ರಾಷ್ಟ್ರೀಯ

ಚೆಕ್ ಬೌನ್ಸ್: ಮಲ್ಯ ವಿರುದ್ಧ ಮತ್ತೊಂದು ವಾರೆಂಟ್

Pinterest LinkedIn Tumblr

Vijay_Mallyaದೆಹಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಮಲ್ಯ ಹಾಗೂ ಕಿಂಗ್ ಫಿಶರ್ ಏರ್ ಲೈನ್ಸ್ ನ ಮುಖ್ಯ ಹಣಕಾಸು ಅಧಿಕಾರಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದ್ದು, ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮಾರ್ಚ್ 29 ರ ಒಳಗೆ ಹಾಜರು ಪಡಿಸಬೇಕೆಂದು ಹೇಳಲಾಗಿದೆ. ಮಾರ್ಚ್ 11 ರ ವೇಳೆಗೆ ಮಲ್ಯ ವಿರುದ್ಧ 5 ಜಾಮೀನು ರಹಿತ ವಾರಂಟ್ ಗಳನ್ನು ನೀಡಲಾಗಿತ್ತು. ಈಗ ಅವುಗಳ ಜೊತೆಗೆ ಮತ್ತೊಂದು ಹೊಸ ವಾರಂಟ್ ಸೇರಿದೆ.

ಈ ಹಿಂದೆ ಹೈದರಾಬಾದ್ ಕೋರ್ಟ್ ಕೂಡ ಉದ್ಯಮಿ ಮಲ್ಯಗೆ ನಾನ್ ಬೇಲೇಬಲ್ ವಾರಂಟ್ ನೀಡಿತ್ತು. ಕಿಂಗ್​ಫಿಷರ್ ಏರ್​ಲೈನ್ಸ್ ನೀಡಿದ ಚೆಕ್ ಬೌನ್ಸ್ ಆಗಿರುವ ಹಿನ್ನೆಲೆಯಲ್ಲಿ ಜಿಎಂಆರ್ ಗ್ರೂಪ್ ನೀಡಿದ ದೂರಿನ ಮೇಲೆ ಹೈದರಾಬಾದ್ ಕೋರ್ಟ್ ವಾರಂಟ್ ಜಾರಿ ಮಾಡಿದೆ.

Write A Comment