ಅಂತರಾಷ್ಟ್ರೀಯ

ಚೀನಾದಲ್ಲಿ ಭೂಕುಸಿತದಿಂದ ೪೫ ಮಂದಿ ಸಾವು, ಕೆಸರಿನಡಿ ಇನ್ನೂ ಹಲವರು ಸಿಲುಕಿರುವ ಶಂಕೆ

Pinterest LinkedIn Tumblr

chinaಬೀಜಿಂಗ್, ಮೇ 9-ಚೀನಾದ ಆಗ್ನೇಯ ಫುಜಿಯನ್ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 45 ಜನ ಮೃತಪಟ್ಟಿರುವ ಘಟನೆ ನಡೆದಿದೆ. ಅವಶೇಷಗಳಡಿಯಿಂದ 13 ಜನರನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಸಿದಿರುವ ಮಣ್ಣಿನಡಿ ಇನ್ನೂ ಕೆಲವರು ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

ಇಲ್ಲಿ ನಿರ್ಮಾನವಾಗುತ್ತಿದ್ದ ಹೈಡ್ರೋ ಪವರ್ ಸ್ಟೇಷನ್(ಜಲ ವಿದ್ಯುತ್ ಘಟಕ) ನಿರ್ಮಾಣದಲ್ಲಿ ಭಾಗವಹಿಸುತ್ತಿದ್ದ ಕಾರ್ಮಿಕರು ಅದರ ಬಳಿಯೇ ಗುಡ್ಡ ಇಳಿಜಾರಿನಲ್ಲಿ ವಾಸ್ತವ್ಯ ಹೂಡಿದ್ದರು.

ಭೂಕುಸಿತದಿಂದ ಉಂಟಾಗಿರುವ ಕೆಸರಿನಲ್ಲಿ 300 ಶೆಡ್‌ಗಳು ನೆಲಸಮವಾಗಿವೆ. ಇದುವರೆಗೆ 10 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment