ಮನೋರಂಜನೆ

“ಗಯ್ಯಾಳಿ’ಗಳ ಮಾತಿಗೆ ಸೆನ್ಸಾರ್‌: ಎಲ್ಲೆಡೆ ಆಕ್ಷೇಪ

Pinterest LinkedIn Tumblr

filmಬೆಂಗಳೂರು: ಡಾ| ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಗಯ್ಯಾಳಿಗಳು ಕಿರಗೂರಿನಲ್ಲಿ ಯಾರಿಗೂ ಹೆದರದೇ ಹೋಗಬಹುದು, ಆದರೆ ಅವರ ಮಾತುಗಳನ್ನು ಕೇಳಿ ಪ್ರಾದೇಶಿಕ ಸೆನ್ಸಾರ್‌ ಮಂಡಳಿಯಂತೂ ಹೆದರಿದೆ. ಪರಿಣಾಮ: ಕಳೆದ ವಾರ ತೆರೆ ಕಂಡಿರುವ ಕಿರಗೂರಿನ ಗಯ್ಯಾಳಿಗಳು ಚಿತ್ರದ ಹಲವು ಬೈಗುಳ, ಆಡುಪದಗಳಿಗೆ ಕತ್ತರಿ ಹಾಕಲಾಗಿದೆ ಅಥವಾ ಮ್ಯೂಟ್‌ ಮಾಡಲಾಗಿದೆ.

ಕಿರಗೂರಿನ ಗಯ್ಯಾಳಿಗಳು ಚಿತ್ರವಾಗುವುದಕ್ಕೆ ಮೊದಲೇ ಪಠ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಓದಿದ್ದಾರೆ. ನಾಟಕವಾಗಿ ಲಕ್ಷಾಂತರ ಜನರು ನೋಡಿದ್ದಾರೆ. ಆದರೆ, ಆಗ ಎದುರಾಗದ ಪದಗಳ ಸಮಸ್ಯೆ ಈಗ ಸಿನಿಮಾ ಸೆನ್ಸಾರ್‌ ಮಂಡಳಿಗೆ ಮಾತ್ರ ಎದುರಾಗಿರುವುದು ಚೋದ್ಯವೇ ಸರಿ!

ಕರ್ನಾಟಕ ಜಾನಪದ ಸೊಗಡನ್ನೂ ಅಶ್ಲೀಲವೆಂಬಂತೆ ನೋಡಿರುವ ಸೆನ್ಸಾರ್‌ ಮಂಡಳಿಯ ಬೌದ್ಧಿಕ ದಿವಾಳಿತನಕ್ಕೆ ಆನ್‌ಲೈನ್‌ ತಾಣಗಳಲ್ಲಿ ಮತ್ತು ಸಾಹಿತ್ಯಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸೆನ್ಸಾರ್‌ ಮಂಡಳಿಗೇ ಬಿಟ್ಟರೆ ಕನ್ನಡದ ಅನೇಕ ಖ್ಯಾತ ಕವಿಗಳ ಹಾಗೂ ಸಾಹಿತಿಗಳ ಸಾಹಿತ್ಯಕ್ಕೆಲ್ಲ ಎ ಸರ್ಟಿಫಿಕೇಟ್‌ ಕೊಡುವ ಸಾಧ್ಯತೆ ಇದೆ ಎಂಬ ಟೀಕೆ ಕೇಳಿಬಂದಿದೆ.

ಕಿರಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ಸೆನ್ಸಾರ್‌ನವರ ಕೆಂಗಣ್ಣಿಗೆ ಗುರಿಯಾದ ಅಶ್ಲೀಲ ಪದಗಳು – ನಿನ್ನ ಅಯ್ಯನ್‌ಬೇವರ್ಸಿ ಮುಂಡೆಕತ್ತೆ ಲೌಡಿ,ಚಡ್ಡಿ ಬಿಚ್ಚೋದು ,ಮುಚೊRಂಡ್‌ ಹೋಗು ಇತ್ಯಾದಿ.

