ಮನೋರಂಜನೆ

ಇದು ನನ್ನ ದುನಿಯಾ: ಕೆಜಿಎಫ್ ಸಂಭ್ರಮದ ಫೋಟೋ ಹಂಚಿಕೊಂಡ್ರು ಯಶ್

Pinterest LinkedIn Tumblr


ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳು ಕಳೆದಿವೆ. ಮೂರನೇ ದಿನವೂ ರಾಕಿಯ ಆರ್ಭಟ ಮುಂದುವರಿದಿದ್ದು, ಚಿತ್ರತಂಡ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇದೀಗ ಸಂಭ್ರಮಾಚಾರಣೆ ವೇಳೆಯ ಫೋಟೋವನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೇ ನನ್ನ ದುನಿಯಾ ಎಂದು ಬರೆದುಕೊಂಡಿದ್ದಾರೆ.

ಫೋಟೋದಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಇಬ್ಬರು ಯಶ್ ಅವರ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಒಂದು ಸಿನಿಮಾ ರೂಪುಗೊಳ್ಳಬೇಕಾದರೆ ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದ ಎಂಬ ಮೂರು ಸ್ತಂಭಗಳ ಬುನಾದಿ ಮುಖ್ಯವಾಗಿರುತ್ತದೆ. ನಿರ್ದೇಶಕನ ಕಥೆಗೆ ನ್ಯಾಯ ನೀಡುವ ಕಲಾವಿದ ಹಾಗು ತೆರೆಯ ಮೇಲೆ ಸಿನಿಮಾ ಆಕರ್ಷಕವಾಗಿ ಕಾಣುವಂತೆ ಮಾಡಲು ಆರ್ಥಿಕ ಬಲ ನೀಡುವ ನಿರ್ಮಾಪಕ ಈ ಮೂವರು ಒಗ್ಗೂಡಿದಾಗ ಮಾತ್ರ ಒಂದು ಯಶ್ವಿಸಿ ಸಿನಿಮಾ ಹೊರ ಬರುತ್ತದೆ. ಯಶ್ ಅಪ್ಲೋಡ್ ಮಾಡಿಕೊಂಡಿರುವ ಫೋಟೋದಲ್ಲಿ ಈ ಮೂವರು ಇದ್ದಾರೆ.

ಸಿನಿಮಾ ಪ್ರಚಾರದ ಸಂದರ್ಭದ ಸಂದರ್ಶನಗಳಲ್ಲಿ ಯಶ್ ಎಲ್ಲಿಯೂ ನಾನು ಕಷ್ಟಪಟ್ಟು ಕೆಲಸ ಮಾಡಿದೆ ಅಂತಾ ಹೇಳಿಲ್ಲ. ಪ್ರತಿಯೊಂದು ಸಂದರ್ಶನದಲ್ಲಿಯೂ ಚಿತ್ರದ ಸಹ ಕಲಾವಿದರ ಸಹಕಾರ, ತಂತ್ರಜ್ಞರ ಕೈಚಳಕ, ಕಲ್ಪನೆಗೂ ಮೀರಿದ ಸೆಟ್‍ಗಳ ನಿರ್ಮಿಸಿದ ಕಲಾ ನಿರ್ದೇಶಕರ ತಂಡ, ಚಿತ್ರ ನೋಡುಗರನ್ನ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯದ ಸಂಗೀತ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ತಮನ್ನಾ ಮತ್ತು ಮೌನಿ ರಾಯ್, ವಿತರಕರು ಹೀಗೆ ಕೆಜಿಎಫ್ ಎಂಬ ಅದ್ಭುತ ಹೊರ ಬರಲು ನೆರವಾದ ಎಲ್ಲರ ಬಗ್ಗೆ ಯಶ್ ಹೇಳುತ್ತಾ ಬಂದಿದ್ದಾರೆ.

ಯಾವ ಒಂದು ಸಂದರ್ಶನದಲ್ಲಿ ಯಶ್ ತಮ್ಮ ಬಗ್ಗೆಯೇ ಹೇಳಿಕೊಂಡಿಲ್ಲ. ವಿಶೇಷ ಅಂದ್ರೆ ಚಿತ್ರಕ್ಕಾಗಿ ಯಶ್ ತಮ್ಮನ್ನ ತಾವೇ ಬದಲಿಸಿಕೊಂಡಿರೋದಂತು ಸತ್ಯ. ಸತತ ಎರಡು ವರ್ಷಗಳಿಂದ ಬಿಟ್ಟುಕೊಂಡಿರುವ ಉದ್ದನೆಯ ಗಡ್ಡ. ಯಾವಾಗ್ಲೋ ಕ್ಲೀನ್ ಶೇವ್ ಲವರ್ ಬಾಯ್ ಲುಕ್ ನಿಂದ ಹೊರ ಬಂದ ಯಶ್, ಕೆಜಿಎಫ್ ಗಾಗಿ ಹುರಿ ಹುರಿ ಮೈಕಟ್ಟು, ರಗಡ್ ಲುಕ್, ಬಿಡುವಿಲ್ಲದ ಚಿತ್ರೀಕರಣ ಹೀಗೆ ರಾಕಿಂಗ್ ಸ್ಟಾರ್ ಎರಡು ವರ್ಷಗಳನ್ನೇ ಚಿತ್ರಕ್ಕಾಗಿ ಮುಡಿಪು ಇಟ್ಟಿದ್ದು ಸತ್ಯ.

ಹೀಗಾಗಿಯೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಧನ್ಯವಾದವನ್ನು ರಾಕಿಯ ಕೆನ್ನೆಗೆ ಮುತ್ತಿಕ್ಕುವ ಮೂಲಕ ನಮ್ಮ ಸ್ನೇಹ ಹೀಗೆ ಇರಲಿ ಎಂದು ಹೇಳಿದ್ದಾರೆ.

Comments are closed.