ಮನೋರಂಜನೆ

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ 30ನೇ ಸ್ಥಾನ ಪಡೆದ ವಿಜಯ್ ದೇವರಕೊಂಡ!

Pinterest LinkedIn Tumblr


ಮುಂಬೈ: ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಎಲ್ಲೆಡೆ ಜನಪ್ರಿಯತೆ ಪಡೆದ ಯುವ ಟಾಲಿವುಡ್ ನಟ ವಿಜಯ್ ದೇವರಕೊಂಡ 2019ನೇ ಸಾಲಿನ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ 30ನೇ ಸ್ಥಾನ ಪಡೆದ ಸಂಭ್ರಮದಲ್ಲಿದ್ದಾರೆ.

ಟಾಲಿವುಡ್ ಮಾತ್ರವಲ್ಲದೆ ಎಲ್ಲಾ ಸಿನಿಪ್ರಿಯರ ಮನ ಗೆದ್ದ ಚಿತ್ರ ಅರ್ಜುನ್ ರೆಡ್ಡಿ ಮೂಲಕ ವಿಜಯ್ ದೇವರಕೊಂಡ ಎಲ್ಲಡೆ ಹವಾ ಸೃಷ್ಟಿಸಿದ್ದರು. ಅಲ್ಲದೆ ಕಳೆದ ವರ್ಷ ತೆರೆಕಂಡ ಗೀತಾ ಗೋವಿಂದಂ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿ ಇರುವಾಗಲೇ ವಿಜಯ್‍ಗೆ ಮತ್ತೊಂದು ಅದೃಷ್ಟ ಸಾಧನೆ ಬಾಗಿಲನ್ನು ತಟ್ಟಿದ್ದಾರೆ. ಯುವ ಸಾಧಕರ ಫೋರ್ಬ್ಸ್ ಪಟ್ಟಿಯಲ್ಲಿ 30ನೇ ಸ್ಥಾನ ಗಿಟ್ಟಿಸಿಕೊಂಡ ವಿಜಯ್ ತಮ್ಮ ಸಂಭ್ರಮದ ಕುರಿತು ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ನಾನು 25 ವರ್ಷದವನಿದ್ದಾಗ ನನ್ನ ಬಳಿ ಇದ್ದ ಆಂಧ್ರ ಬ್ಯಾಂಕ್ ಅಕೌಂಟ್‍ನಲ್ಲಿ 500 ರೂ. ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದೆ. ಆಗ ನನ್ನ ತಂದೆ 30 ವರ್ಷದೊಳಗೆ ಜೀವನದಲ್ಲಿ ಒಂದು ನೆಲೆ ಕಾಣವಂತಹ ಕೆಲಸ ಮಾಡು ಎಂದು ಹೇಳಿದ್ದರು. ಹಾಗಾಗಿ ನಿಮ್ಮ ತಂದೆ ತಾಯಿ ಆರೋಗ್ಯದಿಂದ ಇರುವಾಗಲೇ ಸಾಧನೆಯೊಂದಿಗೆ ಯೌವನವನ್ನು ಎಂಜಾಯ್ ಮಾಡಿ.

ನಾಲ್ಕು ವರ್ಷಗಳ ನಂತರ ಫೋರ್ಬ್ಸ್ ನ 100 ಜನ ಸೆಲೆಬ್ರಿಟಿಗಳ ಪಟ್ಟಿಯಲ್ಲಿ, 30 ವರ್ಷದೊಳಗಿನ ಸಾಧಕರಲ್ಲಿ 30ನೇ ಸ್ಥಾನ ದೊರಕಿದೆ ಎಂದು ತಂದೆ ಮಾತನ್ನು ನೆನಸಿಕೊಂಡು ಟ್ವೀಟ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿರುವ ಸಾಧಕರು ಯಾರು?
ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ, ಅಥ್ಲೀಟ್ ಹಿಮಾ ದಾಸ್, ಅಭಿನಯ್ ಭಸಿನ್, ಅಸುತೋಷ್ ವಿಕ್ರಮ್, ಕಾರ್ತೀಶ್ವರನ್ ಕೆ ಕೆ, ದಿಪ್ತೇಜ್ ವರ್ನೇಕರ್, ಕೇಶವ್ ಪ್ರವಾಸಿ, ನಿತಿನ್ ಬಾಬೆಲ್, ಶಿಶಿರ್ ಮೋದಿ, ಪ್ರಣಯ್ ಸುರಾನಾ, ತುಶಾರ್ ಸಕ್ಸೇನಾ, ಅದಿತಿ ಅಗರ್ವಾಲ್, ಅಂಜಲಿ ಮೆನನ್, ನಿನಾದ್ ಕುಲಕರ್ಣಿ, ತನ್ವಿ ಜೋಹ್ರಿ, ಸಾಗರ್ ಯರ್ನಾಲ್ಕರ್, ಅನುರಾಗ್ ಗುಪ್ತಾ, ಪ್ರಜಕ್ತಾ ಕೊಲಿ, ಮೇಘನಾ ಮಿಶ್ರಾ, ಟೀನಾ ಸುತ್ರಾಧರ್, ನಿಕಿತಾ ಸುತ್ರಾಧರ್, ಕನಿಕಾ ಗೋಯಲ್, ವಸಂತ್ ಕಾಮತ್, ಅನುರಾಗ್ ಶ್ರೀವಾಸ್ತವ್, ರೋಷನ್ ಗುಪ್ತಾ, ನಿಖಿಲ್ ಬಹೇತಿ, ಆಯುಷ್ ಅಗರ್ವಾಲ್, ಕರ್ಯಾನ ಬಜಾಜ್, ನಿತೇಶ್ ಜಾಂಗೀರ್, ಪುಷ್ಕರ್ ಸಿಂಗ್, ಸುದರ್ಶನ್ ರವಿ, ಅಂಕಿತ್ ಪರಶೇರ್, ಅಂಕಿತ್ ಗರ್ಗ್, ರಿತು ಮಲ್ಹೋತ್ರಾ, ಪ್ರತೀಕ್ ಮಲ್ಹೋತ್ರಾ, ಮಂಜೀತ್ ಗೊಹಿಲ್, ಸಂಚಿತ್ ಗೋವಿಲ್, ಅಲ್ಬಿನ್ ಜೋಸೆ, ಡೇನಿಯಲ್ ರಾಜ್, ಹರಿಕೃಷ್ಣನ್ ಎ ಎಸ್, ಕಾರ್ತಿಕ್ ಆರ್, ತರುಣ್ ಕುಮಾರ್ ಮಿಶ್ರಾ, ನೀರಜ್ ಚೋಪ್ರಾ, ಅಭಿಷೇಕ್ ಬನ್ಸಾಲ್, ವೈಭವ್ ಖಂಡೇಲ್ವಾಲ, ಪ್ರಣವ್ ಗೋಯೆಲ್, ಉತ್ತಮ್ ದಿಗ್ಗಾ, ವಿಕಾಸ್ ಚೌಧರಿ ಮತ್ತಿತರರು ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Comments are closed.