ರಾಷ್ಟ್ರೀಯ

ಗುಜರಾತ್‌ನ ‘ಮಕ್ಕಳ ಕಾರ್ಖಾನೆಗೆ’ ಮೋದಿ ಸರಕಾರದಿಂದ ಬೀಗ!

Pinterest LinkedIn Tumblr


ಆನಂದ್( ಗುಜರಾತ್): ಗುಜರಾತ್‌ನ ಆನಂದ್ ನಗರ ದೇಶದ ಬಾಡಿಗೆ ತಾಯಿ ರಾಜಧಾನಿ ಎಂಬ ಖ್ಯಾತಿಗೆ ಒಳಗಾಗಿದೆ. ಅಲ್ಲದೆ, ಗುಜರಾತ್‌ನ ಮಕ್ಕಳ ಕಾರ್ಖಾನೆ ಎಂದೆನಿಸಿಕೊಂಡಿತ್ತು. ಆದರೆ, ಲೋಕಸಭೆಯಲ್ಲಿ ಇತ್ತೀಚೆಗೆ ಸರೋಗಸಿ ಮಸೂದೆ ಅಂಗೀಕಾರವಾಗಿದ್ದು, ಇದರಲ್ಲಿ ಬಾಡಿಗೆ ತಾಯಂದಿರನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು 2016ರ ಸರೋಗಸಿ ( ನಿಯಂತ್ರಣ ) ಕಾನೂನು ಹೇಳುತ್ತದೆ. ಇದರಿಂದಾಗಿ, ಬಾಡಿಗೆ ತಾಯಂದಿರ ಸಹಾಯದಿಂದ ಮಕ್ಕಳಿಲ್ಲ ಎಂಬ ಕೊರಗನ್ನು ನೀಗಿಸಿಕೊಳ್ಳುತ್ತಿರುವ ಮಹಿಳೆಯರು ಹಾಗೂ ಬಂಜೆತನ ನಿವಾರಿಸುವ ಹಾಗೂ ಪ್ರನಾಳ ಶಿಶು ಆಸ್ಪತ್ರೆಗಳು ಕೇಂದ್ರ ಸರಕಾರದ ಈ ನಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ.

ಅಲ್ಲದೆ, ರಾಜ್ಯಸಭೆಯಲ್ಲೂ ಈ ಮಸೂದೆ ಅಂಗೀಕಾರವಾದರೆ ಬಾಡಿಗೆ ತಾಯಂದಿರನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ನಿಷೇಧ ಬೀಳಲಿದೆ. ಈ ಹಿನ್ನೆಲೆ, ವಾಣಿಜ್ಯ ಉದ್ದೇಶಕ್ಕೆ ತಾಯಂದಿರಲು ಬಳಸಿಕೊಳ್ಳುತ್ತಿರುವ ಆಸ್ಪತ್ರೆಗಳ ಬಳಿ ಬಾಡಿಗೆ ತಾಯಂದಿರು ಅಸಹನೆ ನೋಟ ಬೀರುತ್ತಿದ್ದು, ತಮಗೆ ಬರಬೇಕಿರುವ ಹಣವನ್ನೆಲ್ಲ ಪಡೆದುಕೊಳ್ಳಲು ಕ್ಯೂ ನಿಲ್ಲುತ್ತಿದ್ದಾರೆ ಎಂದು ತಿಳಿದುಕೊಂಡಿದೆ.

ಈ ಬಗ್ಗೆ ಮಾತನಾಡಿದ ಬಾಡಿಗೆ ತಾಯಿಯೊಬ್ಬರು, ”ನಾನು ಎರಡನೇ ಬಾರಿಗೆ ಬಾಡಿಗೆ ತಾಯಿಯಾಗಲು ಆಯ್ಕೆ ಮಾಡಿಕೊಂಡಿದ್ದೆನೆ. ನನ್ನ ಪತಿ ತಿಂಗಳಿಗೆ ಕೇವಲ 5 ಸಾವಿರ ರೂ. ದುಡಿಯುತ್ತಾರೆ. ಈ ಹಣದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಹೇಗೆ? ಆ ಸನ್ನಿವೇಶದಲ್ಲಿ ತಾನು ಬಾಡಿಗೆ ತಾಯಿಯಾಗಿ 3.6 ಲಕ್ಷ ರೂ, ಹಣ ಪಡೆದುಕೊಂಡೆ. ಇದರಿಂದಾಗಿ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಿದೆ. ಈಗ ಎರಡನೇ ಬಾರಿ ಆಯ್ಕೆ ಮಾಡಿಕೊಂಡಿದ್ದು, ಸಣ್ಣ ಮನೆ ಕಟ್ಟಿಸಬೇಕು. ಆದರೆ, ಈ ರೀತಿಯ ಕಾನೂನಿನಿಂದ ನಮ್ಮ ಜೀವನಕ್ಕೆ ಹೊಡೆತ ಬೀಳಲಿದೆ” ಎಂದು 32 ವರ್ಷದ ಮಹಿಳೆ ಹೇಳಿಕೊಂಡಿದ್ದಾರೆ. ಇನ್ನು, ಬಡತನ ನಿವಾರಿಸಿಕೊಳ್ಳಲು ಬಾಡಿಗೆ ತಾಯಿಯಾಗುವುದೇ ಮಾರ್ಗ ಎಂದು ಮತ್ತೊಬ್ಬ ಗುಜರಾತ್‌ ಮಹಿಳೆಯೂ ನೋವು ತೋಡಿಕೊಂಡಿದ್ದಾರೆ. ಜತೆಗೆ, ”ಈ ಮಸೂದೆ, ಕೇವಲ ಬಂಜೆತನದ ಬಗ್ಗೆ ಮಾತ್ರ ಮಾತನಾಡುತ್ತೆ. ಇತರ ಅನೇಕ ವಿಚಾರಗಳ ಬಗ್ಗೆ ವಿಷಯವೇ ಇಲ್ಲ” ಎಂದು ಕೆಲ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವ್ಯಾಪಾರೀಕರಣವಾದ ಬಾಡಿಗೆ ತಾಯಿ ಉದ್ಯಮ?

