ಮನೋರಂಜನೆ

ಬಾಹುಬಲಿ ಚಿತ್ರತಂಡದಿಂದ ವಿಶ್ವದ ಅತಿ ದೊಡ್ಡ ಪೋಸ್ಟರ್ ಬಿಡುಗಡೆ

Pinterest LinkedIn Tumblr

bahubaliನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರ ಬಾಹುಬಲಿ ದಾಖಲೆ ನಿರ್ಮಿಸಿದೆ. ಅದ್ದೂರಿ ಸೆಟ್ ಸೇರಿದಂತೆ ಹಲವು ವಿಷಯಗಳಲ್ಲಿ ದೇಶಾದ್ಯಂತ ಸುದ್ದಿಯಲ್ಲಿದ್ದ ಬಾಹುಬಲಿ ಚಿತ್ರ ತಂಡ ಈಗ ಪೋಸ್ಟರ್ ನಲ್ಲೂ ದಾಖಲೆ ನಿರ್ಮಿಸಿದೆ.

ವಿಶ್ವದ ಅತಿ ದೊಡ್ಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಬಾಹುಬಲಿ ಚಿತ್ರ ತಂಡ ಗಿನ್ನಿಸ್ ದಾಖಲೆ ನಿರ್ಮಿಸಿದೆ.  ಬಾಹುಬಲಿ ಚಿತ್ರತಂಡ ನಿರ್ಮಿಸಿರುವ ಪೋಸ್ಟರ್ 50 ,000 ಚದರ ಅಡಿ ಗಾತ್ರವಿದ್ದು ಕೇರಳದ ಕೊಚ್ಚಿನ್ ನಲ್ಲಿ ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಪ್ರಭಾಸ್, ತಮನ್ನಾ ಭಾಟಿಯಾ ಹಾಗೂ ಅನುಷ್ಕಾ ಶೆಟ್ಟಿ ಭಾಗವಹಿಸಿದ್ದರು.

ಬಾಹುಬಲಿ ಭಾರತೀಯ ಚಿತ್ರರಂಗದಲ್ಲೇ ಅತಿ ದುಬಾರಿ ವೆಚ್ಚದ ಸಿನಿಮಾ ಆಗಿದ್ದು, ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಸಹ ಆಗಿದೆ.

Write A Comment