಸ್ಯರು ಆಯ್ಕೆಯಾದ ಹೊಸ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಶುಭಾಶಯ ಕೋರಿದರು. ಕಾರ್ಯದರ್ಶಿ ಶ್ರೀ ದೀಪ್ತಿ ದೀನರಾಜ್ ಅವರು ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು.

Comments are closed.