ಮನೋರಂಜನೆ

ಅನಿಲ್ ಕುಮಾರ್ ನಿರ್ದೇಶನದಲ್ಲಿ ಅಜಯ್ ರಾವ್ ಮುಂದಿನ ಚಿತ್ರ

Pinterest LinkedIn Tumblr

ajayಬೆಂಗಳೂರು: ಕೃಷ್ಣಾ ಲೀಲಾ ಚಿತ್ರದ ಯಶಸ್ಸಿನಲ್ಲಿರುವ ಅಜಯ್ ರಾವ್, ಮತ್ತೊಂದು ಸಿನಿಮಾದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ.

ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಅನಿಲ್ ಕುಮಾರ್ ಅವರೊಂದಿಗೆ ಅಜಯ್ ರಾವ್ ಅವರ ಮುಂದಿನ ಸಿನಿಮಾ ಸಿದ್ಧವಾಗುತ್ತಿದೆ. ಈ ಬಗ್ಗೆ ಮಾಹಿತಿಯನ್ನು ಖಚಿತಪಡಿಸಿರುವ ನಿರ್ಮಾಪಕ ಉದಯ್ ಮೆಹ್ತಾ, 5 ವರ್ಷಗಳ ನಂತರ ಅಜಯ್ ರಾವ್ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.

ಅಜಯ್ ರಾವ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಹೆಸರು ತಂದು ಕೊಟ್ಟ  ಕೃಷ್ಣನ್ ಲವ್ ಸ್ಟೋರಿ ಸಿನಿಮಾವನ್ನು ನಿರ್ಮಾಣ ಮಾಡಿದ್ದೆ. ಇದಾದ 5 ವರ್ಷಗಳ ಬಳಿಕ ಮತ್ತೊಮ್ಮೆ ಅಜಯ್ ರಾವ್ ಅವರ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಉದಯ್ ಮೆಹ್ತಾ ತಿಳಸಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾಗಿ ಯಶಸ್ವಿಯಾಗಿರುವ ಕೃಷ್ಣ ಲೀಲಾ ಸಿನಿಮಾವನ್ನು ನಾನೇ ನಿರ್ಮಾಣ ಮಾಡಬೇಕಿತ್ತು, ಆದರೆ ಬೇರೊಂದು ಯೋಜನೆಯಲ್ಲಿದ್ದಿದ್ದರಿಂದ ಅಜಯ್ ತಾವೇ ನಿರ್ಮಾಣ ಮಾಡಿದರು ಎಂದು ಉದಯ್ ಮೆಹ್ತಾ ತಿಳಿಸಿದ್ದಾರೆ.

ದಿಲ್ ವಾಲ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ್ದ ಅನಿಲ್, ಅಜಯ್ ರಾವ್ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇಬ್ಬರ  ಪ್ರತಿಭೆ ಹೊಂದಣಿಕೆಯಾಗಲಿದೆ ಎಂದು ನಿರ್ಮಾಪಕರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರಕಥೆ ಸಿದ್ಧವಾಗುತ್ತಿದ್ದು ಎಲ್ಲಾ ವರ್ಗದ ಪ್ರೇಕ್ಷಕರು ನೋಡಬಹುದಾದ ಸಿನಿಮಾ ಅಗಿರಲಿದೆ.  ಆಗಸ್ಟ್ 15 ರಂದು ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.

Write A Comment