ಮನೋರಂಜನೆ

ಗೆದ್ದೇಬಿಟ್ರಾ ಮುಂಬೈ ಹುಡ್ಗರು ಲೋಕಲ್‌ ಬನಿಯಾ ಎಂಬ ಯಶಸ್ಸಿನ ಕತೆ

Pinterest LinkedIn Tumblr

localbanyaಬೇರೆಲ್ಲಾ ಇ ಕಾಮರ್ಸ್‌ ಕಂಪನಿಗಳು ಎಲೆಕ್ಟ್ರಾನಿಕ್‌ ವಸ್ತುಗಳು, ಫ್ಯಾಶನ್‌ ವಸ್ತುಗಳ ಹಿಂದೆ ಬಿದ್ದಿದ್ದರೆ ಇವರು ಮಾತ್ರ ದಿನ ಬಳಕೆ ವಸ್ತುಗಳನ್ನು ಮನೆ ತಲುಪಿಸೋ ಆಸೆ ಹೊಂದಿದ್ದರು. ಅಷ್ಟೇ ಅಲ್ಲ ಗೆದ್ದೇ ಬಿಟ್ಟರು.

ಕರನ್‌ ಮೆಹೊÅàತ್ರಾ, ರಾಶಿ ಚೌಧರಿ ಮತ್ತು ಅಮಿತ್‌ ನಾಯಕ್‌ ಎಂಬ ಮೂವರ ಯಂಗ್‌ಸ್ಟರ್‌ಗಳ ಗುಂಪು ಒನ್‌ ಫೈನ್‌ ಡೇ ಒಂದು ಕಟ್ಟೆಯಲ್ಲಿ ಕೂತು ಒಂದು ಮಹತ್ವದ ನಿರ್ಧಾರಕ್ಕೆ ಬಂದರು. ಟೆಕ್ನಾಲಜಿ ಗೊತ್ತಿತ್ತು. ಏನಾದರೂ ಸಾಧಿಸಬೇಕು ಅನ್ನೋ ಕನಸಿತ್ತು. ಅವರು ಫ್ಲಿಪ್‌ಕಾರ್ಟ್‌ ಅನ್ನೋ ಇ ಕಾಮರ್ಸ್‌ ಸಂಸ್ಥೆ ಕಣ್ಣ ಮುಂದೆ ಬೆಳೆದಿದ್ದನ್ನು ನೋಡಿದ್ದರು. ಇ ಕಾಮರ್ಸ್‌ಗೆ ಭಾರತದಲ್ಲಿ ಜೀವವಿದೆ ಅನ್ನೋದನ್ನು ಅರ್ಥ ಮಾಡಿಕೊಂಡಿದ್ದರು.

ಹೀಗೆ ಅದು ಇದು ಮಾತಾಡುತ್ತಾ ಅವರೊಳಗೆ ಹುಟ್ಟಿಕೊಂಡ ಕನಸಿನ ಹೆಸರು ಲೋಕಲ್‌ ಬನ್ಯಾ.

localbanya.com. ಇದೊಂದು ಇ ಬಿಸಿನೆಸ್‌ ಕಂಪನಿ. ಫ್ಲಿಪ್‌ಕಾರ್ಟ್‌ ಥರದ್ದೇ ಒಂದು ವೆಬ್‌ಸೈಟ್‌. ಇಲ್ಲಿ ನೀವು ದಿನನಿತ್ಯ ಬಳಸುವ ವಸ್ತುಗಳು ಸಿಗುತ್ತವೆ. ತರಕಾರಿ, ಹಣ್ಣು, ಡೈರಿ ಉತ್ಪನ್ನಗಳನ್ನು ನೀವು ಆರಿಸಿದರೆ ಸಾಕು ನಿಮ್ಮ ಮನೆ ಬಾಗಿಲಿಗೆ ಬಂದು ಕರೆಯುತ್ತದೆ. ಬೇರೆಲ್ಲಾ ಇ ಕಾಮರ್ಸ್‌ ಕಂಪನಿಗಳು ಎಲೆಕ್ಟ್ರಾನಿಕ್‌ ವಸ್ತುಗಳು, ಫ್ಯಾಶನ್‌ ವಸ್ತುಗಳ ಹಿಂದೆ ಬಿದ್ದಿದ್ದರೆ ಇವರು ಮಾತ್ರ ದಿನ ಬಳಕೆ ವಸ್ತುಗಳನ್ನು ಮನೆ ತಲುಪಿಸೋ ಆಸೆ ಹೊಂದಿದ್ದರು. ಅಷ್ಟೇ ಅಲ್ಲ ಗೆದ್ದೇ ಬಿಟ್ಟರು. ಇವರ ಲೋಕಲ್‌ ಬನ್ಯಾ ಮಹಾರಾಷ್ಟ್ರದಾದ್ಯಂತ ಫೇಮಸ್‌ ಆಗಿದೆ. ಈ ಮುಂಬೈ ಹುಡ್ಗರ ಮುಖದಲ್ಲಿ ಗೆಲುವಿನ ನಗು ಮೀಡಿದೆ.
-ಉದಯವಾಣಿ

Write A Comment