ಕರ್ನಾಟಕ

ಅನಧಿಕೃತವಾಗಿ ಮಗು ಇಟ್ಟುಕೊಂಡಿದ್ದಕ್ಕೆ ಬಿಗ್‌ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ಬಂಧನ!

Pinterest LinkedIn Tumblr

ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪದ ಮೇಲೆ ಬಿಗ್ ಬಾಸ್‌ ಒಟಿಟಿ ಕನ್ನಡ ಸೀಸನ್ 1 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸಗೌಡ ಅವರನ್ನು ಬಂಧಿಸಿರುವ ಬ್ಯಾಡರಹಳ್ಳಿ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಮಗು ದತ್ತು ಪಡೆದಿರುವುದಾಗಿ ಸೋನು ಗೌಡ ಇತ್ತೀಚೆಗೆ ಹೇಳಿಕೊಂಡಿದ್ದರು. ಏಳು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಜೆ.ಜೆ.ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿಕೊಂಡು ಬಂಧಿಸಿದ್ದಾರೆ. ಜೆ.ಜೆ ಆಕ್ಟ್ 74 ಉಲ್ಲಂಘನೆ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನಾನು ಅವಳ ಅಮ್ಮನ ಬಳಿ ದತ್ತು ಕೊಡುವಂತೆ ಕೇಳಿದೆ. ಇದನ್ನು ಕೇಳಿ ಅವಳ ತಾಯಿ ರಾಯಚೂರಿಗೆ ಹೋದರು. ಮಗುವಿಗೆ ನಾನಿಲ್ಲದೆ ಜ್ವರ ಬಂದಿತ್ತು. ಫೋನ್ ಮೂಲಕ ಸೇವಂತಿ ಬಳಿ ಮಾತನಾಡಿದೆ. ನಂತರ ಅವಳನ್ನು ಕರೆದುಕೊಂಡು ಬಂದೆ. ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳಲು 3 ತಿಂಗಳು ಬೇಕು. ಅವಳ ಅಪ್ಪ ಅಮ್ಮನಿಗೆ ಒಪ್ಪಿಗೆ ಇದೆ. ನನಗೂ ಒಪ್ಪಿಗೆ ಇದೆ. ಕಾನೂನು ಕ್ರಮ ನಡೆಯುತ್ತಿದೆ ಎಂದು ಸೋನು ಹೇಳಿದ್ದರು.

ನಾನು ಅಪಾರ್ಟ್​ಮೆಂಟ್ ಕೆಳಗೆ ನಾಯಿಗೆ ಬಿಸ್ಕಿಟ್ ಹಾಕುವಾಗ ಇವಳು ಸಿಕ್ಕಿದ್ದಳು. ಅವಳಿಗೆ ಚಾಕೋಲೇಟ್ ಕೊಡಿಸಿದೆ. ನಂತರ ಶಾಪಿಂಗ್ ಹೋದೆವು. ಮನೆಗೆ ಕರೆದುಕೊಂಡು ಹೋಗಿ ಎಂದು ಕೇಳಿದಳು. ನಾನು ದತ್ತು ತೆಗೆದುಕೊಳ್ಳುವುದಕ್ಕೂ ಮೊದಲೇ ಅವಳಿಗೆ ಚೈನ್ ಕೊಡಿಸಿದ್ದೆ ಎಂದು ಸೋನು ಶ್ರೀನಿವಾಸ ಗೌಡ ಹೇಳಿಕೊಂಡಿದ್ದರು.

 

Comments are closed.