ಮನೋರಂಜನೆ

ಲಂಚ ಸ್ವೀಕರಿಸುತ್ತಿದ್ದ ಮೂವರು ಸಿಎಸ್ ಕೆ ಆಟಗಾರರನ್ನು ರಕ್ಷಿಸಿದ ಶ್ರೀನಿವಾಸನ್: ಲಲಿತ್ ಮೋದಿ

Pinterest LinkedIn Tumblr

lalith-modi

ನವದೆಹಲಿ: ದಿನಕ್ಕೊಂದು ಹೊಸ ಬಾಂಬ್ ಸಿಡಿಸಿ ವಿವಾದಗಳ ಕೇಂದ್ರ ಬಿಂದುವಾಗಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಇಂದು ಐಸಿಸಿ ಚೇರ್ ಮನ್ ಎನ್ ಶ್ರೀನಿವಾಸನ್ ವಿರುದ್ಧ ಆರೋಪ ಮಾಡಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ನ ಮೂರು ಆಟಗಾರರನ್ನು ಐಸಿಸಿ ಅಧ್ಯಕ್ಷ ಎನ್ ಶ್ರೀನಿವಾಸನ್ ರಕ್ಷಿಸಿದ್ದಾರೆ ಎಂದು ಲಲಿತ್ ಮೋದಿ ದೂರಿದ್ದಾರೆ,

ಲಂಡನ್ ನಲ್ಲಿ ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲಲಿತ್ ಮೋದಿ, ನನಗೆ ಭಯವಿಲ್ಲದೆ ಜೀವನ ನಡೆಸಬಹುದು ಎನಿಸಿದಾಗ ಭಾರತಕ್ಕೆ ವಾಪಸಾಗುವುದಾಗಿ ಹೇಳಿರುವ ಲಲಿತ್ ಮೋದಿ, ಮೂವರು ಆಟಗಾರರನ್ನು  ರಕ್ಷಿಸಿರುವ ಶ್ರೀನಿವಾಸನ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಯಾವ ಕ್ರಮ ತೆಗೆದುಕೊಂಡಿದೆ ಎಂಬುದು ಇಡಿ ದೇಶಕ್ಕೆ ತಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ಎನ್ ಶ್ರೀನಿವಾಸ್ ನಂಬಲರ್ಹವಲ್ಲದ ವ್ಯಕ್ತಿಯಾಗಿದ್ದರೆ ದೇವರೇ ಬಂದು ಭಾರತವನ್ನು ಹಾಗೂ ಕ್ರಿಕೆಟ್ ಮತ್ತು ಕ್ರೀಡೆಗಳನ್ನು ರಕ್ಷಿಸಬೇಕು ಎಂದಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ನ ಮೂರು ಆಟಗಾರರು ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವಿಷಯ ಸಂಬಂಧ 2013 ರಲ್ಲಿ ಐಪಿಎಲ್ ಮುಖ್ಯಸ್ಥರಾಗಿದ್ದ ಲಲಿತ್ ಮೋದಿ ಯವರಿಂದ ಪತ್ರ ಬಂದಿರುವುದಾಗಿ ನಿನ್ನೆಯಷ್ಟೆ ಐಸಿಸಿ ಸ್ಪಷ್ಟಪಡಿಸಿದೆ,

Write A Comment