ಮನೋರಂಜನೆ

ಕೋಟಿಗೊಬ್ಬ 2 ಹವಾ ಶುರು:ಟ್ವಿಟರ್‌ನಲ್ಲಿ ಸುದೀಪ್‌ ಪೋಸ್ಟರ್‌ ಟಾಪ್‌

Pinterest LinkedIn Tumblr

koti“ಕೋಟಿಗೊಬ್ಬ 2′ ಚಿತ್ರದ ಫ‌ಸ್ಟ್‌ ಲುಕ್‌ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಆ ಫ‌ಸ್ಟ್‌ ಲುಕ್‌
ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಸಾಕಷ್ಟು ಜನರ ಗಮನ ಸೆಳೆದಿದೆ. ಇನ್ನೂ ಒಂದು ಪ್ಲಸ್‌ ಎಂದರೆ, ಟ್ವಿಟರ್‌ನಲ್ಲೂ “ಕೋಟಿಗೊಬ್ಬ 2′ ಚಿತ್ರದ ಪೋಸ್ಟರ್‌ಗಳ ಬಗ್ಗೆ ಚರ್ಚೆಯಾಗುತ್ತಿದೆ. ಬರೀ ಚರ್ಚೆಯಾಗುವುದಷ್ಟೇ ಅಲ್ಲ, ಟ್ವಿಟರ್‌ನಲ್ಲಿ ಟಾಪ್‌ ಸ್ಥಾನದಲ್ಲಿದೆ ಎನ್ನುತ್ತಾರೆ ಚಿತ್ರದ ಪೋಸ್ಟರ್‌ ವಿನ್ಯಾಸಗಾರ ಸಾಯಿ. “ಇತ್ತೀಚೆಗೆ ಪೋಸ್ಟರ್‌ ಬಿಡುಗಡೆ ಮಾಡಿದ್ದೇವೆ.

ಬರೀ ಕರ್ನಾಟಕವಷ್ಟೇ ಅಲ್ಲ, ಆಲ್‌ ಓವರ್‌ ಇಂಡಿಯಾ ಹಿಟ್‌ ಆಗಿದೆ. ಅಭಿಮಾನಿಗಳು ಟ್ರೆಂಡ್‌ ಮಾಡುತ್ತಿದ್ದಾರೆ. ಆ ನಂತರ “ರೋರ್ ಅಗೇನ್‌’ ಎಂದು ಕ್ಯಾಪ್ಶನ್‌ ಹಾಕಿ ಚಿತ್ರದ ಪೋಸ್ಟರ್‌ ಬಿಟ್ಟಿದ್ದೇವೆ. ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮುಖ್ಯವಾಗಿ ಏನೆಂದರೆ, ಸುದೀಪ್‌ ಅವರಿಗೆ ಆನ್‌ಲೈನ್‌ನಲ್ಲಿ ದೊಡ್ಡ ಅಭಿಮಾನಿ ವರ್ಗವಿದೆ. ಅವರೆಲ್ಲಾ ಟ್ರೆಂಡ್‌ ಮಾಡುತ್ತಿದ್ದಾರೆ. ಬಹುಶಃ ಇದೇ ಮೊದಲು ಟ್ವಿಟರ್‌ನಲ್ಲಿ “ಕೋಟಿಗೊಬ್ಬ 2′ ಚಿತ್ರದ ಪೋಸ್ಟರ್‌ಗಳು ಟಾಪ್‌ ಸ್ಥಾನಗಳಲ್ಲಿವೆ’ ಎನ್ನುತ್ತಾರೆ ಸಾಯಿ. “ಕೋಟಿಗೊಬ್ಬ 2′ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಯುವುದಕ್ಕೆ ಬಂದಿದೆ.

ಇನ್ನೊಂದು ಹಾಡಿನ ಚಿತ್ರೀಕರಣ ಮುಗಿದರೆ, ಕುಂಬಳಕಾಯಿ ಒಡೆಯಬಹುದು. ಇತ್ತೀಚೆಗೆ ಸುದೀಪ್‌ ಅವರ ಇಂಟ್ರೋಡಕ್ಷನ್‌ ಹಾಡೊಂದನ್ನು ಚಿತ್ರೀಕ ರಣ ಮಾಡಲಾಗಿದೆ. ಇಮ್ರಾನ್‌ ಸರ್ದಾ ರಿಯಾ ನೃತ್ಯ ನಿರ್ದೇಶಿಸಿರುವ ಈ ಹಾಡಿನಲ್ಲಿ ವಿಶೇಷ ಮಾದರಿಯ ಬೈಕ್‌ಗಳನ್ನು ಬಳಸಿಕೊಳ್ಳಲಾಗಿದೆ. ಬಾಕಿ ಇರುವ ಇನ್ನೊಂದು ಹಾಡು ಡ್ಯುಯೆಟ್‌ ಆಗಿದ್ದು, ಅದನ್ನು ಸಹ ಇಮ್ರಾನ್‌ ನಿರ್ದೇಶಿಸಲಿದ್ದಾರಂತೆ.

ಸದ್ಯದಲ್ಲೇ ಆ ಹಾಡಿನ ಚಿತ್ರೀಕರಣ ಸಹ ನಡೆಯಲಿದೆ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು. ತಮಿಳಿನ ಜನಪ್ರಿಯ ನಿರ್ದೇಶಕ ಕೆ.ಎಸ್‌. ರವಿಕುಮಾರ್‌ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ದೇಶಿಸಿರುವ “ಕೋಟಿಗೊಬ್ಬ-2′ ಚಿತ್ರದಲ್ಲಿ ಸುದೀಪ್‌ ಜೊತೆಗೆ ನಿತ್ಯಾಮೆನನ್‌, ಶರತ್‌ ಲೋಹಿತಾಶ್ವ, ನಾಸರ್‌, ಚಿಕ್ಕಣ್ಣ, ರವಿಶಂಕರ್‌, ಮುಖೇಶ್‌ ತಿವಾರಿ ಮುಂತಾದವರು ನಟಿಸಿದ್ದಾರೆ. ಡಿ. ಇಮಾಮ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈಗಾ ಗಲೇ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಇನ್ನೊಂದು ಹಾಡಿನ ಚಿತ್ರೀಕರಣ ಮುಗಿದ ನಂತರ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದು ಬಾಬು ಹೇಳುತ್ತಾರೆ.
-ಉದಯವಾಣಿ

Write A Comment