ಮನೋರಂಜನೆ

ಭಾರತದ ಕೋಚ್ ಹುದ್ದೆಗೆ ವಿಟೋರಿ ಸೂಕ್ತ : ಕೊಹ್ಲಿ

Pinterest LinkedIn Tumblr

viratವಿಶಾಖಪಟ್ಟಣ, ಮೇ 9- ಐಪಿಎಲ್9ರ ಆವೃತ್ತಿಯ ನಂತರ ಭಾರತ ಕ್ರಿಕೆಟ್ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು ಮುಖ್ಯ ತರಬೇತುದಾರನಾಗಿ ವಿಟೋರಿಯನ್ನು ಆಯ್ಕೆ ಮಾಡುವಂತೆ ಕೊಹ್ಲಿ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಈ ಹಿಂದೆ ಆ ಹುದ್ದೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್‌ರವರನ್ನು ನೇಮಿಸಲು ಬಿಸಿಸಿಐ ನಿರ್ಧರಿಸಿತು. ಆದರೆ ದ್ರಾವಿಡ್ ಐಪಿಎಲ್‌ನಲ್ಲಿ ಡೆಲ್ಲಿಡೇರ್‌ಡೆವಿಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ಫುಲ್ ಬ್ಯುಜಿಯಾದರು.

ಈಗ ಡೆಂಕ್ಲನ್ ಫ್ಲೆಚರ್‌ನಿಂದ ತೆರವಾಗಿರುವ ಮುಖ್ಯ ತರಬೇತುದಾರ ಹುದ್ದೆಗೆ ನ್ಯೂಜಿಲ್ಯಾಂಡ್‌ನ ಮಾಜಿ ಆಟಗಾರ ಡೇನಿಯಲ್ ವಿಟೋರಿ ಸೂಕ್ತ ಎಂದು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಪ್ರಸಕ್ತ ವಿಟೋರಿ ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿದ್ದು ಆತನ ಗರಡಿಯಲ್ಲಿ ನನ್ನ ಬ್ಯಾಟಿಂಗ್ ಬಲ ಕೂಡ ಹೆಚ್ಚಿದೆ ಎಂದು ವಿರಾಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೆ 2014ರವರೆಗೂ ವಿಟೋರಿ ಆರ್‌ಸಿಬಿ ತಂಡದ ನಾಯಕನಾಗಿದ್ದು ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದರು.

ಆದರೆ ಬಿಸಿಸಿಐ ಜಿಂಬಾಬ್ವೆ ಪ್ರವಾಸ ಕೈಗೊಳ್ಳುವ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಹಾಗೂ ಡೇನಿಯಲ್ ವಿಟೋರಿಯಂತಹ ವಿದೇಶಿ ಆಟಗಾರರನ್ನು ಮುಖ್ಯ ತರಬೇತುದಾರರನ್ನಾಗಿ ನೇಮಕ ಮಾಡುತ್ತಾರೋ ಎಂದು ಕಾದು ನೋಡಬೇಕಿದೆ.

Write A Comment