ಆನ್‌ಲೈನ್‌ನಲ್ಲಿ ಸೆನ್ಸಾರ್‌ ಸಮರ:
ಸುಮನ್‌ ಕಿತ್ತೂರು ನಿರ್ದೇಶನದ ಈ ಸಿನಿಮಾದಲ್ಲಿ ಸೆನ್ಸಾರ್‌ ಮಂಡಳಿ ಕತ್ತರಿಸಿದ ಪದಗಳ ಬಗ್ಗೆ ತೀವ್ರ ಆಕ್ಷೇಪ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಶೇಮ್‌ಆನ್‌ಯುಕರ್ನಾಟಕ ಸೆನ್ಸಾರ್‌ ಬೋರ್ಡ್‌ ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಆನ್‌ಲೈನ್‌ನಲ್ಲಿ ಸೆನ್ಸಾರ್‌ ಧೋರಣೆ ವಿರುದ್ಧ ಸಮರ ಪ್ರಾರಂಭವಾಗಿದೆ. ಆಡು ಪದಗಳು ಅಶ್ಲೀಲ ಪದಗಳಲ್ಲ, ಅವು ಜಾನಪದ. ಅದನ್ನು ತಡೆಯುವುದು ಅಭಿವ್ಯಕ್ತಿ ಸ್ವಾತಂತ್ರÂಕ್ಕೆ ಧಕ್ಕೆ ಉಂಟು ಮಾಡುವ ನಡೆ ಎಂಬುದು ಆಕ್ಷೇಪಣೆಯ ಸಾರ.

ಉದಯವಾಣಿ ಜೊತೆ ಮಾತನಾಡಿದ ಮೂಲ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರುಇಡೀ ಕತೆಯಲ್ಲಿ ಬಳಸಿದ ಭಾಷೆ ಒಂದು ಗ್ರಾಮೀಣ ಪ್ರದೇಶದ ಹಿನ್ನೆಲೆಯದ್ದು. ಅವರು ಮಾತಾಡುವಾಗ ಶಿಷ್ಟವಾಗಿ ಇರುವುದಕ್ಕೆ ಸಾಧ್ಯವಿಲ್ಲ. ಬಾಸ್ಟರ್ಡ್‌ ಇತ್ಯಾದಿ ಇಂಗ್ಲಿಷ್‌ನಲ್ಲಿ ಪದಬಳಕೆ ಹೇಗೆ ಇದೆಯೋ ಹಾಗೇ ಆಡುಭಾಷೆಯಲ್ಲೂ ಹಲವು ಪದಗಳಿರುತ್ತವೆ. ಈ ಭಾಷೆ ಅದನ್ನು ಮಾತಾಡುವವರ ವ್ಯಕ್ತಿತ್ವ, ಪರಿಸರವನ್ನು ಹೇಳುತ್ತದೆ. ಅದನ್ನು ಆಕ್ಷೇಪಿಸುವುದು ತಪ್ಪುಎಂದು ಹೇಳಿದ್ದಾರೆ.

ಮನರಂಜನೆಗೋಸ್ಕರ ಬಳಸಲಾಗಿದ್ದರೆ ಅದನ್ನು ಸೆನ್ಸಾರ್‌ ಮಂಡಳಿ ಆಕ್ಷೇಪಿಸುವುದು ಸರಿ. ಆದರೆ ಇಲ್ಲಿ ಅವರು ತಮಗೆ ತೋಚಿದ್ದನ್ನು, ಮಾತಾಡಿದ್ದನ್ನು ತೇಜಸ್ವಿ ಕತೆ ಆಗಿಸಿದ್ದಾರೆ. ಅದನ್ನು ಪಠ್ಯ ಪುಸ್ತಕಗಳಲ್ಲಿ ಬಳಸಿಕೊಳ್ಳಲಾಗಿದೆ, ರಂಗಪ್ರಯೋಗ ನಡೆದಿದೆ. ಲಕ್ಷಾಂತರ ಪ್ರತಿಗಳು ಮಾರಾಟವಾಗಿ, ಅದನ್ನು ಎಲ್ಲರೂ ಓದಿದ್ದಾರೆ. ಆಗ ಕಾಣಿಸದ ಅಶ್ಲೀಲತೆ ಈಗ ಸಿನಿಮಾ ಆದ ತಕ್ಷಣ ಯಾಕೆ ಕಂಡಿದೆಎಂದು ಅವರು ಪ್ರಶ್ನಿಸಿದ್ದಾರೆ.

