ಮನೋರಂಜನೆ

ತನ್ನಂತೆ ಹೋಲುವ ಐವರ ಹುಡುಕಾಟದಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ

Pinterest LinkedIn Tumblr


ಮುಂಬೈ: ತಮ್ಮಂತೆ ಹೋಲುವ ವಿದೇಶಿ ಗಾಯಕಿಯ ಫೋಟೋವನ್ನು ರೀಟ್ವೀಟ್ ಮಾಡಿಕೊಂಡು ನಟಿ ಅನುಷ್ಕಾ ಶರ್ಮಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜಗತ್ತಿನಲ್ಲಿ ಒಬ್ಬರಂತೆ ಹೋಲುವ ಏಳು ಜನರು ಇರುತ್ತಾರೆಂದು ಹೇಳುವುದುಂಟು. ಬಾಲಿವುಡ್ ಚೆಲುವೆ ಅನುಷ್ಕಾರನ್ನು ಹೋಲುವ ಗಾಯಕಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅನುಷ್ಕಾ, ಇನ್ನುಳಿದ ಐವರನ್ನು ಹುಡುಕುತ್ತೇನೆಂದು ಹೇಳಿದ್ದಾರೆ.

ಇತ್ತೀಚೆಗಷ್ಟೆ ಅಮೆರಿಕಾದ ಗಾಯಕಿ ಜೂಲಿಯಾ ಮೈಕಲ್ಸ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದರು. ಈ ಫೋಟೋದಲ್ಲಿ ಅನುಷ್ಕಾ ಶರ್ಮಾ ಅವರಂತೆ ಕಾಣಿಸುತ್ತಾರೆ. ಆದರಿಂದ ಈ ಪೋಸ್ಟ್ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಅನುಷ್ಕಾ ಶರ್ಮಾ ಜೂಲಿಯಾ ಮೈಕಲ್ಸ್ ಪೋಸ್ಟ್ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಜೂಲಿಯಾ ಮೈಕಲ್ಸ್ ಅವರು ವೈರಲ್ ಆಗಿರುವ ತಮ್ಮ ಪೋಸ್ಟ್‍ಗೆ ಅನುಷ್ಕಾ ಶರ್ಮಾ ಅವರನ್ನು ಟ್ಯಾಗ್ ಮಾಡಿ ನಾವಿಬ್ಬರು ಅವಳಿ ಜವಳಿಯಂತೆ ಕಾಣುತ್ತೇವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ಅನುಷ್ಕಾ ಶರ್ಮಾ ಅವರು ರೀ-ಟ್ವಿಟ್ ಮಾಡಿ ಆಶ್ಚರ್ಯ ಸೂಚಿಸಿದ್ದಾರೆ. ಹೌದು ನಾವಿಬ್ಬರು ಒಂದೇ ರೀತಿ ಕಾಣಿಸುತ್ತೇವೆ. ನಮ್ಮ ಹಾಗೆ ಇರುವ ಉಳಿದು ಐವರಿಗಾಗಿ ನಾನು ಹುಡುಕಾಟ ನಡೆಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ ನೋಡಿದ ಅಭಿಮಾನಿಗಳು ವಿದೇಶಿ ಗಾಯಕಿಯನ್ನು ಅನುಷ್ಕಾ ಶರ್ಮಾ ಅವರ ವಿದೇಶಿ ಅವತಾರ ಅಂತಾನೂ ಟ್ರೋಲ್ ಮಾಡಿದ್ದರು. ಕೆಲವರು ಅನುಷ್ಕಾ ಶರ್ಮಾ ತಮ್ಮ ಅವಳಿ ಸಹೋದರಿ ವಿದೇಶದಲ್ಲಿ ಇದ್ದಾರಾ ಅಂದರೆ, ಇನ್ನೂ ಕೆಲವರು ಅನುಷ್ಕಾ ಶರ್ಮಾ ಡೂಪ್ಲಿಕೇಟ್ ಕಾಪಿ ಎಂದು ಟ್ರೋಲ್ ಮಾಡಿದ್ದರು. ಅಷ್ಟೇ ಅಲ್ಲದೆ ಅನುಷ್ಕಾ ಅತ್ತಿಗೆ ಯಾವಾಗ ಹೆಸರು ಬದಲಾಯಿಸಿಕೊಂಡರು ಅಂತ ಅಭಿಮಾನಿಗಳು ವಿರಾಟ್ ಕೊಹ್ಲಿ ಕಾಲೆಳೆದಿದ್ದರು.

Comments are closed.