ಆದರೆ, ಬಾಡಿಗೆ ತಾಯಿ ಹೆಸರಲ್ಲಿ ಬಡ ಮಹಿಳೆಯರನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಇಂತಹ ಕಾನೂನಿನ ಅಗತ್ಯವಿದೆ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು, ಈ ”ಅನೈತಿಕ ವ್ಯಾಪಾರ”ವನ್ನು ಮುಚ್ಚಲು ಹೋರಾಡುತ್ತಿರುವ ಹೋರಾಟಗಾರ್ತಿ ಪಿಂಕಿ ವಿರಾಣಿ ಎಂಬ ಮಹಿಳೆ, ”ಈ ಮಸೂದೆಯಲ್ಲೂ ಕೆಲ ದೋಷಗಳಿವೆ. ಆದರೆ, ಅದನ್ನು ಸರಿಪಡಿಸಬಹುದು” ಎಂದು ಸರೋಗಸಿ ನಿಯಂತ್ರಣ ಕಾನೂನು ಜಾರಿಗೆ ತರಲು ಬೆಂಬಲ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಬಾಡಿಗೆ ತಾಯಿಯ ಮೂಲಕ ಮಗು ಪಡೆದ ಬಳಿಕ ಮಕ್ಕಳಿಗೆ ಕ್ಯಾನ್ಸರ್‌ ಆಗುವ ಅಪಾಯ ಹೆಚ್ಚು, ಜತೆಗೆ ಲ್ಯಾಬ್‌ನಲ್ಲಿ ಮಗುವನ್ನು ಸೃಷ್ಟಿ ಮಾಡುವುದಾದರೆ, ಅದರಿಂದ ಮಗುವಿನ ಮೇಲೆ ಆಗುವ ಪರಿಣಾಮಗಳು ಅಧಿಕ” ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.

ಇನ್ನೊಂದೆಡೆ, ಗುಜರಾತ್‌ನ ಆನಂದ್ ಜಿಲ್ಲೆ ಸರೋಗಸಿ ವ್ಯಾಪಾರಕ್ಕೆ ಹೆಸರುವಾಸಿಯಾಗಿದ್ದು, 3000 ಮಂದಿಗೆ ಉದ್ಯೋಗ ನೀಡಿದೆ. 304 ವಿದೇಶಿ ಮಹಿಳೆಯರು ಹಾಗೂ 307 ಎನ್‌ಆರ್‌ಐಗಳು ಮಕ್ಕಳನ್ನ ಪಡೆದುಕೊಂಡರು. ನಂತರ, 2015ರಲ್ಲಿ ವಿದೇಶದಿಂದ ಬಂದು ಬಾಡಿಗೆ ತಾಯಿ ಮೂಲಕ ಮಕ್ಕಳು ಪಡೆದುಕೊಳ್ಳುವುದಕ್ಕೆ ನಿರ್ಬಂಧ ಹೇರಲಾಯಿತು.

ಮಸೂದೆಯನ್ನು ವಿರೋಧಿಸುವ ಕೆಲ ಮಹಿಳೆಯರು, ಬ್ಯಾನ್‌ ಮಾಡುವುದಕ್ಕಿಂತ ನಿಯಂತ್ರಣ ಹೇರಬೇಕಿದೆ ಎಂದು ಇತ್ತೀಚೆಗೆ ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಯ ಬಗ್ಗೆ ಅವರು ಮಾತನಾಡಿದ್ದಾರೆ.

Comments are closed.