ಕರ್ನಾಟಕ

ಲೋಕಸಭಾ ಚುನಾವಣೆ: ಬಿಜೆಪಿ ಸಂಪೂರ್ಣ ಜವಾಬ್ದಾರಿ ಯಡಿಯೂರಪ್ಪ ಹೆಗಲಿಗೆ, ಮಿಷನ್​​​ 20 ಪ್ಲಸ್​​​ ಯೋಜನೆ!

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇದೆ. ಈಗಾಗಲೇ ಮೋದಿ ವಿರೋಧಿ ಬಣ ಬಿಜೆಪಿಯನ್ನು ಸೆಡ್ಡು ಹೊಡೆಯಲು ತಯಾರಿ ನಡೆಸಿಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿಯಾಗಿ ಲೋಕಸಭೆ ಎದುರಿಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿಯೇ ರಾಜ್ಯದ ಬಿಎಸ್​​ವೈ ನೇತೃತ್ವದ ಬಿಜೆಪಿ ಪಡೆ ಲೋಕಸಭೆ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಈಗಿನಿಂದಲೇ ಭರ್ಜರಿ ಸಿದ್ದತೆ ನಡೆಸಿಕೊಳ್ಳುತ್ತಿದೆ ಎನ್ನಲಾಗಿದೆ.

ಈಗಾಗಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ, ಅದಕ್ಕಾಗಿ ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ರಾಜ್ಯದ ಪ್ರತಿ ಮನೆ ಮನೆಗೆ ಪ್ರಚಾರ ಮಾಡುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ್ದು, ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ.

ಕಳೆದ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​​ ಯಡಿಯೂರಪ್ಪನವರು ಮಿಷನ್​ 150 ಯೋಜನೆ ರೂಪಿಸಿದ್ದರು. ಆದರೆ, ಕೊನೆಗೂ 150 ಮಿಷನ್​ ಪೈಕಿ ಕೇವಲ 104 ಸೀಟುಗಳನ್ನು ಗೆಲ್ಲುವ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇದೀಗ ವಿಧಾನಸಭೆಯಲ್ಲಿ ವಿಫಲವಾದ ಬಿಜೆಪಿ ಲೋಕಸಭೆಯಲ್ಲಿ ಸಫಲಗೊಳಿಸಲು ಚಿಂತಿಸಿದೆ. ಹೀಗಾಗಿಯೇ ಶತಾಯಗತಾಯ 20 ಸೀಟುಗಳನ್ನು ಗೆಲ್ಲಲು ಮುಂದಾಗಿದೆ.

ಈಗ ಲೋಕಸಭಾ ಚುನಾವಣೆಗೆ ಸಿದ್ಧರಾಗಿರುವ ಬಿಎಸ್​ ಯಡಿಯೂರಪ್ಪ ಮಿಷನ್​ 20+ ಯೋಜನೆ ರೂಪಿಸಿದ್ದಾರೆ. ಈ ಮೂಲಕ 28 ಲೋಕಸಭಾ ಕ್ಷೇತ್ರ 20ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಹದ್ದಿನ ಕಣ್ಗಾವಲು ಇಡಲು ನಿರ್ಧರಿಸಿದ್ಧಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸೋಲಬಾರದೆಂದು ಬಿಜೆಪಿ ಹೈಕಮಾಂಡ್​ ಸೂಚಿಸಿದೆ.

ಲೋಕಸಭಾ ಚುನಾವಣಾ ಸಮರದ ಸಂಪೂರ್ಣ ಜವಾಬ್ದಾರಿ ಬಿಎಸ್​ ಯಡಿಯೂರಪ್ಪ ಹೆಗಲಿಗೆ ಹೊರಿಸಲಾಗಿದೆ. ಬಿಜೆಪಿ ಹೈಕಮಾಂಡ್​​ ಅಮಿತ್​ ಶಾ ಅವರು ಕೂಡ 20 ಪ್ಲಸ್​​​ ಯೋಜನೆಗೆ ರಣತಂತ್ರಗಳನ್ನು ರೂಪಿಸಿದ್ಧಾರೆ. ಅಲ್ಲದೇ ಯಡಿಯೂರಪ್ಪ ಸೂಚಿಸಿದ ವ್ಯಕ್ತಿಯೇ 2019 ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಎನ್ನಲಾಗಿದೆ. 28 ಲೋಕಸಭಾ ಕ್ಷೇತ್ರಕ್ಕೂ ಯಡಿಯೂರಪ್ಪ ಅವರೇ ಟಿಕೆಟ್ ಫೈನಲ್ ಮಾಡುವುದಾಗಿದ್ದು, ಯಾರಿಗೆ ಟಿಕೆಟ್​ ನೀಡಬೇಕು ಎಂಬ ಅಂತಿಮ ನಿರ್ಧಾರ ಅವರದೇ ಆಗಿದೆ ಎಂದು ತಿಳಿದು ಬಂದಿದೆ.

Comments are closed.