ಮಾನದಂಡ ಬೇರೆಯಾಗಲಿ:
ಸೆನ್ಸಾರ್‌ ಬೇಡ ಅಂತ ಹೇಳುತ್ತಿಲ್ಲ, ಆದರೆ ಸೆನ್ಸಾರ್‌ ಮಾಡುವ ಮಾನದಂಡಗಳು ಬದಲಾಗಬೇಕಿದೆ ಎಂದು ನಿರ್ದೇಶಕಿ ಸುಮನ್‌ ಕಿತ್ತೂರು ಹೇಳಿದ್ದಾರೆ. ಉದಯವಾಣಿಯ ಜೊತೆ ಮಾತಾಡಿದ ಅವರು ಪ್ರತಿ ಪದಕ್ಕೂ ಔಚಿತ್ಯವಿರುತ್ತದೆ. ಅರ್ಥಕ್ಕೆ ದಶದಿಕ್ಕುಗಳಿರುತ್ತವೆ. ಒಂದು ಪದವನ್ನು ಯಾವ ಕಾರಣಕ್ಕೆ ಬಳಸಲಾಗಿದೆ, ವೈಯಕ್ತಿಕ ನಿಂದನೆಯಾ, ಕಚಗುಳಿ ಇಡುವುದಕ್ಕೆ ಬಳಸಿದ್ದಾ, ಮನರಂಜನೆಗೆ ಬಳಸಿದ್ದಾ, ಸಾಮಾಜಿಕ ಪರಿಸ್ಥಿತಿಯನ್ನು ಹೇಳುವುದಕ್ಕೆ ವಿಡಂಬನೆಯಾಗಿ ಬಳಕೆಯಾಗಿದೆಯಾ ಅನ್ನುವುದನ್ನೆಲ್ಲಾ ಸೆನ್ಸಾರ್‌ ಮಂಡಳಿಯ ಸದಸ್ಯರು ನೋಡಬೇಕಾಗುತ್ತದೆಎಂದು ಹೇಳಿದರು.

ಚಿತ್ರದಲ್ಲಿ ಪುಟ್ಟ ಮಕ್ಕಳು ಬಹಿರ್ದೆಸೆಗೆ ಹೋಗುವ ದೃಶ್ಯ ಬಳಸಲಾಗಿದೆ. ಅವರು ಎದ್ದು ಕ್ಯಾಮರಾ ಕಡೆ ಬೆತ್ತಲಾಗಿ ಓಡಿ ಬರುತ್ತಾರೆ. ಅದನ್ನೂ ಸೆನ್ಸಾರ್‌ ಮಂಡಳಿ ನಗ್ನತೆಅನ್ನುವ ಕಾರಣ ಕೊಟ್ಟು ಕತ್ತರಿಸಿದೆ. ಎಷ್ಟೋ ಕಮರ್ಶಿಯಲ್‌ ಸಿನಿಮಾಗಳಲ್ಲಿ ಪುಟ್ಟ ಚಡ್ಡಿ ಹಾಕಿಸಿ, ಕೆಳಗಡೆ ಕೆಮರಾ ಇಟ್ಟು ಕಾಮಪ್ರಚೋದನೆಯಾಗುವಂತೆ ಚಿತ್ರೀಕರಿಸುತ್ತಾರೆ. ಅಲ್ಲಿ ಕಾಣದ ಅಶ್ಲೀಲತೆಯನ್ನು ಇಲ್ಲಿ ಕಾಣುತ್ತಾರೆ. ಇದು ಸರಿಯಲ್ಲಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-ಉದಯವಾಣಿ

Write A Comment