ಮನೋರಂಜನೆ

ಕೆಜಿಎಫ್ ಹವಾ….ಪಾಕ್‌ನಲ್ಲಿ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ ?

Pinterest LinkedIn Tumblr

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಯಾವ ಸಿನಿಮಾಗಳು ಮಾಡಿರದ ದಾಖಲೆಗಳನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಮಾಡಿದ್ದು ಇನ್ನು ಪಾಕಿಸ್ತಾನದಲ್ಲಿ ಬಿಡುಗಡೆಯಾದ ಕೆಜಿಎಫ್ ಚಿತ್ರ ಅಲ್ಲೂ ಧೂಳೆಬ್ಬಿಸುತ್ತಿದೆ.

ಪಾಕಿಸ್ತಾನದಲ್ಲಿ ಕೆಜಿಎಫ್ ಚಿತ್ರ ಬಿಡುಗಡೆಯಾಗುವ ಮೂಲಕ ಅಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ರಾಕಿ ಭಾಯ್ ಚಿತ್ರ ಪಾತ್ರವಾಗಿದ್ದು ಇನ್ನು ಬಿಡುಗಡೆಯಾದ ಮೊದಲ ದಿನವೇ 0.81 ಕೋಟಿ ರುಪಾಯಿ(81 ಲಕ್ಷ) ಗಳಿಸಿದೆ.

ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಬಿಡುಗಡೆಯಾಗುವುದಲ್ಲದೆ, ಮೊದಲ ದಿನವೇ ಇಷ್ಟು ದೊಡ್ಡ ಮೊತ್ತದ ಲಾಭ ಮಾಡಿದೆ ಎಂದರೆ ಕನ್ನಡಿಗರು ನಿಜಕ್ಕೂ ಹೆಮ್ಮೆ ಪಡಲೇಬೇಕಾದಂತ ವಿಷಯ. ಇನ್ನು ಯಶ್ ಅಭಿನಯಕ್ಕೆ ಪಾಕ್ ಅಭಿಮಾನಿಗಳು ಫಿದಾ ಆಗಿದ್ದು ಕೆಜಿಎಫ್ ಭಾಗ 2ಕ್ಕೆ ಕಾತುರದಿಂದ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಕಳೆದ ಡಿಸೆಂಬರ್ 21ರಂದು ಸಿನಿಮಾ ದೇಶಾದ್ಯಂತ ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಇನ್ನು ಕನ್ನಡ ಚಿತ್ರವೊಂದು 200 ಕೋಟಿ ರುಪಾಯಿ ಗಳಿಕೆ ಮಾಡಿದ ಹೆಗ್ಗಳಿಕೆಗೂ ಕೆಜಿಎಫ್ ಪಾತ್ರವಾಗಿದೆ.

Comments are closed.