ಕರ್ನಾಟಕ

ನನ್ನನ್ನೇ ಯಾಕೆ ನೋಡ್ತಾ ಇದೀಯಾ..ಆ ಕಡೆ ತಿರುಗು: ಸಿಎಂ ಫ‌ನ್ನಿ ಡೈಲಾಗ್

Pinterest LinkedIn Tumblr

siಮೈಸೂರು : ಎಯ್‌..ಎನು ನನ್ನನ್ನೇ ಯಾಕೆ ನೋಡ್ತಾ ಇದೀಯಾ ಆ ಕಡೆ ತಿರುಗು … ಇ ಡೈಲಾಗ್‌ ಹೇಳಿದ್ದು ಬೇರ್ಯಾರು ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮುಖಂಡ ಗೋ.ಮಧುಸೂದನ್‌ಗೆ ವೇದಿಕೆಯಲ್ಲಿ ಹೇಳಿ ಸಭಾಂಗಣದಲ್ಲಿದ್ದವರನ್ನು ನಗೆ ಗಡಲಲ್ಲಿ ತೇಲಿಸಿದರು.

ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಷಣ ಮಾಡುತ್ತಿದ್ದ ವೇಳೆ ಈ ಡೈಲಾಗ್‌ ಹೇಳಿ ಎಲ್ಲರನ್ನೂ ನಗಿಸಿ ತಾವೂ ನಕ್ಕರು..

ಭಾಷಣದಲ್ಲಿ ಬಸವಣ್ಣ ಅವರ ಕುರಿತಾಗಿ ಮಾತನಾಡುತ್ತಾ 12 ನೇ ಶತಮಾನದಲ್ಲೇ ಸಾರಿ ಸಾರಿ ಹೇಳಿದರು. ವರ್ಣಾಶ್ರಮ ವಿರೋಧಿಯಾಗಿದ್ದರು ಎನ್ನುವ ವೇಳೆ ವೇದಿಕೆಯಲ್ಲಿ ಆಸೀನರಾಗಿದ್ದ ಗೋ ಮಧೂಸೂದನ್‌ ಅವರತ್ತ ತಿರುಗಿ ‘ಏನು ನನ್ನನ್ನೇ ಯಾಕೆ ನೋಡ್ತಾ ಇದೀಯಾ..ಆ ಕಡೆ ತಿರುಗು ..’ಎಂದರು. ಆಗಮಧುಸೂದನ್‌ ನೋಡಬಾರದೇ ಎಂದು ಕೇಳಿದಾಗ ಸಿದ್ದರಾಮಯ್ಯ ಅವರು ‘ಹಾಗೇನಿಲ್ಲ ನನ್ನನ್ನೇ ದುರುಗುಟ್ಟಿ ನೋಡುತ್ತಾ ಇದ್ದಿಯಲ್ಲ ಅದಕ್ಕೆ ಹೇಳಿದೆ..’ ಎಂದರು. ಈ ವೇಳೆ ಇಡೀ ಸಭಾಂಗಣ ನಗೆ ಗಡಲಲ್ಲಿ ತೇಲಿತು.

ಮುನಷ್ಯರಾಗಿ ಹುಟ್ಟುತ್ತೇವೆ ಸಾಯುವಾಗ ಮನುಷ್ಯರಾಗಿ ಸಾಯಿ ಅಂತ ಹೇಳಿ ಬಸವಣ್ಣ ರಾದಿ ಎಲ್ಲಾ ದಾರ್ಶನಿಕರು ,ಮಹಾತ್ಮಗಾಂಧಿ ಅಂಬೇಡ್ಕರ್‌ ಎಲ್ಲರೂ ಹೇಳಿದ್ದಾರೆ ಎಂದು ಸಿಎಂ ಹೇಳಿದರು.
-ಉದಯವಾಣಿ

Write A Comment