ಗಲ್ಫ್

ಸೌದಿಯಲ್ಲಿ ಕೆಲಸ ಅರಸಿ ಹೋಗಿದ್ದ ಭಾರತದ ಮಹಿಳೆಗೆ ಚಿತ್ರಹಿಂಸೆ ನೀಡಿ ಹತ್ಯೆ

Pinterest LinkedIn Tumblr

soudiರಿಯಾದ್ ,ಮೇ 9-ಹೊಟ್ಟೆಪಾಡಿಗಾಗಿ ಕೆಲಸ ಅರಸಿಹೋಗಿದ್ದ ಭಾರತೀಯ ಮಹಿಳೆಯೊಬ್ಬಳನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಸೌಧೀ ಆರೇಬಿಯಾದಲ್ಲಿ ನಡೆದಿದೆ. ಹೈದರಾಬಾದ್‌ನ ಅಸೀಮಾ ಖಾಟೀವ್ ಎಂಬ 25 ವರ್ಷದ ಯುವತಿ ಸೌದಿಯಲ್ಲಿ ಮನೆಗೆಲಸ ಮಾಡುತ್ತಿದ್ದಳು.

ಅವಳ ವೀಸಾ ಅವಧಿ ಮುಗಿದಿದ್ದರೂ ಆಕೆಯನ್ನು ಅಲ್ಲಿ ಅಕ್ರಮವಾಗಿ ಇರಿಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ತನಗೆ ಇಲ್ಲಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ತನ್ನ ಕುಟುಂಬದವರಿಗೆ ತಿಳಿಸಿದ್ದಳು. ಕೆಲ ದಿನಗಳ ಹಿಂದಷ್ಟೇ ದೂರವಾಣಿ ಕರೆ ಮಾಡಿ ಹೇಗಾದರೂ ನನ್ನನ್ನು ಇಲ್ಲಿಂದ ಪಾರು ಮಾಡಿ ಎಂದು ಕೇಳಿದ್ದಳು.

ಅಸೀಮಾಳ ಕುಟುಂಬದವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ಪರಿಸ್ಥಿತಿ ಬಗ್ಗೆ ವಿವರಿಸಿತ್ತು. ನಾಲ್ಕು ತಿಂಗಳ ಹಿಂದೆ ಕೆಲಸವನ್ನರಸಿ ಇಲ್ಲಿಗೆ ಬಂದಿದ್ದ ಅಸೀಮಾಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿತ್ತು. ತೆಲಂಗಾಣ ಪೊಲೀಸರೂ ಕೂಡ ಸೌದಿಗೆ ಪತ್ರ ಬರೆದು ವಿವರ ಕೋರಿತ್ತು. ಅಷ್ಟರಲ್ಲಿ ಅಸೀಮಾ ಮಾನುಷ ದೌರ್ಜನ್ಯಕ್ಕೆ ಒಳಗಾಗಿ ಅಸುನೀಗಿದ್ದಾಳೆ.

Write A Comment