ಮನೋರಂಜನೆ

ಡ್ರಮ್ಮರ್ ಕ್ರೇಜ್ ಸೋನಾಕ್ಷಿ

Pinterest LinkedIn Tumblr

sonakshiಕಳೆದ ವರ್ಷ ತೆರೆಗೆ ಬಂದ ತೇವರ್ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್  ಚೆಲುವೆ ಸೋನಾಕ್ಷಿ ಕೈಯಲ್ಲಿ ಚಿತ್ರಗಳೇ ಇಲ್ವಾ ಎಂದು ಬಿಟೌನ್ ಕಡೆ ನೋಡಿದರೆ ಸಿಕ್ಕ ಉತ್ತರ ಸೋನಾಕ್ಷಿ ಕೂಲಾಗಿ ಡ್ರಮ್ ಬಡಿತಿದ್ದಾರಂತೆ.

ಶೂಟಿಂಗ್ ಮುಗಿಸಿ ಮನೆಗೆ ಹಿಂತಿರುಗುವ ಸೋನಾಕ್ಷಿ ಸೀದಾ ಡ್ರಮ್ಮರ್ ಸೆಟ್ ನಲ್ಲಿ ಕೂತು ಡ್ರಮ್ಮಿಂಗ್ ಮಾಡ್ಕೊಳ್ತಾರಂತೆ. ಇದರಿಂದ ಸೋನಾಕ್ಷಿಗೆ ತಮ್ಮ ಬ್ಯುಸಿ ಶೆಡ್ಯೂಲ್ ನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುತ್ತಿದೆ ಎಂದು ಬಲ್ಲ ಮೂಲಗಳು ಹೇಳಿಕೊಂಡಿವೆ.

ಬಾಲ್ಯದಲ್ಲಿ ಡ್ರಮ್ಮರ್ ಬಗ್ಗೆ ವಿಪರೀತ ಹುಚ್ಚು ಹಚ್ಚಿಕೊಂಡಿದ್ದ ಸೋನಾಕ್ಷಿಗೆ ಆಕೆಯ ತಾಯಿ ಡ್ರಮ್ ಬಡಿಯುವುದರಿಂದ ಸಿಕ್ಕಾಪಟ್ಟೆ ಶಬ್ದ ಮಾಲಿನ್ಯವಾಗುತ್ತದೆ ಅಂದಿದ್ದಕ್ಕೆ ಡ್ರಮ್ಮರ್ ಕೆಳಗಿಟ್ಟು ಗಿಟಾರ್ ಹಿಡ್ಕೊಂಡ್ರಂತೆ. ಆದರೆ ಈಗ ಸದ್ದಾಗದಂತೆ ಡ್ರಮ್ಮರ್ ಬಡಿಯುತ್ತಿದ್ದಾರೆ. ಹುಟ್ಟು ಗುಣ ಸುಟ್ಟರೂ ಹೋಗಲ್ಲ ಎಂಬಂತೆ ಸೋನಾಕ್ಷಿಯು ತಮ್ಮ ಹಳೆ ಕ್ರೇಜ್ ಆಗಿದ್ದ ಡ್ರಮ್ಮರನ್ನು ಈಗ ಮತ್ತೆ ಕೈಗೆತ್ತಿಕೊಂಡಿದ್ದಾರೆ.

Write A Comment